Tuesday, May 27, 2008

ನಾನು ಅಂದ್ರೆ...

ನಮಸ್ಕಾರ.
ಹೌದು ಹೇಳಿಕೊಬೇಕೆನಿಸ್ತಿದೆ ,ಹತ್ತು ಹಲವು ವಿಚಾರಗಳನ್ನು. ಮನದಲ್ಲೇಳುವ ಅಲ್ಲೋಲ ಕಲ್ಲೋಲಗಳನ್ನು. ಅದಕ್ಕೂ ಮೊದಲು ನನ್ನ ಕುರಿತು ಸ್ವಲ್ಪದರಲ್ಲಿಯೇ ಹೇಳಿ ಮುಗಿಸಲೇ? ನನ್ನ ಅತ್ಮಿಯರೆಲ್ಲರ ಪ್ರಕಾರ ನಾನು ಎಲ್ಲವನ್ನು ವಿಪರೀತ ಮಾಡುತ್ತೇನೆ. ಎಲ್ಲ ಓವರ್ ಓವರ್!! ಅಂದ್ರೆ ಅತೀ ಅತೀ !!!! ನಿಜ. ಸಂಬಂಧಗಳ ಬಗ್ಗೆ ಗೊಂದಲಗಳಿವೆ, ಸಮಾಜದ ವಿಪರೀತಗಳ ಬಗ್ಗೆ ಹೇವರಿಕೆ ಇದೆ, ಮರ್ಯಾದೆಯ ಮುಖವಾಡದ ಕುರಿತು ಅಸಹ್ಯವಿದೆ ಹಾಗೆಯೇ ಮಗುವಿನ ಮುಗ್ಧತೆ ಮುದ ನೀಡುತ್ತೆ, ಕಾಣದ ಭವಿಷ್ಯದ ಬಗ್ಗೆ ಕೌತುಕವಿದೆ, ಪ್ರಕೃತಿಯ ರಮ್ಯತೆ ಮೋಡಿ ಮಾಡುವುದರ ಜೊತೆಗೆ ಅಚ್ಚರಿಗೊಳಿಸುತ್ತೆ, ಮಳೆ, ಸಂಗೀತದ ತಂಪು ಇಂಪು ಇಷ್ಟ, ಗೆಳೆತನ ಇಷ್ಟ. ಮುಗಿಲಿನಲ್ಲಿ ನಾನಾ ಆಕಾರ ತಾಳುವ ಮೋಡಗಳು ತುಂಬಾ ಇಷ್ಟ, ಬಿಳಿ, ಕೆಂಪು, ಕಪ್ಪು ಬಣ್ಣಗಳು ಇಷ್ಟ . ರಂಗಭೂಮಿ, ಟಿ ವಿ ಸಿರಿಯಲ್ಲುಗಳಲ್ಲಿ ಮತ್ತು ಕಲಾತ್ಮಕ ಚಿತ್ರಗಳಲ್ಲಿ ನಟನೆ ಇಷ್ಟ . ಬದುಕಲ್ಲಿ ನಟನೆ ಕಷ್ಟ ಕಷ್ಟ... ಸಾಕಲ್ಲ ನನ್ನ ಬಗ್ಗೆ ಕೊಚ್ಚಿಕೊಂಡಿದ್ದು?... ಮತ್ತೆ ಬರೀತೀನಿ. ಬರಲೇ...

5 comments:

Unknown said...

Neevu baredirodella nija..adara jothe innashtu seerisabeekide. nimma 'ati ati'yannu anubhavisuva adrushtavantha gelatiyaralli obbalaagiruvudu santoshada vishaya. Ashtondu preeti..ashtondu concern..abba adhege? ondu salahe..swalpa kocchikolllodanna kaliyiri..ee kaladalli nammanna naave market maadkobeku. Neevu eega iro ashtu vineetharaagirodu out of style..thileeteene jaya..

Ahalya said...

lagoo lagoona bareeyavva ! adesht hoth maadtee matta !
Ahalya

Anonymous said...

ಬದುಕಿನ ನಾಟಕ ಬಹಳ ಸುಲಭ. ಅದರಲ್ಲಿ ಒಬ್ಬರು ಎಷ್ಟು ಮಗ್ನರಾಗಿರ್ತಾರೆ ಅಂದ್ರೆ ಅವರಿಗೆ ಪಾತ್ರಯವುದು ತಾನು ಯಾರು ಎಂಬುದರ ಅರಿವು ಸಿಗುವುದು ಕಷ್ಟ. ಮನಸ್ಸು ಮಾಯಾಜಾಲವಾಡಿಸ್ತದೆ, ಜೀವೆನದಲ್ಲಿ ಮಾಯೆ ಮಾಡ್ತದೆ :)

Veena Shivanna said...

Jayalakshmi avare,
nanna friend nimma blog address kotru. nange nimmanna jayalaxmi annokinta manglathe andre enO tumba jaasti gootu annisutte.
nimmantaha kalaavidaranna naavu bari tere melashte nodtheevi, neevu maado paatra nodi ade namma mansalli bimbitavaagibidatte.
aadru nimma manglatte paatradalliruva gattu nange tumba ishta. aa paatrada bagge naanu estond sala maneli, friends jothe maathadidvi.
Orkut nalli ondu mukta mukta gumpu ide, aa dina neevu kalyaani mukhakke 2 saavira bisaaktheeni antha bydralla, sumaar charche naditu.
nange nimma acting tumba ishta, infact acting annsode illa. tumba natural aagide.. naanu eegashte obba magana taayi aagideeni. magana jothe iro attachment, avanu yaarno maduve aagtheeni andaaga aago taLamaLa ella esta chennagi torsidaare TNS avaru. onthara nammanta gand maga iro taayandrige ondu daarideepa aa paatra, hegirbeku annokinta hegirbaardu antha heLkodutte :-) aadre ondanthu nija, maklu mele entha posessiveness belskondbidtheevalva? sose aag barvlu nammana dweshiso ashtu. kalyaani is a gem of a sose that way. nodona avalu nimma mansgelthaala antha.

nann office computer nalli kannada font irlilla so kanglish nalli comment barde. dayavittu adjust maadkolli. nimma blog odi mathe comment baritheeni.

namaskaara
Veena

Jayalaxmi said...

ನಮಸ್ಕಾರ ವೀಣಾ, ನಿಮಗೂ ನಿಮ್ಮನ್ನು ನನ್ನ ಬ್ಲಾಗ್ ಮುಖಾಂತರ ನನಗೆ ಪರಿಚಯಿಸಿದ ನಿಮ್ಮ ಸ್ನೇಹಿತರಿಗೂ ನನ್ನಿ(ಥ್ಯಾಂಕ್ಸ್).ಮನೋರಂಜನೆಗೆ ಸೀಮಿತವಾದ ಮಾಧ್ಯಮವನ್ನು ಹೀಗೆ ನಮ್ಮ ಜೀವನಕ್ಕೆ ಹೋಲಿಸಿಕೊಂಡು ನೋಡಿಕೊಳ್ಳುವಂತೆ ಮಾಡುತ್ತಿರುವಂತಹ ಟಿ ಎನ್ ಸೀತಾರಾಮ್ ಸರ್ ಅವರಂತಹ ಸಂವೇದನಾಶೀಲ ನಿರ್ದೇಶಕರು ಹೆಚ್ಚಾಗಿ ಸಿಗುವುದು ಕನ್ನಡದಲ್ಲೆ(ಟಿವಿ ಧಾರಾವಾಹಿಯ ಮಟ್ಟಿಗೆ) ಅನ್ನುವುದು ಹೆಮ್ಮೆಯ ವಿಷಯ.ನಿಮ್ಮ ಮಗ ಇನ್ನೂ ೧ ವರ್ಷದ ಕಂದ. ನನ್ನ ಕಂದನಿಗಾದರೊ ೧೬ ವರ್ಷ! ಅವನ ಮದುವೆಗೆ ಇನ್ನೂ ಕನಿಷ್ಟ ೧೦-೧೨ ವರ್ಷ ಟೈಮಿದೆ, ನೋಡಬೇಕು ನಾನು ಆಗ ಸೊಸೆಯ ವಿಚಾರದಲ್ಲಿ ಹೇಗೆ ವರ್ತಿಸುತ್ತೇನೆ ಅಂತ! :-) ನಿಮ್ಮ ಪರಿಚಯವಾದದ್ದು ನಿಜಕ್ಕೂ ಸಂತಸ ತಂದಿತು.