Friday, July 29, 2011

ಚುಟುಕು-ಚುಟುಕು

‘ಮುಕ್ತ ಮುಕ್ತ’ ಧಾರಾವಾಹಿಯಲ್ಲಿ IAS ಆಫೀಸರ್ (ನನ್ನ ಸೊಸೆಯ) ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿರುವ ಸುಷ್ಮಾ ಭಾರಧ್ವಜ (‘ಚುಕ್ಕಿ’ ಎನ್ನುವುದು ಇವರ ಪೆನ್ ನೇಮ್), ಎರಡು ತಿಂಗಳ ಹಿಂದೆ ಒಂದು ಸುಂದರವಾದ ಚುಟುಕನ್ನು ಬರೆದು (fwd sms ಅಲ್ಲ) SMS ಮಾಡಿದ್ದರು. ಅದಕ್ಕೆ ಪ್ರತಿಯಾಗಿ ನಾನೊಂದು ಚುಟುಕು ಬರೆದು ಅವರಿಗೆ ರವಾನಿಸಿದ್ದೆ. ಇಂದು ಬೇಡದ SMS ಗಳನ್ನೆಲ್ಲ ಡಿಲೀಟ್ ಮಾಡುತ್ತಿರುವಾಗ ಆ ಎರಡು ಚುಟುಕುಗಳು ಕಣ್ಣಿಗೆ ಬಿದ್ದವು. ಚೆಂದ ಅನಿಸಿದವು. ಅವನ್ನಿಲ್ಲಿ ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ.

ಸುಷ್ಮಾ ಭಾರಧ್ವಜರ ಚುಟುಕು.

ಕಪ್ಪು ಮುಸುಕಿನೊಳಗೆ
ಬಣ್ಣಬಣ್ಣದ ಕನಸು
ದಣಿವರಿಯದ ಭರವಸೆ
ಯ ರೆಕ್ಕೆಗಳನೇರಿ
ಎತ್ತೆತ್ತಲೋ ಹರಿದು
ಎತ್ತರೆತ್ತರ ಹಾರಿ
ಬಾನ ಚುಂಬಿಸಿ
ಬಣ್ಣದುಂಗುರವನೇ ನೀಡೆ
ಸೂರ್ಯನಪರಂಜಿಗೆ
ಕನಸಿನ ಬಣ್ಣದ ರತ್ನ
ಬೆಳಗಾಯಿತು
ಬಣ್ಣದ ಬೆಳಕಾಯಿತು!

ಪ್ರತಿಯಾಗಿ ನಾ ಬರೆದ ಚುಟುಕು

ಕಣ್ರೆಪ್ಪೆಯಡಿ ಹುಟ್ಟಿದ
ಕನಸು ರೆಪ್ಪೆಯನೇ
ರೆಕ್ಕೆಯಾಗಿಸಿಕೊಂಡು
ಪಟಪಟನೆ ಬಡಿದು ರೆಕ್ಕೆ
ಮುಗಿಲೇರಿ ನನಸಾದ ಕ್ಷಣ
ಮತ್ತೊಂದು
ಕನಸಿನ ಬಸಿರು
ಕಣ್ಣಾಲಿಯಲಿ...

21 comments:

Ramesh said...

ಕಣ್ಣಲ್ಲಿ, ಮನದಲ್ಲಿ ಸೂಕ್ಷ್ಮತೆ ಇದ್ದರೆ ಮಾತ್ರ, ಈ ರೀತಿಯ ಅದ್ಭುತ ಸಾಲುಗಳು ಸಾಧ್ಯ.. ಚೆನ್ನಾಗಿದೆ... ಆ ಸಾಲುಗಳಿಗೆ ನಿಮ್ಮ ಪ್ರತಿಕ್ರಿಯೆ ಕೂಡ ಸುಂದರ...

Anonymous said...

ತುಂಬಾ ಚೆನ್ನಾಗಿದೆ
ಸ್ವರ್ಣ

sandhya said...

ನಿಮ್ಮ ಚುಟುಕು ತು೦ಬಾ ಚನ್ನಾಗಿದೆ, ಕನಸು ಕಣ್ರೆಪ್ಪೆಯನ್ನು ರೆಕ್ಕೆಯನ್ನಾಗಿಸಿಕೊ೦ಡು ಪಟ ಪಟಿಸಿದಾಗ ಕಣ್ಣಲ್ಲಿ ಮತ್ತೊ೦ದು ಕನಸು ಕುಡಿ ಒಡೆಯುವುದು ಎ೦ತಹ ರಮ್ಯ ಕಲ್ಪನೆ... ಇಷ್ಟ ಆಯಿತು...

sunaath said...

ದ್ವಂದ್ವ ಚುಟುಕುಗಳು ಸೊಗಸಾಗಿವೆ. ಕನಸು ಕಣ್ರೆಪ್ಪೆಯನ್ನೇ ರೆಕ್ಕೆ ಮಾಡಿಕೊಂಡಿತು ಎನ್ನುವ ಕಲ್ಪನೆಯಿಂದ ಪುಳಕಿತನಾದೆ.

ಸೀತಾರಾಮ. ಕೆ. / SITARAM.K said...

ತೀವ್ರ ಧನಾತ್ಮಕ ಭಾವಾಭಿವ್ಯಕ್ತಗಳು

ಜಲನಯನ said...

ಜಯಕ್ಕಾ...ನಿಮ್ಮ ಮತ್ತು ಸುಷ್ಮಾ ಇಬ್ಬರ ಕವನಗಳ ಪ್ರತಿಕ್ರಿಯೆರೂಪ ನನ್ನ ಈ ಪುಟ್ಟ ಕವನ....

ಕಪ್ಪು ಹೆದರಿತು
ಕಣ್ಣ ಕಾಡಿಗೆಯ ಕಂಡು
ಕಾಮನಬಿಲ್ಲು ಮರೆಯಾಯಿತು
ಅವಳಾ ಹುಬ್ಬಿನಂದವ ಕಂಡು
ದುಃಖಕೂ ಅತಿ ಹರ್ಷಕ್ಕೂ
ಉಕ್ಕುವವಳ ಕಣ್ಣ ಹನಿಗೆ
ನಾಚಿ ನೀರಾಯಿತು
ಮುಂಗಾರು ಮಳೆಹನಿ...

Unknown said...

ಜಯಲಕ್ಷ್ಮಿ,ನಿಮ್ಮ ಚುಟುಕ ಸೂಕ್ಷ್ಮ ಮತ್ತು ಒಳ್ಳೆಯ ಕವನದ ಮೊನಚು ಉಳ್ಳದ್ದು.ಕಣ್ಣಿನ ರೆಪ್ಪೆ ಮುಚ್ಚುವ ಕನಸು ಕಾಣುವ ಸುಖ ನನಸಿನಲ್ಲಿ ಇರುವುದಿಲ್ಲ.ಹೊಸಜೀವದ ಹುಟ್ಟು ಸುಖದ ಒಂದು ಸುಂದರ ಕ್ಷಣ.

Jayalaxmi said...

ರಮೇಶ್ ಅವರೇ, ನಿಮ್ಮ ಮೆಚ್ಚುಗೆಯನ್ನು ಸುಷ್ಮಾ ಅವರಿಗೂ ರವಾನಿಸಿದ್ದೇನೆ.ನನ್ನಿ. :)

Jayalaxmi said...

ಸ್ವರ್ಣ ಅವರೇ, ಥ್ಯಾಂಕ್ಸ್. :)

Jayalaxmi said...

ನೀವು ಇಷ್ಟಪಟ್ಟಿದ್ದು ಕಂಡು ಖುಷಿ ಆಯ್ತು ಸಂಧ್ಯಾ. ನನ್ನಿ. :)

Jayalaxmi said...

ಸುನಾಥ್ ಕಾಕಾ, ನಿಮ್ ಕಮೆಂಟ್ ಇಲ್ದ ಇದ್ದ್ರ, ಖರೇನ ಭಣ ಭಣಾ ಅನಸ್ತದ.. ಥ್ಯಾಂಕ್ಸ್ ರೀ ಕಾಕಾ.:)

Jayalaxmi said...

ಸೀತಾರಾಮ್ ಸರ್, ನನ್ನಿ ಮೆಚ್ಚಿಕೊಂಡಿದ್ದಕ್ಕೆ. :) :)

Jayalaxmi said...

ಆಝಾದ್ ಭಾಯ್,
"ದುಃಖಕೂ ಅತಿ ಹರ್ಷಕ್ಕೂ
ಉಕ್ಕುವವಳ ಕಣ್ಣ ಹನಿಗೆ
ನಾಚಿ ನೀರಾಯಿತು
ಮುಂಗಾರು ಮಳೆಹನಿ..."
ಸೂಪರ್!!! :) :)

Jayalaxmi said...

ಅನಾಮಿಕ ಸ್ನೇಹಿತೆ/ತ, ಚಂದದ ವಿಮರ್ಶೆ ನಿಮ್ಮದು. ಇಷ್ಟಪಟ್ಟಿದ್ದಕ್ಕೆ, ವಿಮರ್ಶೆಗೆ ನನ್ನಿ. :)

ದಿನಕರ ಮೊಗೇರ said...

tumbaa chennaagide madam....

eradU chuTuku chennaagide....

shivu.k said...

ಜಯಲಕ್ಷ್ಮಿ ಅಕ್ಕ,
ಸೂಕ್ಷ್ಮತೆಗಳನ್ನು ಗುರುತಿಸುವ ಎರಡು ಚಿಟುಕುಗಳು ತುಂಬಾ ಚೆನ್ನಾಗಿವೆ. ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್

Jayalaxmi said...

ನನ್ನಿ ದಿನಕರ್. :) :)

Jayalaxmi said...

ನನ್ನಿ ಶಿವು. :) :)

B.A.Viveka Rai said...

ಜಯಲಕ್ಷ್ಮಿ ,ನಿಮ್ಮ ಚುಟುಕು ,ಕಣ್ಣ ರೆಪ್ಪೆಯ ಕ್ಷಣದ ಸ್ಪಂದನದ ಕನಸಿನ ಮಿಂಚು.

B.A.Viveka Rai said...

ಜಯಲಕ್ಷ್ಮಿ,ನಿಮ್ಮ ಚುಟುಕು ,ಕಣ್ಣ ರೆಪ್ಪೆಯ ಕ್ಷಣದ ಮಿಟುಕಿನ ಕನಸಿನ ಮಿಂಚು.

Jayalaxmi said...

Thanks Vivek Sir. :)