Tuesday, May 16, 2017

ಮಾಯೆ

ಹೆಣ್ಣೆಂದರು ಜರಿದರು

ಹೆಣ್ಣೆಂದರು ಕೊಂಡಾಡಿದರು

ಹೆಣ್ಣೆಂದರು ಆಸೆಪಟ್ಟರು

ಹೆಣ್ಣೆಂದರು ಕೊಂಡರು ಮಾರಿದರು

ಹೊನ್ನು ಮಣ್ಣುಗಳ ಸಾಲಲ್ಲಿ ನಿಲ್ಲಿಸಿ

ಬೇಕು ಬೇಕೆನ್ನುತಲೇ ಬೇಡವಾದುದೆಂದರು


ತಮ್ಮೊಳಗಿನ ಮೋಹ; ಮಾಯೆ ಎಂದರು

ಮಾಯೆಗೆ ಹೆಣ್ಣ ರೂಪ ಕೊಟ್ಟರು

ಮಾಯೆಯ ಗೆಲಿದವನು ಅವನು!

ಬೀಗಿದರು ಮಾಯೆಗೆ ಸೋತವರೂ

ಮಾಯೆ ಸ್ತ್ರೀಲಿಂಗವೇ ಆದುದ್ಯಾಕೆ

ಮನಸಿನ ಕುದುರೆಗೆ ಕಡಿವಾಣವಿಲ್ಲದೆ

ಚಾಬೂಕು ನಮ್ಮ ಬೆನ್ನ ಸವರುವುದೇಕೆ

- ಜಯಲಕ್ಷ್ಮೀ ಪಾಟೀಲ್
(01-04-2017)