Monday, February 2, 2009

ಮೂಡಲ ಮನೆಯ ಮುತ್ತಿನ...

ಅದು ಮುಳುಗಡೆ ಪ್ರದೇಶದಿಂದ ಬಂದ ವಲಸಿಗರಿಗೆಂದೇ ನಿರ್ಮಾಣಗೊಂಡ ಪುಟ್ಟ ಊರು ಕಲಕೇರಿ. ಕರ್ನಾಟಕದ ಧಾರವಾಡಕ್ಕೆ ಹತ್ತಿರ. ಊರಿನ ಪ್ರವೇಶದಲ್ಲೊಂದು ಕೆರೆಯಿದೆ. ಆಹಾ! ಎಂಥಾ ಅದ್ಭುತ ರಮಣೀಯ ತಾಣವೆಂದರೆ ಕೆರೆ ಇದಿರು ನಿಂತರೆ ಅಲ್ಲಿಂದ ಹೊರಡಲು ಮನಸೇ ಬಾರದು.. ೨೦೦೮ ಡಿಸೆಂಬರ್ನಲ್ಲಿ ಖ್ಯಾತ ನಿರ್ದೇಶಕ ರಾಮಚಂದ್ರ ಪಿ ಎನ್ ಅವರ 'ಪುಟಾಣಿ ಪಾರ್ಟಿ' ಎನ್ನುವ ಹೆಸರಿನ ಮಕ್ಕಳ ಚಿತ್ರದ ಶೂಟಿಂಗ್ಗೆಂದು ೧೫ ದಿನ ಅಲ್ಲಿ ನನ್ನ ಓಡಾಟ. ಪ್ರತಿ ದಿನ ಚೆಲುವಾದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಂಡು ಅನುಭವಿಸುವ ಸೌಭಾಗ್ಯ. ಕೆರೆ ದಾಟುವಷ್ಟು ಹೊತ್ತು ಸಾದ್ಯವಾದಷ್ಟುಅದನ್ನು ಕಣ್ಣಲ್ಲಿ ತುಂಬಿಕೊಂಡುಬಿಡುವ ಹಸಿದ ಬಡವನ ಆಸೆಬುರುಕುತನ!! :) ಕಣ್ಣಲ್ಲಿ, ಮನಸಲ್ಲಿ ತುಂಬಿಕೊಂಡಿದ್ದು ಸಾಲದು ಎನಿಸಿ ನೀವೆಲ್ಲರೂ ನೆನಪಾಗಿ ನಿಮ್ಮೆಲ್ಲರಿಗೂ ಬೇಕಲ್ಲವಾ ಅಂದುಕೊಂಡು ನನ್ನ ಮೊಬೈಲಿನಲ್ಲಿ ಕೆರೆಯ ಸೊಬಗನ್ನು ಹೊತ್ತು (ಕದ್ದು!!) ತಂದಿದ್ದೇನೆ. ಜೊತೆಗೆ ಸುಮಧುರ ಹಾಡಿನ ಘಮವನ್ನೂ ಸೇರಿಸಿ ನಿಮ್ಮೆದುರಿಗಿಡುತ್ತಿದ್ದೇನೆ!!
ಹೇಗಿದೆ ತಿಳಿಸಿ.. :)