Sunday, April 3, 2016

ಬದುಕ ಬದುವಿಗಂಟಿ

ಆಗೊಮ್ಮೆ ಈಗೊಮ್ಮೆ
ತುಂಬಿ ಬರುತ್ತದೆ ಮನಸು
ಮೇಲೆ ತೇಲುವ ಎಲ್ಲವನ್ನೂ
ಅಚ್ಚುಕಟ್ಟಾಗಿ ಹೊಂದಿಸಿಡುತ್ತೇನೆ
ಶಬುದಗಳ ಪಳಿಯ ಮೇಲೆ
ಫಳಫಳ ಫಳಗುಟ್ಟೆ ಗಿಲೀಟು
ಹೊಳೆಯದೆ ಹೋದರೆ ಸವಕಲು!
ಹೊಳೆದಿದ್ದೂ ನಕಲಿ ಹೊಳೆಯದಿದ್ದುದ್ದೂ
ಶಬುದ ಸಡಿಲುಗೊಂಡು ಎಲ್ಲವೂ
ಹೊಳೆಯಲಿ ತೊಳೆದ ಹುಣಸೆಹಣ್ಣು
ಖಾಲಿ ಖಾಲಿ ಮನಸಿನ ತಳ ಭಾರ
ಮತ್ತಷ್ಟು ಮೇಲೆ ತೇಲಬೇಕೆಂದರೆ
ಮತ್ತೊಮ್ಮೆ ಮನಸು ತುಂಬಿಬರಬೇಕು
ಅದಕಾಗಿ ಮತ್ತೆ ಬದುಕ ಬದುವಿಗಂಟಿ
ದ ಹೊಳೆಯಗುಂಟ ಹೊಳೆಯಾಗಿ
ದಾರಿಯುದ್ದಕ್ಕೂ ಹಸಿರು ಬೆಳೆದು
ಉಸಿರು ತುಂಬಿಕೊಳ್ಳಬೇಕು ಮನಸು
ಹಗುರಾಗಿ ಮತ್ತೆ ತೇಲ...

- ಜಯಲಕ್ಷ್ಮೀ ಪಾಟೀಲ್
(೧೩ ಎಪ್ರಿಲ್ ೨೦೧೬)