Wednesday, January 30, 2013

ಹೀಗೊಂದು ಮನೆಯ ಸೋದರ ಸೋದರಿಯರು.ನಮ್ಮೆಲ್ಲರ ಮೆಚ್ಚಿನ ಬರಹಗಾರ್ತಿ, ಪತ್ರಕರ್ತೆ ಚೇತನಾ ತೀರ್ಥಹಳ್ಳಿಯವರ,‘ಅಮ್ಮನ ಜೀವನ ಶ್ರದ್ಧೆ ಮತ್ತು ಶ್ರಾದ್ಧ’ ಎನ್ನುವ ಲೇಖನ ವಿಜಯ ಕರ್ನಾಟಕದಲ್ಲಿ ಬಂದಾಗ, ಅದನ್ನು ಓದಿ ನಮ್ಮನೆಯ ಈ ವಿಷಯವನ್ನು ಅವರೊಂದಿಗೆ ಅಂತಃಪುರದಲ್ಲಿ ಹಂಚಿಕೊಂಡಿದ್ದೆ. ಅದನ್ನು ಈಗ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ.


ನಮ್ಮನೇಲೂ ಇದರ ಮೇನಿಯಾ ಜೋರೀಗ! ಈಗ ತಿಂಗಳ ಹಿಂದೆ ನನ್ನ ಮೂರನೇ ಸೋದರ ಮಾವ (ನಾಲ್ಕು ಜನ ಸೋದರ ಮಾವಂದಿರು ನನಗೆ) ನನಗೆ ಫೋನ್ ಮಾಡಿ, ಸತ್ತ ನಂತರ ಹೇಗೆ ಮತ್ತು ಎಲ್ಲಿ ದೇಹ ದಾನ ಮಾಡಬೇಕು ವಿವರ ಹೇಳು ಅಂದ. ನಾನು ಹೇಳಿದ ನಂತರ, ಹೋಗಿ ಫಾರ್ಮ್ ತಂದು ಮತ್ತೆ ಫೋನ್ ಮಾಡಿದ. ಸಹಿಗಾಗಿ ನನ್ನಮ್ಮನ ಹತ್ತಿರ ಹೋಗುವುದಿತ್ತು ಅವನಿಗೆ. ಆದರೆ ಆಕೆ ಹೆದರಿಕೊಂಡಾಳು ಅನ್ನೋ ಆತಂಕ, ಸೊ ತಾನೇ ನಿಧಾನವಾಗಿ ನನ್ನಮ್ಮನಿಗೆ ಅಂದರೆ ತನ್ನಕ್ಕನಿಗೆ ವಿಷಯ ತಿಳಿಸಿ, ಪುಸಲಾಯಿಸಿ ಅವಳಿಂದ ಸಹಿ ತೆಗೆದುಕೊಳ್ಳುವುದು ಅವನ ಇರಾದೆ. ಅವನು ಹೀಗೆ ಹೇಳಿದ್ದಕ್ಕೆ ಹಂಗೇನಾಗೊಲ್ಲ ಎಂದು ನಾನು ನಕ್ಕೆ. ನಮ್ಮಕ್ಕನ ಸ್ವಭಾವ ನನಗೊತ್ತು ಅಂದ, ತನಗೆ ನನಗಿಂತ ಆಕೆ ಚೆನ್ನಾಗಿ ಗೊತ್ತು ಎನ್ನುವ ಗತ್ತಿನಲ್ಲಿ. ನಾನು, "ನಿನಗ ಅಕ್ಕ ಆದ್ರ ನನಗಕಿ ನಮ್ಮವ್ವ" ಅಂದೆ. ಸಿಟ್ಟು ಮಾಡಿಕೊಂಡು ಫೋನ್ ಕುಕ್ಕಿದ. ನಾವಿಬ್ಬರೂ ಅಮ್ಮ ನಮಗೆಷ್ಟು ಆಪ್ತ ಎನ್ನುವುದನ್ನು, ನಮ್ಮ ನಮ್ಮ ಪ್ರೀತಿಯನ್ನು ತೋರಿಸಿಕೊಟ್ಟ ರೀತಿಯಿದು. ನಾನು ಅಮ್ಮನ ಹತ್ತಿರ ಈ ವಿಷಯವನ್ನು ಹೇಳದೆ ಸುಮ್ಮನಾದೆ.


ಅಮ್ಮನ ಹತ್ತಿರ ಹೋದ ನನ್ನ ಮಾವ, ಅಳಕುತ್ತಾ, "ಇದನ್ನ ನೋಡಬೇ" ಎಂದು ಅಮ್ಮನ ಎದುರು ಫಾರ್ಮ್ ಹಿಡಿದಿದ್ದಾನೆ. ಕನ್ನಡಕ ಹಾಕಿಲ್ಲದ ಅಮ್ಮನಿಗೆ ಅದು ಯಾವುದೋ ಫಾರ್ಮ್ ಅನ್ನುವುದು ಮಾತ್ರ ಕಂಡಿದೆ. ಆದರೂ ಅಮ್ಮನ ಬಾಯಿಂದ ಹೊರಟ ಮಾತು, "Body donate ಮಾಡಾಕತ್ತೀ ಏನೋ? ಭಾರಿ ಬೆಸ್ಟ್ ಕೆಲ್ಸಾ ಮಾಡಾಕತ್ತಿ ನೋಡ್"... ಅಮ್ಮನಿಗಾಗುತ್ತೆ ಅಂದುಕೊಂಡ ಶಾಕ್ ಮಾಮಾಗೀಗ! ಹೂಂ ಅನ್ನುತ್ತಾ ತಟ್ಟನೆ ಅಮ್ಮನ ಕಾಲು ನಮಸ್ಕಾರ ಮಾಡಿದನಂತೆ ನನ್ನ ಮಾಮಾ.


ಅಮ್ಮಂಗೆ ಇವತ್ತಿಗೂ ಅಚ್ಚರಿಯೇ, ಯಾವ ಫಾರ್ಮ್ ಅನ್ನೋದೂ ಗೊತ್ತಿಲ್ಲದೆ ತಾನು ಯಾಕೆ ಹಾಗ್ ಮಾತಾಡಿದೆ ಅಂತ! ಸರಿ, ಅಮ್ಮ ಸಹಿ ಮಾಡುವ ಮೊದಲು ಒಮ್ಮೆ ಎಲ್ಲರಿಗೂ ವಿಷಯ ತಿಳಿಸುವುದೊಳಿತು ಎಂದುಕೊಂಡು ನನ್ನ ದೊಡ್ಡ ಮಾವನಿಗೆ ಈ ಮಾವ ಫೋನ್ ಮಾಡಿದ್ರೆ ಅವನು ಹೇಳಿದ್ದು, "ಎಂಥಾ ಬಂಗಾರದಂಥಾ ಕೆಲ್ಸಾ ಮಾಡಕತ್ತೀಯೋ ಈರಣ್ಣ, ನಮಗ ಚೊಲೋ ಹಾದಿ ಹಾಕ್ಕೊಟ್ಟಿ ಬಿಡು. ನಾಳೆ ಸತ್ ಮ್ಯಾಲೆ, ಯಾವ್ದೋ ಸುಡಗಾಡದಾಗ ಹುಗದು, ಮುಂದೊಂದಿನ ಅದ ಜಾಗಾದಾಗ ನಮ್ಮ್ ಎಲುಬೆಲ್ಲಾ ಆರ್ಸಿ ದಾರಿಗ್ ಒಗದು, ಇನ್ನ್ಯಾರ್ನೋ ಅಲ್ಲಿ ಹೂಳಿ, ಇಲ್ಲಾ ಮನಿ ಕಟ್ಟಿ.... ಯಾರಿಗ್ ಬೇಕಪಾ ಸತ್ ಮ್ಯಾಲೂ ದಿಕ್ಕೇಡ್ ಆಗೂದು! ನಾನೂ ಬಾಡಿ ಡೊನೇಟ್ ಮಾಡ್ತೀನಿ. ನಿನ್ನ ಫಾರ್ಮಿಗೆ ಸೈನ್ ಮಾಡ್ತೀನಿ, ನಾನ ಅಲ್ಲಿ ಬರ್ಬೇಕೋ, ಇಲ್ಲಿಂದಾನ ಮಾಡಿ ಕಳಿಸಿದ್ರ ನಡೀತೈತೋ?" ಅಂದನಂತೆ. ಅಮ್ಮ ಮತ್ತು ಈರಣ್ಣ ಮಾಮಾ ಫುಲ್ ಖುಷ್!


ಮುಂದೆ ನನ್ನ ಎರಡನೆಯ ಮಾಮಾಗೆ ಫೋನು. ಅವ್ನು, " ಎಂಥಾ ಐಡಿಯಾ ಕೊಟ್ಟೆಪಾ ನೀ, ನಾ ನಾಳೇ ಹೋಗಿ ಫಾರ್ಮ್ ತರ್ತೀನಿ." ಅಂದನಂತೆ.


ನನ್ನ ದೊಡ್ಡ ಚಿಕ್ಕಮ್ಮ ವಿಷಯ ತಿಳಿದು, "ಇಗಾ, ನಾ ನಿನ್ನ್ಯರೇ ಇದನ್ನs ಅನ್ಕೋಳಾಕತ್ತಿದ್ದೆ ನೋಡು. ಒಬ್ಬರ ಮಣ್ಣಿಗ್ ಹೋಗಿದ್ದೆ, ಝ್ಹಳಾ ಝ್ಹಳಾ ಬಿಸಲೀಗೆ ಸುಸ್ತಾದ ಸೇರಿದ್ ಮಂದಿ, ಯಾವಾಗರೇ ಮಣ್ಣಾಕ್ಕೈತೋ ಅಂತ ಬೈಕೋತ ಹೆಣದ್ ಹಿಂದ್ ಹೊಂಟಿದ್ದ್ರು. ಅದನ್ನ ನೋಡಿ, ನಾಳೆ ನಾ ಸತ್ರೂ ಮಂದಿ ಹಿಂಗs ಅಂದ್ರ... ಅಂತನಿಸಿ, ಹಿಂಗ್ ಅನಸ್ಕೊಳ್ಳೊ ಬದಲು, ಯಾವ್ದರ ದವಾಖಾನಿಗೆ ಕೊಟ್ಟ ಬಿಡ್ರಿ ನನ್ನ ದೇಹಾನ ಅಂತ ಮಕ್ಕಳಿಗೆ ಹೇಳಬೇಕು ಅನ್ಕೊಂಡೆ. ಇವತ್ ನೋಡಿದ್ರ ನೀನೂ ಅದನ್ನ ಅಂತಿ. ಭಾರಿ ಚೊಲೊ ಕೆಲ್ಸಾ ಮಾಡಾಕತ್ತಿ, ಖುಷಿ ಆತ್ ನನಗ" ಅಂದ್ಲಂತೆ.


ಸಣ್ಣ ಚಿಕ್ಕಮ್ಮ, "ಏ ನನಗೂ ಒಂದು ಫಾರ್ಮ್ ತೊಗೊಂಡ್ ಬಾರೋಫಾ" ಅಂದ್ಲಂತೆ.


ಕೊನೆಯ ಅಂದರೆ ನನ್ನ ನಾಲ್ಕನೆಯ ಮಾವ ಮಾತ್ರ, "ಹೋಗೋ ಮಾರಾಯ, ಇನ್ನಾ ಮಕ್ಕಳ ಮದವಿ ಮಾಡಬೇಕೂ, ಮೊಮ್ಮಕ್ಕಳನ್ ನೋಡಬೇಕೂ, ಈಗ ಇದೇನ್ ಹಚ್ಚಿ ಹೋಗ್" ಅಂದ್ನಂತೆ.


ನಮ್ಮಮ್ಮ ಅಂತಿದ್ಳು, "ಅಂವಾ ಇನ್ನಾs ಸಣ್ಣಾಂವ್ ನೋಡು,ಅದಕ ಹಂಗಂತಾನ, ಮುಂದ್ ನೋಡ್ತಿರು ಬೇಕಾರ, ಅವ್ನೂ ಗ್ಯಾರಂಟಿ ಬಾಡಿ ಡೊನೇಟ್ ಮಾಡ್ತಾನ" ಅಂತ.


ಮುಗಲ್ ಮ್ಯಾಲಿ ಕುಂತ್ ಇದನ್ನೆಲ್ಲಾ ಕೇಳಿಸ್ಕೊಂಡ ಬಾದರದಿನ್ನಿ ಗೌರಕ್ಕ- ರುದ್ರಗೌಡ ದಂಪತಿ, ತಮ್ಮ ಮಕ್ಕಳ ಈ ನಿರ್ಧಾರ ಕಂಡು ಭಾಳ್ ದಿನದ ಮ್ಯಾಲೆ ಖುಷೀಲೇ ಕುಣದ್ಯಾಡಿರೂದ್ರಾಗ ಅನಮಾನನs ಇಲ್ಲ!!

ಮಧ್ಯದ ಸಾಲಲ್ಲಿ ಕುಳಿತವರು.

Tuesday, January 8, 2013

ಜೀವನದಿ...ಹುಚ್ಚು ನದಿಗಳಿವು
ಓಡಿಯೇ ಓಡುತ್ತವೆ
ಸಾಗರದೆಡೆಗೆ!
ಇಳುಕಲಂತೆ ಓಟವಂತೆ
ಮೋಡಿಯಂತೆ 
ಮಿಲನ ಸಾರ್ಥಕತೆಯಂತೆ!!
ಎಂಥಾ ನಿಯತ್ತಂತೀರಿ
ಇವುಗಳ ಗಮ್ಯ ಕೇವಲ
ಸಾಗರ ಮಾತ್ರ
ಜುಳುಜುಳು ಜುಳುಜುಳು
ಜುಳುಜುಳು... 
ಮಾರ್ಗ ಮಧ್ಯ
ಲಕ್ಷ ಲಕ್ಷ
ಜೀವಗಳಿಗೆ ಒಡಲಾಧಾರ
ಹುಚ್ಚು ನದಿಗಳು!
ಒಂಟಿಯಾಗಿದ್ದಾಗ ಇದ್ದ
ಅಮೃತ ಸ್ವಾದ
ಸಾಗರ ಸೇರಿದೊಡನೆ ನಿಃಸ್ವಾದ
ಸ್ವಂತಿಕೆ ಮತ್ತು ಇರುವಿಕೆ
ಎರಡೂ ಶಿವನ ಪಾದ!

(2008ರ ಕೊನೆಯಲ್ಲಿ ಮುಂಬೈನ ‘ಸೃಜನಾ’ಬಳಗದಿಂದ ಡಾ. ತಾಳ್ತಜ್ಜೆಯವರಿಗೆ ಗೌರವಪೂರ್ವಕ ನುಡಿನಮನ.  ಅದಕ್ಕಾಗಿ ಬರೆದ ಕವನವಿದು.)

ಕನಸಿನ ಬಾಲೆಯ ಮನದರ್ಪಣ - ನೀಲ ಕಡಲ ಬಾನು                  PÀ£À¹£À ¨Á¯ÉAiÀÄ ªÀÄ£ÀzÀ¥Àðt - ¤Ã® PÀqÀ® ¨Á£ÀÄ
                                                    -ಮಮತಾ ರಾವ್. ಮುಂಬೈ
                                                                                                                     (29-11-2008)

ªÀÄÄA§¬Ä PÀ£ÀßrUÀjUÉ dAiÀÄ®Që÷ä ¥Ánïï CªÀgÀÄ vÀªÀÄä §ºÀĪÀÄÄR ¥Àæw¨sÉ, ¸ÀÈd£À²Ã®vÉ ºÁUÀÆ DwäÃAiÀÄ ªÀåQÛvÀé¢AzÁV §ºÀÄ ¥ÀjavÀgÀÄ.. ¸Àé®àPÁ® ªÀÄÄA§¬ÄAiÀÄ°è ªÁ¸ÀªÁVzÁÝUÀ dAiÀÄ®Që÷ä CªÀgÀÄ ªÀÄÄA§¬Ä PÀ£ÀßqÀ ¸ÁA¸ÀÌöÈwPÀ ZÀlĪÀnPÉUÀ¼À°è ¥ÀæªÀÄÄR ¥ÁvÀæ ªÀ»¸ÀÄwÛzÀݪÀgÀÄ. ªÀÄÄA§¬Ä gÀAUÀ¨sÀÆ«ÄAiÀÄ°è ¸ÀQæÃAiÀĪÁV ¥Á®ÄUÉƼÀÄîwÛzÀ FPÉ vÀªÀÄä C©ü£ÀAiÀÄPÁÌV ºÁUÀÆ GvÀÛªÀÄ ¤zÉðñÀ£ÀPÁÌV ºÀ®ªÁgÀÄ §ºÀĪÀiÁ£ÀUÀ¼À£ÀÄß, ¥Àæ±À¹ÛUÀ¼À£ÀÄß ¥Àr¢ದ್ದಾರೆ. eÉÆvÉUÉ EªÀgÀÄ GzÀAiÉÆãÀÄäR ¯ÉÃRQAiÀÄÆ DVzÀÄÝ, ¸ÀÈd£Á - ªÀÄÄA§¬Ä PÀ£ÀßqÀ ¯ÉÃRQAiÀÄgÀ §¼ÀUÀzÀ PÁAiÀÄðzÀ²ðAiÀiÁVದ್ದಾಕೆ. ¸ÀÈd£Á §¼ÀUÀzÀªÀgÀÄ 2006gÀ°è ¨É¼ÀQUÉ vÀAzÀ `PÀxÉ ºÉüÉÃ`- J£ÀÄߪÀ PÀxÁ¸ÀAPÀ®£ÀzÀ°è dAiÀÄ®Që÷äAiÀĪÀgÀÄ §gÉzÀ - `ªÀiÁ¢AiÀÄzÀÄ PÀxÉAiÉÄ£À߯ÉÃ` PÀxÉAiÀÄÄ NzÀÄUÀgÀ UÀªÀÄ£À ¸É¼É¢ದೆ. ªÀÄÄA§¬ÄAiÀÄ°è £ÀqÉAiÀÄÄwÛzÀÝ PÀ«UÉÆö×UÀ¼À°è  EªÀgÀ PÀ«vÉUÀ¼ÀÄ F ªÉÆzÀ¯Éà ªÉÄZÀÄÑUÉ ¥ÀqÉ¢zÀݪÀÅ. ¸ÀzsÀåPÉÌ ¨ÉAUÀ¼ÀÆj£À°è £É¯É¹ QgÀÄvÉgÉ-gÀAUÀ¨sÀÆ«ÄAiÀÄ°è d£À¦æAiÀÄvÉ UÀ½¹gÀĪÀ EªÀgÀÄ §gÉzÀ LªÀvÉÆÛAzÀÄ PÀ«vÉUÀ¼À£ÉÆß¼ÀUÉÆAqÀ `¤Ã® PÀqÀ® ¨Á£ÀÄ ` PÀªÀ£À¸ÀAPÀ®£ÀªÀÅ ¨É¼ÀQUÉ §A¢gÀĪÀÅzÀÄ ¤dPÀÆÌ ¸ÀAvÉÆõÀzÀ ºÁUÀÆ C©ü£ÀAzÀ¤ÃAiÀÄ ¸ÀAUÀw.
   F ¸ÀAPÀ®£ÀzÀ°ègÀĪÀ LªÀvÉÆÛAzÀÄ PÀ«vÉUÀ¼À°è PÉ®ªÀÅ FUÁUÀ¯Éà §ºÀĪÀiÁ£ÀUÀ¼À£ÀÄß, ¥Àæ±À¹ÛUÀ¼À£ÀÄß ¥ÀqÉ¢ªÉ J£ÀÄߪÀÅzÀÄ UÀªÀĤ¸À¨ÉÃPÁzÀ ¸ÀAUÀw. `ºÀQÌ` PÀªÀ£ÀPÉÌ zÀ.gÁ ¨ÉÃAzÉæ ¥Àæ±À¹Û(ªÀÄÄA¨É¼ÀPÀÄ PÀ£ÀßqÀ §¼ÀUÀ-ªÀÄÄA§¬Ä); `¸ÀªÀÄÄzÀæ` PÀªÀ£ÀPÉÌ gÉÆÃmÁæPïÖ PÀè¨ï PÉÆÃl, ¸Á°UáæªÀÄzÀªÀjAzÀ ¥Àæ±À¹Û;  `¤Ã® PÀqÀ® ¨Á£ÀÄ` PÀ«vÉUÉ CxÀtÂAiÀÄ «ªÉÆÃZÀ£À ¥ÀæPÁ±À£ÀzÀªÀjAzÀ zÀÄ.¤A. ¨É¼ÀUÀ° ¸Á»vÀå ¥Àæ±À¹Û; ºÁUÀÆ `£À£ÉÆß¼ÀÄ ¤Ã` PÀªÀ£ÀPÉÌ ¸ÀAPÀæªÀÄt ¥ÀæPÁ±À£À ¨ÉAUÀ¼ÀÆgÀÄ EªÀgÀÄ DAiÉÆÃf¹zÀ ¸ÀAPÀæªÀÄt ¸Á»vÀå ¸ÀàzsÉð-2007gÀ ¸Á°£À §ºÀĪÀiÁ£ÀUÀ¼ÀÄ ¸ÀA¢ªÉ. EµÉÖ®è §ºÀĪÀiÁ£ÀUÀ¼ÀÄ, ¥Àæ±À¹ÛUÀ¼ÀÄ EªÀgÀ PÀªÀ£ÀUÀ¼À UÀÄtªÀÄlÖªÀ£ÀÄß  FUÁUÀ¯Éà ¤zsÀðj¹ªÉ JAzÀgÉ vÀ¥ÁàUÀ¯ÁgÀzÀÄ.
   dAiÀÄ®Që÷ä ¥ÁnîgÀ  PÀªÀ£ÀUÀ¼ÀÄ UÁvÀæzÀ°è aPÀÌzÁV PÀAqÀħAzÀgÀÆ CxÀð¥ÀÇtðªÁVªÉ; CªÀgÀ ¨sÁµÉ ¸ÀgÀ¼ÀªÁVzÀÄÝ F PÀªÀ£ÀUÀ¼À°ègÀĪÀ ¸ÀÆPÀë÷ä ¸ÀAªÉÃzÀ£ÉUÀ¼À£ÀÄß £ÉÃgÀªÁV NzÀÄUÀgÀ ºÀÈzÀAiÀÄPÉÌ ªÀÄÄnÖ¸ÀĪÀ°è ¸À¥sÀ®ªÁVªÉ. DzsÀĤPÀ PÀ£ÀßqÀ ¯ÉÃRQAiÀÄgÀÄ vÀªÀÄä PÀ£À¸ÀÄUÀ¼À£ÀÄß-£ÉÆêÀÅUÀ¼À£ÀÄß-¤gÁ¸ÉUÀ¼À£ÀÄß, vÀªÀÄä C£ÀĨsÀªÀUÀ¼À£ÀÄß, vÀªÀÄä C¤¹PÉUÀ¼À£ÀÄß ¢lÖvÀ£À¢AzÀ C©üªÀåQÛUÉƽ¸ÀĪÀ ªÀiÁzsÀåªÀĪÀ£ÁßV PÀªÀ£ÀUÀ¼À£ÀÄß DAiÉÄÌ ªÀiÁrgÀĪÀÅzÀÄ PÀAqÀÄ §gÀÄvÀÛzÉ. EA¢UÀÆ ¥À槮ªÁVgÀĪÀ ¥ÀÅgÀĵÀ¥ÁæzsÁ£ÀåvÉAiÀÄ ¸ÁªÀiÁfPÀ ªÀåªÀ¸ÉÜUÀ¼À°è vÀªÀÄä C¹ÛvÀéªÀ£ÀÄß PÀAqÀÄPÉƼÀÄîªÀ MzÁÝlzÀ°è vÀªÀÄä ¨sÁªÀ£ÉUÀ¼À£ÀÄß ºÀwÛPÀÌzÉ CªÀÅUÀ¼À£ÀÄß C©üªÀåPÀÛ¥Àr¸ÀĪÀ ªÀiÁUÀðªÀ£ÀÄß PÀAqÀÄPÉƼÀÄîªÀ°è ªÀÄ»¼ÉAiÀÄgÀÄ ¸À¥sÀ®vÉAiÀÄ£ÀÄß ¥ÀqÉ¢gÀĪÀÅzÀÄ ¤dPÀÆÌ ºÉªÉÄäAiÀÄ «µÀAiÀÄ. EAvÀºÀ ¯ÉÃRQAiÀÄgÀ£ÀÄß £Ár£ÁzÀåAvÀ ºÀÄqÀÄQ CªÀgÀ PÀÈwUÀ¼À£ÀÄß ¥ÀæPÀn¸À®Ä ¨ÉAUÀ¼ÀÆj£À ¥ÀæPÁ±ÀPÀgÉƧâgÀÄ ªÀÄÄAzÁVzÀÄÝ C©ü£ÀAzÀ¤ÃAiÀÄ. ¸ÀĪÀtð PÀ£ÁðlPÀ ªÀµÁðZÀgÀuÉAiÀÄ ¸ÀAzÀ¨sÀðzÀ°è ¹«f ¥ÀæPÁ±À£À, ¨ÉAUÀ¼ÀÆgÀÄ EªÀgÀÄ ºÉÆgÀvÀAzÀ LªÀvÀÄÛ ¯ÉÃRQAiÀÄgÀ PÀÈwUÀ¼À°è GzÀAiÉÆãÀÄäR PÀªÀAiÀÄwæ dAiÀÄ®Që÷ä ¥ÁnîgÀ `¤Ã® PÀqÀ® ¨Á£ÀÄ` PÀªÀ£À ¸ÀAUÀæºÀªÀÇ ¸ÀºÀ MAzÀÄ.
   ¤Ã® PÀqÀ® ¨Á£ÀÄ- ¸ÀAPÀ®zÀ°ègÀĪÀ PÀªÀ£ÀUÀ¼À£ÀÄß ¸ÀªÀÄUÀæªÁV N¢zÁUÀ CªÀÅUÀ¼À »A¢gÀĪÀ ¹ÛçÃ-¸ÀAªÉÃzÀ£ÉAiÀÄ wêÀævÉAiÀÄ CjªÁUÀÄvÀÛzÉ. ¥ÀÅlÖ ¥ÀÅlÖ DzÀgÉ D¥À۪ɤ¸ÀĪÀ ¸Á®ÄUÀ¼ÀÄ £ÀÆgÁgÀÄ CxÀðUÀ¼À£ÀÄß ¤ÃqÀÄvÀÛªÉ. ¯ÉÃRQAiÀÄ ¨sÁªÀ£Á¯ÉÆÃPÀzÀ M¼À£ÉÆÃlªÀ£ÀÄß ¤ÃqÀÄvÀÛªÉ. E°è UÀAqÀÄ-ºÉtÂÚ£À ¸ÀA§AzsÀUÀ¼ÀÄ, ºÉtÂÚ£À C¸ÀºÁAiÀÄPÀvÉ-C¤ªÁAiÀÄðvÉ, ¥ÉæêÀÄPÁÌV ºÁvÉÆgÉAiÀÄÄ«PÉ ºÁUÀÆ MAnvÀ£ÀzÀ «µÁzÀvÉ §ºÀÄvÉÃPÀ PÀªÀ£ÀUÀ¼À°è ¸ÁܬĨsÁªÀªÁV «ÄAaªÉ.``AiÀiÁPÉ »ÃUÉ PÀAqÀÄAqÀzÉݯÁè PÀ£À¸ÀÄ C£ÉÆßà ºÁUÉ! J£ÀÄßvÁÛ ªÁ¸ÀÛªÀQÌAvÀ®Æ PÀ£À¸ÀÄUÀ¼À¯Éèà EgÀ§AiÀĸÀĪÀ ªÀÄ£À¸Àì£ÀÄß `§tÚ PÀgÀVzÀ gÀAUÉÆð` ºÁUÀÆ `vÀ¼ÀîAPÀ`zÀ°è PÁt§ºÀÄzÀÄ.§vÀÛ¯ÁUÀĪÀÅzÉAzÀgÉ, «¯Á¹, PÀ¼ÀPÉÆAqÀªÀ¼ÀÄ, UÁAiÀÄ, GgÀļÀÄ, ºÁUÀÄ ²Ã¶ðPɬĮèzÉ PÀªÀ£ÀUÀ¼À°è(28 ªÀÄvÀÄÛ 46) «µÁzÀzÀ bÁAiÉÄ vÀĸÀÄ UÁqsÀªÁV ºÉÆgÀºÉÆ«ÄäªÉ. «µÁzÀzÀ bÁAiÉĬÄzÀÝgÀÆ ¤gÁ±Á¨sÁªÀ«®è J£ÀÄߪÀÅzÀ£ÀÄß UÀªÀĤ¸À¨ÉÃPÀÄ.
   EvÀgÀ PÀªÀAiÀÄwæAiÀÄgÀAvÉ gÀÆrüªÀÄÆ® ¹ÛçêÀiË®åUÀ¼À£ÀÄß, ¥ÀÅgÁtzÀ ¥ÁvÀæUÀ¼À£ÀÄß ¥Àæ²ß¸ÀĪÀ ¥ÀæAiÀÄvÀߪÀ£ÀÄß vÀªÀÄä PÀªÀ£ÀUÀ¼À°è dAiÀÄ®Që÷äAiÀĪÀgÀÄ PÀÆqÀ ªÀiÁrzÁÝgÉ. vÁ¬Ä ªÀÄvÀÄÛ ªÀÄUÀ½UÉ - PÀªÀ£ÀzÀ°è ¹ÃvÉ ªÀÄvÀÄÛ ¨sÀÆzÉëUÉ ºÁPÀĪÀ ¥Àæ±ÉßUÀ¼ÀÄ ¨sÁªÀ£ÉUÀ¼À£ÀÄß PÀ¯ÁèV¹, PÀ£À¸ÀÄUÀ¼À PÀvÀÄÛ »¸ÀÄQ §zÀÄPÀÄwÛgÀĪÀ ºÉtÄÚ ªÀÄ£À¸ÀÄìUÀ¼À£ÀÄß aAw¸ÀĪÀAvÉ ªÀiÁqÀÄvÀÛzÉ. ªÀÄÄAzÀPÉÌ GvÀÛªÀÄ-CzsÀªÀÄ PÀªÀ£ÀzÀ°è,  "gÁªÀÄ gÁªÀtgÀ°è/ AiÀiÁgÀÄ GvÀÛªÀÄ/ ºÉÃ¼É ¹ÃvÉ/ HºÀÄA, ¥Àæ±ÉßAiÀÄ£ÀÄß »ÃUÉ §zÀ°¸ÀÄ/ gÁªÀÄ gÁªÀtgÀ°è,AiÀiÁgÀÄ CzsÀªÀÄ!/ ¸ÀºÀ£ÉUÉlÄÖ ºÉýzÀ¼ÀÄ ¹ÃvÉ."  £ÀÆgÀÄ CxÀðUÀ¼À£ÀÄß ¤ÃqÀĪÀ ¥ÀÅlÖ¥ÀÅlÖ ªÁPÀåUÀ¼À F PÀªÀ£ÀzÀ°è ¹ÃvÉAiÀÄ ªÀiÁw£À°ègÀĪÀ C¸ÀºÀ£É ºÉƸÀ¢QÌ£ÀvÀÛ ºÉÆgÀ½gÀĪÀ ªÀÄ»¼ÉAiÀÄ C©üªÀåQÛAiÀÄ°ègÀĪÀ  ¢lÖvÀ£ÀªÀ£ÀÄß ªÀåPÀÛUÉƽ¸ÀÄvÀÛzÉ.
 DzÀgÉ EzÉà zÀ¤, `aUÀÄgÀÄ`- PÀªÀ£ÀzÀ°è vÀ£Éß®è PÀ£À¸ÀÄUÀ¼À£ÀÄß, ¨sÁªÀ£ÉUÀ¼À£ÀÄß CAvÀªÀÄÄðTAiÀiÁV¹ CºÀ¯ÉåAiÀÄAvÉ ²¯ÉAiÀiÁUÀ §AiÀĸÀÄvÀÛzÉ. MAzÀÄjÃwAiÀÄ°è ¸ÀA§AzsÀUÀ¼À ZËPÀlÄÖUÀ¼À£ÀÄß zÁl¯ÁgÀzÀ C¸ÀºÁPÀvÉAiÀÄ zÀ¤ ªÀÄÄAzÀPÉÌ ªÁ¸ÀÛ«PÀvÉAiÀÄ Cj«£ÀvÀÛ ¸ÁV, ªÀĺÁzÉë CPÀÌ£À°è vÀ£Àß ¸ÁªÀÄåvÉAiÀÄ£ÀÄß PÁt§AiÀĸÀÄvÀÛzÉ. ¦æÃw JA§ ªÀÄjÃaPÉAiÀÄ£ÀÄß CgÀ¸ÀÄvÀÛzÉ. `. . .£À£ÉÆß¼ÀÄ ¤Ã` PÀªÀ£ÀzÀ°è CPÀ̪ÀĺÁzÉëAiÀÄ£ÀÄß PÀÄjvÀÄ ¯ÉÃRQAiÀÄ ¸ÀéUÀvÀ-``–PÉýzÀ dUÀ ªÀiÁvÁrÃvÀÄ «ÄwAiÀÄ PÀÄjvÀÄ, ªÀiÁvÁqÀ° ©qÀÄ`` J£ÀÄßvÁÛ ªÀÄÄAzÀĪÀgÉzÀÄ CPÀÌ£ÀAvÉ vÀ£ÀUÀÆ ¦æÃw zÉÆ. .gÀ. .Q. .vÉ. . JAzÀÄ ¥Àæ±ÉßAiÉÆA¢UÉ C¤²ÑvÀvÉAiÀÄ°èAiÉÄà ªÀÄÄPÁÛAiÀĪÁUÀÄvÀÛzÉ. PÀ£À¸ÀÄUÁjPÉAiÀÄ°èAiÉÄà KPÁAVAiÀiÁV ªÀÄļÀÄVgÀĪÀ PÀªÀ£ÀUÀ¼À°è ¨sÀgÀªÀ¸ÉAiÀÄ DvÀ䫱Áé¸ÀzÀ C¨sÁªÀ JzÀÄÝPÁt¸ÀĪÀAvÀºÀzÀÄÝ. DzÀgÉ ªÁ¸ÀÛ«PÀvÉAiÀÄ £É®ªÀ£ÀÄß ¨sÀzÀæªÁV »r¢lÄÖPÉƼÀÄîvÁÛ, PÀ£À¸ÀÄPÁtĪÀ ¥ÀæQæAiÉÄUÉ  vÀ£ÀߣÀÄß vÁ£ÀÄ MrØPÉƼÀÄîªÀ°è ¸ÁévÀAvÀæ÷åªÀ£ÀÄß C£ÀĨsÀ«¸ÀĪÀ ºÉƸÀvÀ£À ªÉÄZÀÄѪÀAvÀºÀzÀÄÝ.    ºÀQÌ ºÁUÀÄ D¸É PÀªÀ£ÀUÀ¼À°è £É®PÀÌAnPÉÆArgÀ¨ÉÃPÉ£ÀÄߪÀ C¤ªÁAiÀiðvÉ ¤ZÀѼÀªÁVzÉ. ºÀQÌAiÀÄAvÉ DPÁ±ÀzÀ°è ºÁgÁr CxÀªÁ J¯ÉUÀ¼ÁV vÀAUÁ½UÉ ¹QÌ J¯Éè¯ÉÆèà C¯ÉzÁr vÀ£ÀߣÀÄß ºÉƸÀºÉƸÀ C£ÀĨsÀªÀUÀ½UÉ vÉgÉAiÀÄĪÀ §zÀ°UÉ ¯ÉÃRQ vÀ£Àß PÁ®ÄUÀ¼À£ÀÄß ¨sÀzÀæªÁV £É®zÀ°è HgÀ §AiÀĸÀĪÀÅzÀÄ DPÉAiÀÄ ªÀÄ£À¹ì£À zÀéAzÀéªÀ£ÀÄß ªÀåPÀÛ¥Àr¸ÀÄvÀÛzÉ. vÁ£ÀÄ §AiÀĸÀĪÀ ¥ÉæêÀĪÀ£ÀÄß ¦æÃwAiÀÄ£ÀÄß vÀ£Àß §zÀÄQ£À ¸ÀA§AzsÀUÀ¼À ªÀÄÆ®PÀªÉà PÀAqÀÄPÉƼÀî¨ÉÃPÉ£ÀÄߪÀ aAvÀ£É JzÀÄÝ PÁt¸ÀÄvÀÛzÉ. ¥ÉÇgÉ, CjPÉ PÀªÀ£ÀUÀ¼À°è ªÀiÁ£ÀªÀ ¸ÀA§AzsÀUÀ½UÉ ºÀuÉ¥ÀnÖPÀnÖPÉƼÀÄîªÀÅzÀ£ÀÄß ¥Àæ²ß¸ÀÄvÁÛgÉ.
   ¥ÀæPÀÈwAiÀÄ°ègÀĪÀ ªÉÆÃqÀ, £ÀPÀëvÀæ, ¨É¼À¢AUÀ¼ÀÄ, ¸ÀªÀÄÄzÀæ, £À¢, ºÀQÌ, ªÀÄgÀ EvÁå¢UÀ¼À£ÀÄß gÀÆ¥ÀPÀUÀ¼À£ÀÄß §¼À¸ÀĪÀ°è EªÀjUÉ §ºÀ¼À ¦æÃw. CªÀgÀ GvÀÛªÀÄ PÀªÀ£ÀUÀ¼ÀÄ EAvÀºÀ gÀÆ¥ÀPÀUÀ¼À£ÀÄß G¥ÀAiÉÆÃV¹AiÉÄ ºÉÆgÀºÉÆ«ÄäªÉ. ¸ÀªÀÄÄzÀæ ªÀÄvÀÄÛ ¤Ã® PÀqÀ® ¨Á£ÀÄ PÀªÀ£ÀUÀ¼À°è §ºÀıÀB ªÉÆvÀÛªÉÆzÀ®¨ÁjUÉ PÀ«AiÀÄ PÀ®à£É ¸ÀªÀÄÄzÀæªÀ£ÀÄß ¹ÛçÃUÉ ºÉÆð¹zÀÝ£ÀÄß PÁt§ºÀÄzÀÄ. ¸ÀªÀÄÄzÀæ JAzÀgÉ, ºÉtÄÚUÀ¼À ¸ÀªÀiÁªÉñÀ, CzÀPÉÌà CµÉÆÖAzÀÄ ªÉÆgÉvÀ, £ÀÄ°vÀ, G°vÀ J£ÀÄߪÀ CzÀÄãvÀ PÀ®à£ÉAiÀÄ£ÀÄß EªÀgÀÄ PÀnÖPÉÆqÀĪÀ ¯ÉÃRQ,  £Á£ÀÄ v/s ¤Ã£ÀÄ- PÀªÀ£ÀzÀ°è £À¢AiÀÄ£ÀÄß «gÀ» ºÉuÁÚV awæ¸ÀÄvÁÛgÉ. D±ÀAiÀÄ PÀªÀ£ÀzÀ°è ¸ÁPÁgÀªÁzÀ PÀ£À¸ÉA§ PÀƸÀÄ ºÉƹ®Ä zÁl¨ÉÃPÀÄ, ¨Á£À fVAiÀĨÉÃPÀÄ J£ÀÄߪÀ D±ÀAiÀĪÀ£ÀÄß ªÀåPÀÛ ¥Àr¹zÁÝgÉ.MnÖ£À°è dAiÀÄ®Që÷äAiÀĪÀgÀÄ vÀªÀÄä ¥ÀæxÀªÀÄ ¸ÀAPÀ®£ÀzÀ°èAiÉÄà GvÀÛªÀĪÁzÀ PÀªÀ£ÀUÀ¼À£ÀÄß PÀ£ÀßqÀ ¸ÁgÀ¸ÀévÀ¯ÉÆÃPÀPÉÌ ¤ÃrzÁÝgÉ. vÀ£Àß ¸ÀÈd£À²Ã®vÉAiÀÄ£ÀÄß, PÀ®à£Á±ÀQÛAiÀÄ£ÀÄß PÉêÀ® vÀªÀÄä PÀ£À¹UÀµÉÖ- vÀªÀÄä ¨sÁªÀ£ÉUÀ¼À ZËPÀnÖUÀµÉÖ ¹Ã«ÄvÀªÁVj¸ÀzÉ ºÉƸÀ £É¯É¬ÄAzÀ ºÉƸÀ zÀȶÖPÉÆãÀ¢AzÀ §zÀÄQ£À ªÀiË®åUÀ¼À£ÀÄß PÀAqÀÄPÉƼÀÄîªÀ ¥ÀæAiÀÄvÀߪÀ£ÀÄß vÀªÀÄä PÀªÀ£ÀUÀ¼À ªÀÄÆ®PÀ ªÀiÁqÀ¨ÉÃPÀÄ. vÀªÀÄUÉ ªÀiÁvÀæªÀ®è NzÀÄUÀjUÉ PÀÆqÀ ªÁ¸ÀÛ«PÀ fêÀ£ÀªÀ£ÀÄß JzÀÄj¸ÀĪÀ ¨sÀgÀªÀ¸ÉAiÀÄ£ÀÄß EªÀgÀ ªÀÄÄA¢£À PÀªÀ£ÀUÀ¼ÀÄ ¤ÃqÀ¨ÉÃPÀÄ. ºÉtÂÚ£À PÀÄjvÁzÀ ¸ÀªÀiÁdzÀ zÀȶÖPÉÆãÀUÀ¼À£ÀÄß §zÀ°¸ÀĪÀ ªÉÆzÀ®Ä ºÉtÄÚ vÀ£ÀߣÀÄß vÁ£ÀÄ £ÉÆÃqÀĪÀ ¥ÀjAiÀÄ£ÀÄß §zÀ°¸ÀĪÀAvÁUÀ¨ÉÃPÀÄ. ¤Ã®¨Á£À° DvÀ䫱Áé¸ÀzÀ ºÀQÌ ºÁAiÀiÁV gÉPÉÌ ©aÑ ºÁgÀ°; ¤Ã® PÀqÀ®° ¦æÃwAiÀÄ zÉÆÃt ªÀÄļÀÄUÀĪÀ ¨sÀAiÀÄ«®èzÉ vÉïÁqÀ°; CAvÀºÀ DvÀ䫱Áé¸ÀzÀ ¸É¯É EªÀgÀ PÀªÀ£ÀUÀ½AzÀ ºÉÆgÀºÉƪÀÄä°  JAzÀÄ D²¸ÀÄvÁÛ ¥ÀÅ£ÀB MªÉÄä `¤Ã® PÀqÀ® ¨Á£ÀÄ` PÀªÀ£À ¸ÀAPÀ®£ÀPÉÌ C©ü£ÀAzÀ£ÉUÀ¼ÀÄ.
                         ******************************** 

(ಮುಂಬೈನ ‘ಮಾಟುಂಗಾ ಕರ್ನಾಟಕ ಸಂಘ’ದ ಮುಖವಾಣಿ, ‘ಸ್ನೇಹ ಸಂಬಂಧ’ ಮಾಸಿಕದಲ್ಲಿ, 2008ರ ಡಿಸೆಂಬರ್‍ನಲ್ಲಿ ಪ್ರಕಟಗೊಂಡ ವಿಮರ್ಶೆ.)

Monday, January 7, 2013

ತಿಳಿಗೊಳ ಕಲಕಿ ತಳ ಅಸ್ಪಷ್ಟವಾದಾಗಲೆಲ್ಲಕೊಳದ ಅಲೆ ಅಲೆಯಲ್ಲೂ ನೂರೆಂಟು ಪ್ರಶ್ನೆಗಳ ಹೊಯ್ದಾಟ. ಹೊಯ್ದಾಟಕ್ಕೆ ಸಮಾಧಾನದ ಬಿಸುಪು ದೊರೆತಲ್ಲಿ, ಕೊಳದ ತಳದಲ್ಲಿ ನನ್ನನ್ನು ಅಥವಾ ನಮ್ಮನ್ನು ಹುಡುಕಿಕೊಳ್ಳಬಹುದೇನೊ...
ಕನಸ ಕೊಲ್ಲುವುದ
ಹೇಳಿಕೊಡು ಗೆಳೆಯ
ಕಡಿದಷ್ಟು ಕೊನರುತಿದೆ
ತಬ್ಬಿ ಹಬ್ಬುತಿದೆ ಕನಸ ಬಳ್ಳಿ
ಚಿವುಟಿ ಸರಿಸಲೆತ್ನಿಸಿದಷ್ಟು
ಚಿಗುರಿ ನಳನಳಿಸಲೆತ್ನಿಸುತಿದೆ
ಸಂಬಂಧದ ಬೆಸುಗೆ
ತಬ್ಬಿ ಹಬ್ಬಲೆತ್ನಿಸುವ
ನನ್ನ ಈ ಬಯಕೆಯ ಬಳ್ಳಿಗೆ ಬೆಂಕಿಯಿಟ್ಟು
ಯಜ್ಞ ಎಂದುಕೊಳ್ಳುತ್ತಿರುವೆ...

Friday, January 4, 2013

’ಹಾಲೂ, ಕುದಿಯೂ ಎರಡೂ ನೆಲಕ್ಕೆ ಚೆಲ್ಲಿ ವ್ಯರ್ಥ…..’ – ಜಯಲಕ್ಷ್ಮಿ « ಅವಧಿ / avadhi

’ಹಾಲೂ, ಕುದಿಯೂ ಎರಡೂ ನೆಲಕ್ಕೆ ಚೆಲ್ಲಿ ವ್ಯರ್ಥ…..’ – ಜಯಲಕ್ಷ್ಮಿ « ಅವಧಿ / avadhiಮತ್ತೆ ಮಳೆ ಹೊಯ್ಯುತಿದೆ…

ಜಯಲಕ್ಷ್ಮಿ ಪಾಟೀಲ್

ಮೂಕವಾಗ ಬಯಸಿದಾಗಲೆಲ್ಲ
ಗುದ್ದಿಕೊಂಡು ಬರುವ ಮಾತುಗಳು
ಥೇಟ್ ಮುಚ್ಚಳ ಬಿಗಿದ ಪಾತ್ರೆ
ಯಲ್ಲಿನ ಹಾಲು
ಬುಸ ಬುಸ ಉಕ್ಕಿದಂತೆ….
ಹಾಲೂ, ಕುದಿಯೂ ಎರಡೂ
ನೆಲಕ್ಕೆ ಚೆಲ್ಲಿ ವ್ಯರ್ಥ…..
*
ನನ್ನ ಶವವನ್ನು
ಹೊತ್ತು ಸಾಗುತ್ತಿದ್ದೇನೆ
ಸವಿಸಬೇಕಾದ ಹಾದಿ
ಅದೆಷ್ಟು ದೂರವೋ
ಶವದ ವಾಸನೆಗೆ ಈಗ
ಹತ್ತಿರದವರೆಲ್ಲ ನಡೆವ
ದಾರಿಗಿಂತ ದೂರ
ಸೋತ ಹೆಗಲು ಉಸುಗುಡುತ್ತಿದೆ
ಈ ಹೆಣ ಬಲು ಭಾರ…
*
ನಿಂತು ನೋಡುತ್ತಿರುವೆ
ನನ್ನ ಶವಯಾತ್ರೆಯನ್ನು
ಮೌನ ಧರಿಸಿ
ಮೆರವಣಿಗೆಯಲ್ಲಿ ಸಾಗುತ್ತಿರುವ
ಅವರ ಮನದಲ್ಲಿ
ಮಂಗಳವಾದ್ಯಗಳು !!

Tuesday, January 1, 2013ಪಾಟೀಲರ ಮನೆಯಲ್ಲಿ ಸಂಗೀತದ ಅಮೃತಧಾರೆ - ವಿಭಿನ್ನ ಬಣ್ಣ, ವಿಭಿನ್ನ ಶೈಲಿ
by Ramesh Gururajarao on Sunday, December 30, 2012 at 1:44pm ·

ಎಲ್ಲಾ ಕಡೆಗೂ ಕ್ಯಾಲೆಂಡರ್ ವರ್ಷದ ಕೊನೆಯ ದಿನಗಳು.  ಆದರೆ ಸಂಗೀತಕ್ಕೆ, ಅದರ ಮಾಧುರ್ಯಕ್ಕೆ ಯಾವ ಕೊನೆಯೂ ಇಲ್ಲ, ಯಾವ ಮೊದಲೂ ಇಲ್ಲ. 29 ಡಿಸೆಂಬರ್ 2012, ಆ ಮಾಧುರ್ಯವನ್ನು ಸವಿಯುವ ಅವಕಾಶ ಮಾಡಿಕೊಟ್ಟಿದ್ದು ಸ್ನೇಹಿತರಾದ ಜಯಲಕ್ಷ್ಮಿ ಪಾಟೀಲ್ ಮತ್ತು ಅವರ ಪತಿ ಪಾಟೀಲರು. ಕಳೆದ ವರ್ಷದಂತೆ ಈ ವರ್ಷ ಕೂಡ ಆತ್ಮೀಯ ಆಹ್ವಾನ ಇತ್ತು.

ಸ್ವಲ್ಪ ಸ್ವಲ್ಪ ತುಂತುರು ತುಂತುರು ಮಳೆ ಆರಂಭವಾಗಿತ್ತು, ಆದರೆ ನಿಂತು ಹೋಯ್ತು.  ಆದರೇನು, ನಾನು ಜಯಲಕ್ಷ್ಮಿ ಪಾಟೀಲ್ ಮನೆಯೊಳಗೆ ಕಾಲಿಡುವಷ್ಟರಲ್ಲಿ ಆಗಲೇ ಸಂಗೀತ ಧಾರೆ ಹರಿಯುತ್ತಿತ್ತು. 

ನಾನು ಬರುವ ಮುಂಚೆ ಈ ಸಂಜೆಯನ್ನು ದೆಹಲಿಯಲ್ಲಿ ಹತ್ಯೆಗೊಳಗಾದ ಯುವತಿಗೆ ಸಮರ್ಪಿಸಿದ್ದು, ಇದಕ್ಕಾಗಿ ಗಿರಿ ದೊಡ್ಡೇರಿ ಶ್ರೀ ರಾಗ ನುಡಿಸಿ ಆ ಜೀವಕ್ಕೆ ಸಮರ್ಪಿಸಿದ್ದರು.

ಗಿರಿ ದೊಡ್ಡೇರಿ ತಮ್ಮ ಬಾನ್ಸುರಿಯಿಂದ (ಬಾನ್ಸ್ ಅಂದ್ರೆ ಬಿದಿರು.  ಅದರಿಂದ ಸ್ವರ ಹೊರಡಿಸಬಹುದಾದ್ದರಿಂದ ಅದು ಬಾಂಸ್ ಸುರಿ, ಬಾನ್ಸುರಿ) ಸಾಂಪ್ರದಾಯಿಕವಾಗಿ ಯಮನ್ ರಾಗವನ್ನು ಅಲ್ಲಿದ್ದವರಿಗೆ ಉಣಬಡಿಸಿ, ರಾಗಮಾಲಿಕೆಯತ್ತ ಗೆಳೆಯರನ್ನು ವಾಲಿಸಿಬಿಟ್ಟಿದ್ದರು. ನನ್ನ ಕಿವಿಗೆ ಬಿದ್ದದ್ದು ಮೊದಲಿಗೆ ದರ್ಬಾರಿ ರಾಗ. ಇವತ್ತಿಗೂ Grand old man ಅಂತಲೇ ಕರೆಸಿಕೊಳ್ಳುವ ದರ್ಬಾರಿ ರಾಗ ತುಂಬಾ ಗಂಭೀರವಾದ ರಾಗ. ಈ ರಾಗವನ್ನು, ಕರ್ನಾಟಕ ಸಂಗೀತದಿಂದ ಹಿಂದೂಸ್ತಾನಿ ಸಂಗೀತ ಪದ್ಧತಿಗೆ ತಂದಿದ್ದು ತಾನ್ಸೇನ್ ಎಂಬ ಐತಿಹ್ಯ ಕೂಡ ಉಂಟು.  ರಾಜನ ದರ್ಬಾರಿನಲ್ಲಿ ಪ್ರಸ್ತುತ ಪಡಿಸುವ ಆ ರಾಗ ಸಹಜವಾಗಿ ಗಂಭೀರವೇ.  ಗಿರಿ ದೊಡ್ಡೇರಿ, ದರ್ಬಾರಿಯಲ್ಲಿ ಸ್ವರದಿಂದ ಸ್ವರಕ್ಕೆ ನಡೆಸುತ್ತಿದ್ದ ಚಲನ್  ಮತ್ತು ಪಕಡ್ ಬಹಳ ಪರಿಣಾಮಕಾರಿಯಾಗಿತ್ತು. 

ಅಲ್ಲಿಂದ ಮುಂದೆ ಗಿರಿಯವರ ಪತ್ನಿ ಆಶಾ ದೊಡ್ಡೇರಿ ಭಾವಗೀತೆಗಳನ್ನು ಪ್ರಾರಂಭಿಸಿದರು. ಅವರ ಹಾಡುಗಳನ್ನು ಕೇಳುತ್ತಿದ್ದಾಗ ಫಟ್ಟನೆ ನೆನಪಾದದ್ದು ನಾನು ಚಿಕ್ಕವನಿದ್ದಾಗ ಆಕಾಶವಾಣಿಯ ಮುಖಾಂತರ ಕೇಳುತ್ತಿದ್ದ ಭಾವಗೀತೆಗಳು.  ಯಾವುದೇ ಅಬ್ಬರವಿಲ್ಲದೆ, ಬರೀ ಒಂದು ಜೋಡಿ ತಬಲಾ ಮತ್ತು ಒಂದು ಹಾರ್ಮೋನಿಯಂ ಸಾಥಿಯಾಗಿ ಬಂಡ ಹಾಡುಗಳು ಕಿವಿಗೆ ಹಿತವಾಗಿದ್ದವು.

ಮೊದಲು ಅವರು ಹಾಡಿದ್ದು ಎದೆಯ ಬಾಂದಳದಲ್ಲಿ ಎಂದು ಆರಂಭವಾಗುವ ಗೀತೆ. ಮೊದಲ ಗೀತೆಯಾದ್ದರಿಂದ, ಸಾಹಿತ್ಯಿಕವಾಗಿ, ಸಾಂಪ್ರದಾಯಿಕವಾಗಿ ಆಯ್ಕೆ ಸರಿಯಾಗಿತ್ತು. ಯಮನ್ ರಾಗದ ಈ ಗೀತೆ ಎಲ್ಲ ಆಶಾವಾದಗಳ ಒಟ್ಟು ಸಂಗಮದಂತೆ ಇತ್ತು.

ನಂತರ ಬಂದಿದ್ದು ವೆಂಕಟೇಶಮೂರ್ತಿಗಳ ರಚನೆ "ಬಿದಿರ ಕೊಳಲಿನ ಚತುರ ನಿನ್ನ ಅಧರ ಸ್ಪರ್ಶ ನೀಡೆಯ", ಗಿರಿ ನೀಡಿದ ವಿವರಣೆಯಂತೆ ಇದು "ರಾಧೆಯ ರೋಧನ". ಇದರಲ್ಲಿ ನನಗೆ ತುಂಬಾ ಆಪ್ತವಾದ ಸಾಲು "ಸವತಿ ಬಿದಿರೆ ನಮಿಪೆ ಚದುರೆ".  ರಾಧೆ, ಹೇಗಾದರೂ ಮಾಡಿ ಕೃಷ್ಣನನ್ನು ಬಿದಿರಿನ ಕೊಳಲಿಂದ ತನ್ನೆಡೆಗೆ ಸೆಳೆದುಕೊಳ್ಳುವ ಎಲ್ಲಾ ಪ್ರಯತ್ನದ ಒಟ್ಟು ರೂಪ ಈ ಗೀತೆ.  ಎಲ್ಲೋ ಪು ತಿ ನರಸಿಂಹಾಚಾರ್ಯರ ರಚನೆಗಳ ನೆರಳು ಕಂಡಿತ್ತು.  ಆಶಾ ದೊಡ್ಡೇರಿ ಪ್ರಸ್ತುತ ಪಡಿಸಿದ ರೀತಿ ಕೂಡ ಆಪ್ತವಾಗಿತ್ತು.

ಮುಂದಿನ ಗೀತೆ ಡಿ ವಿ ಜಿ ಯವರ ಅಂತಃಪುರ ಗೀತೆಗಳಲ್ಲಿ ಹೆಚ್ಚು ಜನಪ್ರಿಯವಾದ "ಏನೀ ಮಹಾನಂದವೇ ಓ ಭಾಮಿನಿ, ಏನೀ  ಸಂಭ್ರಮದಂದವೇ".  ಮೈಸೂರು ಅನಂತಸ್ವಾಮಿಗಳ ಸಂಗೀತದಲ್ಲಿ ಪ್ರಸಿದ್ಧವಾದ ಈ ಗೀತೆ ಸೊಗಸಾಗಿ ಪ್ರಸ್ತುತಿಯಾಯಿತು. ಈ ಹಾಡಿನಲ್ಲಿ ಬರುವ "ಕುಕ್ಕುತೆ ಚರಣವ, ಕುಲುಕುತೆ ಕಾಯವ, ಸೊಕ್ಕಿನ ಕುಣಿತವ....." ಸಾಲಿನಲ್ಲಿ ಕುಕ್ಕುತೆ ಮತ್ತು ಸೊಕ್ಕಿನ ಎಂಬ ಪದಗಳನ್ನು ಕೊಚ ಹೆಚ್ಚು ಒತ್ತಿ ಹಾಡಬೇಕಿತ್ತು.  ಏಕೆಂದರೆ, ಆ ಪದಗಳ ಅರ್ಥ ಸ್ಪಷ್ಟವಾಗಿ ಹೊಮ್ಮಬೇಕಾದರೆ ಅಷ್ಟರ ಮಟ್ಟಿಗಿನ ಗಮನ ಅಗತ್ಯ. ನಾವೆಲ್ಲಾ ಕೇಳಿದ್ದ ರತ್ನಮಾಲ ಪ್ರಕಾಶ್ ಹಾಡಿದ ಗೀತೆಗಿಂತ ವಿಭಿನ್ನವೆನಿಸಿದ್ದು ಹಾಡಿನ ಕೊನೆಗೆ ಸ್ವರಗಳ ಗುಚ್ಚವನ್ನು ಸೇರಿಸಿದ್ದು.  ಹಿತವಾಗಿತ್ತು.

ಮುಂದೆ ಬಂದಿದ್ದು ಭಾವದ ಲೋಕದಿ ದೇವರ ಮಾಡಿ ಎಂಬ ವಚನ. ಅಲ್ಲಮ ಪ್ರಭು ನಾಡಿನ ಪ್ರಸಿದ್ಧ ವಚನಕಾರರಲ್ಲಿ ತುಂಬಾ ದೊಡ್ಡ ಹೆಸರು. ಗುಹೇಶ್ವರ ಅಂಕಿತದಿಂದ, ಅಲ್ಲಮನಿಂದ ಹುಟ್ಟಿಬಂದ ವಚನಗಳು ತುಂಬಾ ಕುತೂಹಲಕಾರಿ ಮತ್ತು ಇವತ್ತಿಗೂ ಪ್ರಸ್ತುತ. ಸಾಹಿತ್ಯ ಸ್ಪಷ್ಟವಾಗಿತ್ತು. ರಾಗ ಸಂಯೋಜನೆ ಕೂಡ ಹಿತವಾಗಿತ್ತು.

ಇನ್ನು ಬಸಂತ್ ರಾಗದ "ಕೇತಕಿಯ ಬನಗಳಲಿ ಸಂಚರಿಸದಿರು...." ಕವನ ಹಾಡಿದ್ದು.  ಗೀತೆಯ ಆರಂಭವೇ ನನಗೆ ಮನ್ನಾ ಡೇ ಮತ್ತು ಭೀಮಸೇನ ಜೋಶಿಗಳ "ಕೇತಕಿ ಗುಲಾಬ್ ಜೂಹಿ ಚಂಪಕ್ ಬನ್ ಫೂಲೇ" ಹಾಡನ್ನು ನೆನಪು ತಂದಿತ್ತು. ಬಹುಷಃ ಬಸಂತ್ ರಾಗ ಎರಡೂ ಹಾಡಿಗೆ ಬಳಸಿರುವುದು ಕಾರಣವೇನೋ. ಈ ಕವನದ "ಸರ್ಪಮಂದಿರವಂತೆ ಕಂಪಿನೊಡಲು" ತುಂಬಾ mystic ಆದ ಸಾಲು, ಈ ಸಾಲಿನ ಆಳಕ್ಕೆ ಇಳಿದಷ್ಟೂ ಕಣಜವೇ. 

ಕುವೆಂಪುವನ್ನು ಮಲೆನಾಡಿನಿಂದ ಬೇರ್ಪಟ್ಟು ನೋಡುವುದು ಅಪರೂಪವೇ. ಈ ನಿಟ್ಟಿನಲ್ಲಿ ಮಲೆನಾಡ ವೈಭವವನ್ನ್ಜು ಆಶಾ ದೊಡ್ಡೇರಿ ತೆರೆದಿಟ್ಟಿದ್ದು ಕುವೆಂಪು ರಚಿಸಿದ ಸದ್ದಿರದ ಬಸುರೊಡೆಯ ಕವನದಿಂದ.  ಈ ಕವನದಲ್ಲಿ ಹಸುವಿನ "ಅಂಬಾ" ಎಂಬ ಸದ್ದು ದನಗಾಹಿಯ ಕೊಳಲನಾದದೊಂದಿಗೆ ಬೆರೆತು ಹೊರಹೊಮ್ಮಲಿ ಎಂಬ ಕವಿಯ ಆಶಯ ತುಂಬಾ ಸುಂದರ. ಅದನ್ನು ಹಾಡಿನ ಮೂಲಕ ನಮ್ಮ ಮುಂದಿಟ್ಟಿದ್ದು ಚೆನ್ನಾಗಿತ್ತು.

ಒಟ್ಟಾರೆ, ಅಬ್ಬರದ ಸಂಗೀತವಿಲ್ಲದೆ  ಹಿತವಾದ ಭಾವಗೀತೆಗಳನ್ನು ಕೇಳಿದ, ಆಕಾಶವಾಣಿಯ ನೆನಪನ್ನು ಮರಳಿಸಿದ ಅನುಭವ.        

ಗಿರಿ ಮತ್ತು ಆಶಾ ಇಬ್ಬರಿಗೂ ತಬಲಾ ಸಾಥ್ ನೀಡಿದ ಕಲಾವಿದ ಹರ್ಷ ಕುಂದಗೋಳಮಠ. ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಡಲು ಆರಂಭಿಸಿರುವ ಹರ್ಷ, ಏಕತಾನತೆಯನ್ನು ತಪ್ಪಿಸಲು ತಾಳದ ಪ್ರಪಂಚ ಸೃಷ್ಟಿ ಮಾಡಿ ನಮ್ಮ ಮುಂದಿಟ್ಟರು. 16 ಮಾತ್ರೆಗಳ ವಿಲಂಬಿತ್ ತೀನ್ ತಾಲ್. ಇದು ಹದಿನಾರು ಮಾತ್ರೆಗಳ ತಾಳವಾದರೂ, ಇದಕ್ಕೆ ತೀನ್ ತಾಲ್ ಎಂದು ಕರೆಯುವುದು, ಇದರಲ್ಲಿ 5, 9 ಮತ್ತು 16 ನೇ ಮಾತ್ರೆಗೆ ತಾಳ ಬೀಳುವುದರಿಂದ. ಆರಂಭದಲ್ಲಿ ತುಂಬಾ ಸರಳವೆನ್ನಿಸಿದರೂ, ಹೋಗುತ್ತಾ ಹೋಗುತ್ತಾ, ಕಠಿಣವಾಗಬಲ್ಲ ತಾಳ ಇದು. ಇದನ್ನು ಹರ್ಷ ನಡೆಸಿಕೊಂಡು ಹೋದ ರೀತಿ ಅದ್ಭುತವಾಗಿತ್ತು, ವಿಲಂಬಿತ್  ನಿಂದ ಆರಂಭವಾದ ಪ್ರಸ್ತುತಿ, ಮಧ್ಯ ಲಯದವರೆಗೂ ಅದ್ಭುತವಾದ ಬಂದಿಶ್ ಕಟ್ಟಿಕೊಟ್ಟಿತು. ನಮ್ಮ ಕುತೂಹಲ ಇನ್ನಷ್ಟು ಹೆಚ್ಚಿಸಲು ರೇಲಾ, ಚಕ್ರಧಾರ್ ಮಾದರಿಯ   "ಘೋಡೆ ಕಿ ಚಾಲ್" ಅಂದರೆ ಕುದುರೆಯ ಓಟದ ಲಯವನ್ನು ತೀನ್ ತಾಲ್ ನಲ್ಲಿ ತಂದಿದ್ದು ವಿಭಿನ್ನ ಅನುಭವ ನೀಡಿತ್ತು.

ಇದಿಷ್ಟೆಲ್ಲಾ ಆದ ಮೇಲೆ ತೆರೆದಿದ್ದು, ಗಿರಿ ಅವರ ಬಾನ್ಸುರಿ ಪ್ರಪಂಚದಿಂದ ಸಿನೆಮಾ ಹಾಡುಗಳು.  ಟ್ರಾಕ್ ಇಟ್ಟುಕೊಂಡು ಅದರ ಜೊತೆ ಅದ್ಭುತವಾದ ಸಿನೆಮಾ ಹಾಡುಗಳನ್ನು ನುಡಿಸುತ್ತಾ ಹೋದರು. ಈ ಹಾಡುಗಳಿಗೆ ಪರಿಚಯವೇ ಬೇಕಿರಲಿಲ್ಲ. ಹಾಗಾಗಿ ಅದು ತುಂಬಾ ಆತ್ಮೀಯವಾಗಿತ್ತು. ಇಳಯರಾಜ ಸಂಗೀತದ, ಗೀತಾ ಚಿತ್ರದ "ಜೊತೆಯಲಿ ಜೊತೆಜೊತೆಯಲಿ", ಜಿ ಕೆ ವೆಂಕಟೇಶ್ ಸಂಗೀತ ನೀಡಿದ, ಹುಲಿಯ ಹಾಲಿನ ಮೇವು ಚಿತ್ರದ "ಬೆಳದಿಂಗಳಾಗಿ ಬಾ...", ವಿಜಯಭಾಸ್ಕರ್ ಸಂಗೀತ ನಿರ್ದೇಶನದ, ತಾಂತ್ರಿಕವಾಗಿ ವಿನೂತನ ಶೈಲಿ (slow motion) ಅಳವಡಿಸಿದ ನಾಗರಹಾವು ಚಿತ್ರದ "ಬಾರೆ ಬಾರೆ ಚಂದದ ಚೆಲುವಿನ ತಾರೆ", ರಾಜನ್ ನಾಗೇಂದ್ರ ನಿರ್ದೇಶನದ "ಆಸೆಯ ಭಾವ" ಮತ್ತು ನ್ಯಾಯವೇ ದೇವರು ಚಿತ್ರದ "ಆಕಾಶವೇ ಬೀಳಲಿ ಮೇಲೆ", ರೆಹಮಾನ್ ಸಂಗೀತ ನಿರ್ದೇಶನದ, ಮಣಿರತ್ನಂ ಚಿತ್ರ ಬಾಂಬೆ ಹಾಡು "ತೂ ಹಿ ರೇ" (ತಮಿಳಿನಲ್ಲಿ "ಉಯಿರೇ ಉಯಿರೇ ) ಎಲ್ಲವೂ ವಾತಾವರಣಕ್ಕೆ ಇನ್ನಷ್ಟು ಬಣ್ಣ ತಂದಿತ್ತು.

ಈ ಸಂಗೀತ ಸಂಜೆಗೆ ತೆರೆ ಹಾಕಿದ್ದು ಗಿರಿ ದೊಡ್ಡೇರಿ ಪ್ರಸ್ತುತ ಪಡಿಸಿದ ಭೈರವಿ ರಾಗದ ರಚನೆ. ರಾತಿ 9:30 ಆದರೂ ಯಾರಿಗೂ ಎದ್ದು ಹೋಗುವ ಮನಸ್ಸಿರಲಿಲ್ಲ.  ಸಂಗೀತದಲ್ಲಿ ಎಲ್ಲರೂ ಮುಳುಗಿದ್ದೆವು. ತೇಲುವ ಉದ್ದೇಶ ಯಾರಿಗೂ ಇರಲಿಲ್ಲ. :) 

ಒಟ್ಟಾರೆ, ಸಂಗೀತದ ವಿವಿಧ ಬಣ್ಣಗಳು ಸಂಜೆಗೆ ಚಿತ್ತಾರ ಬರೆದಿದ್ದವು. ಎಲ್ಲರೂ ಹೊರಗೆ ಬರುವಷ್ಟರಲ್ಲಿ ಮನಸ್ಸು ಹಗುರವಾಗಿತ್ತು 

ನಂತರ ಹಿತವಾದ ಗೆಳೆತನದ ಸಿಹಿ ತುಂಬಿದ್ದ ಭೋಜನ... ಪಾಟೀಲ್ ದಂಪತಿಗಳ ಆದರಕ್ಕೆ ಆತಿಥ್ಯಕ್ಕೆ ನಮೋನಮಃ... ಇಷ್ಟು ಪ್ರೀತಿ ವಿಶ್ವಾಸ ಗೆಳೆತನ ನಮ್ಮಲ್ಲಿ ಹೀಗೆಯೇ ಇರಲಿ ಎಂಬುದೇ ಎಲ್ಲರ ಆಸೆ.

-ರಮೇಶ್ ಗುರುರಾಜ್ ರಾವ್.

ಈ ಬರಹ ಅವಧಿಯಲ್ಲೂ ಪ್ರಕಟಗೊಂಡಿದೆ.


ರಮೇಶ್ ಗುರುರಾಜ್ ಅವರಿಗೆ ಮತ್ತು ಅವಧಿಗೆ ತುಂಬು ಕೃತಜ್ಞತೆಗಳು. :)

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.