Friday, January 4, 2013

’ಹಾಲೂ, ಕುದಿಯೂ ಎರಡೂ ನೆಲಕ್ಕೆ ಚೆಲ್ಲಿ ವ್ಯರ್ಥ…..’ – ಜಯಲಕ್ಷ್ಮಿ « ಅವಧಿ / avadhi

’ಹಾಲೂ, ಕುದಿಯೂ ಎರಡೂ ನೆಲಕ್ಕೆ ಚೆಲ್ಲಿ ವ್ಯರ್ಥ…..’ – ಜಯಲಕ್ಷ್ಮಿ « ಅವಧಿ / avadhi



ಮತ್ತೆ ಮಳೆ ಹೊಯ್ಯುತಿದೆ…

ಜಯಲಕ್ಷ್ಮಿ ಪಾಟೀಲ್

ಮೂಕವಾಗ ಬಯಸಿದಾಗಲೆಲ್ಲ
ಗುದ್ದಿಕೊಂಡು ಬರುವ ಮಾತುಗಳು
ಥೇಟ್ ಮುಚ್ಚಳ ಬಿಗಿದ ಪಾತ್ರೆ
ಯಲ್ಲಿನ ಹಾಲು
ಬುಸ ಬುಸ ಉಕ್ಕಿದಂತೆ….
ಹಾಲೂ, ಕುದಿಯೂ ಎರಡೂ
ನೆಲಕ್ಕೆ ಚೆಲ್ಲಿ ವ್ಯರ್ಥ…..
*
ನನ್ನ ಶವವನ್ನು
ಹೊತ್ತು ಸಾಗುತ್ತಿದ್ದೇನೆ
ಸವಿಸಬೇಕಾದ ಹಾದಿ
ಅದೆಷ್ಟು ದೂರವೋ
ಶವದ ವಾಸನೆಗೆ ಈಗ
ಹತ್ತಿರದವರೆಲ್ಲ ನಡೆವ
ದಾರಿಗಿಂತ ದೂರ
ಸೋತ ಹೆಗಲು ಉಸುಗುಡುತ್ತಿದೆ
ಈ ಹೆಣ ಬಲು ಭಾರ…
*
ನಿಂತು ನೋಡುತ್ತಿರುವೆ
ನನ್ನ ಶವಯಾತ್ರೆಯನ್ನು
ಮೌನ ಧರಿಸಿ
ಮೆರವಣಿಗೆಯಲ್ಲಿ ಸಾಗುತ್ತಿರುವ
ಅವರ ಮನದಲ್ಲಿ
ಮಂಗಳವಾದ್ಯಗಳು !!