Monday, July 26, 2010

ಅಪ್ಪನ ಕವಿತೆ.. ಬಾಳ ಸಂಜೆ


ಒಂದು ಹೆಜ್ಜೆ ನೀ ಇಡು
 

ಒಂದು ಹೆಜ್ಜೆ ನಾ ಇಡುವೆ 

ಹೆಜ್ಜೆಯಲಿ ಹೆಜ್ಜೆಯನಿಡುತ

ದಡವ ಸೇರುವಾ


ಕನಸ ಕಾಣುತ


ಮನಸ ಗಟ್ಟಿ ಮಾಡುತ


ಸಾಗುವಾ ಸಾಗುವಾ


ಗುರಿ ಸೇರುವಾ

 

ಇರಲಿ ಸಂಸಾರದಲಿ ಸಮನ್ವಯ

ಅಳಿಯಲಿ ಮನದಲುಳಿದ ಕಹಿಸಮಯ


ಕವಿಯದಿರಲಿ ಮೋಡ ಮತ್ತೆಂದೂ


ಹನಿಯೊಡೆಯದಿರಲಿ ನಿನ್ನ ಕಣ್ಣು ಇನ್ನೆಂದೂ..

  (ಇದು ನಾನು ಬರೆದ ಕವನವಲ್ಲ. ನನ್ನ ತಂದೆ [ಡಾ. ರಾಜಶೇಖರ್ ಅವರಾದಿ] ಯವರು ಬರೆದ ಕವನ. ಅಪ್ಪ ನನ್ನ ಮುಂದೆ ಒಂದು ಸಂಕೋಚದಿಂದಲೇ ತಾವು ಬರೆದ ಈ ಕವನವನ್ನು ಓದಿ ಹೇಳಿದ್ದು, ಬರೆದಿಟ್ಟುಕೊಂಡಿದ್ದೆ. ಈಗ ನಿಮ್ಮೆದುರು ಇಟ್ಟಿದ್ದೇನೆ.)