ಮನಸು ಮಾಗತೈತಿ,
ಮನಿಬಿಟ್ಟು ಹ್ವಾದ್ರೂ ಮನ್ಯಾಗಿದ್ದ್ರೂ
ಮಾಯಿನಹಣ್ಣಿನ ಸುಗ್ಗೆಂತ ಹಣ್ಣಿನ
ಬುಟ್ಟಿನ ಎದ್ರಿಗಿಟ್ಕೊಂಡು ಕುಂತೆ
ಆಯಿ ಅಂದ್ಳು ಚೊಲೊ ಅಲ್ಲ ಅತೀ
ತಗಿ ಹತ್ತೀತು ಹೊರಕಡಿಗಿ ವಾಂತಿ
ಬುದ್ದ ಅಂದ ಆಸೆಯೆ ದುಃಖಕ್ಕೆ ಮೂಲ
ಆಯಿಗೂ ಬುದ್ದಗೂ ಫರಕ್ ಕಾಣಲಿಲ್ಲ
ಒಮ್ಮೊಮ್ಮೆ ಅನ್ಸ್ತೈತಿ ಇಟ್ಟ್ ಹೇಳಾಕ
ಅಂವ ಮನಿ ಬಿಟ್ಟು ಹೊಂಟ್ಯಾಕ?
ದೂರಿದ್ದು ಹೆಂಡ್ರಮಕ್ಕಳ ಜೀವಾ ತಿನ್ನಾಕ?
ಬುಡ್ಡಿದೀಪಾನೂ ಬೆಳದಿಂಗ್ಳೂ ಒಂದs ಏನು
ಯಾರೊ ಕೆಣಕಿ ಕೇಳಿ ನಕ್ಕಂಗಾತು
ಬುಡ್ಡಿದೀಪದ ಆಸ್ರ್ಯಾಗ ಕಾಣು ಸೂಜಿ ಕಣ್ಣು
ಬೆಳದಿಂಗ್ಳಿನ್ಯಾಗೂ ಕಂಡೀತು ಅಂತ ಸೂಜಿ
ದಾರದ ಜೊತಿ ಹೊರಗ ಬಂದ್ರ ಹೂವೆಲ್ಲ
ಓಡೋಡಿ ಬಂದು ಎದ್ರಿಗೆ ಪಾಳೇಕ ನಿಂತೂವು
ಮುಗಿಳ್ನಗಿ ಸದ್ದು ಆಯೀದೋ? ಬುದ್ದಂದೋ?
- ಜಯಲಕ್ಷ್ಮೀ ಪಾಟೀಲ್
ಮನಿಬಿಟ್ಟು ಹ್ವಾದ್ರೂ ಮನ್ಯಾಗಿದ್ದ್ರೂ
ಮಾಯಿನಹಣ್ಣಿನ ಸುಗ್ಗೆಂತ ಹಣ್ಣಿನ
ಬುಟ್ಟಿನ ಎದ್ರಿಗಿಟ್ಕೊಂಡು ಕುಂತೆ
ಆಯಿ ಅಂದ್ಳು ಚೊಲೊ ಅಲ್ಲ ಅತೀ
ತಗಿ ಹತ್ತೀತು ಹೊರಕಡಿಗಿ ವಾಂತಿ
ಬುದ್ದ ಅಂದ ಆಸೆಯೆ ದುಃಖಕ್ಕೆ ಮೂಲ
ಆಯಿಗೂ ಬುದ್ದಗೂ ಫರಕ್ ಕಾಣಲಿಲ್ಲ
ಒಮ್ಮೊಮ್ಮೆ ಅನ್ಸ್ತೈತಿ ಇಟ್ಟ್ ಹೇಳಾಕ
ಅಂವ ಮನಿ ಬಿಟ್ಟು ಹೊಂಟ್ಯಾಕ?
ದೂರಿದ್ದು ಹೆಂಡ್ರಮಕ್ಕಳ ಜೀವಾ ತಿನ್ನಾಕ?
ಬುಡ್ಡಿದೀಪಾನೂ ಬೆಳದಿಂಗ್ಳೂ ಒಂದs ಏನು
ಯಾರೊ ಕೆಣಕಿ ಕೇಳಿ ನಕ್ಕಂಗಾತು
ಬುಡ್ಡಿದೀಪದ ಆಸ್ರ್ಯಾಗ ಕಾಣು ಸೂಜಿ ಕಣ್ಣು
ಬೆಳದಿಂಗ್ಳಿನ್ಯಾಗೂ ಕಂಡೀತು ಅಂತ ಸೂಜಿ
ದಾರದ ಜೊತಿ ಹೊರಗ ಬಂದ್ರ ಹೂವೆಲ್ಲ
ಓಡೋಡಿ ಬಂದು ಎದ್ರಿಗೆ ಪಾಳೇಕ ನಿಂತೂವು
ಮುಗಿಳ್ನಗಿ ಸದ್ದು ಆಯೀದೋ? ಬುದ್ದಂದೋ?
- ಜಯಲಕ್ಷ್ಮೀ ಪಾಟೀಲ್