Wednesday, June 17, 2009

ರೇಶ್ಮೆಯ ನುಣುಪು

ರೇಶ್ಮೆಯ ನುಣುಪು
ಸಂಬಂಧಕ್ಕೆ..
ನಾಜೂಕು ಮಾಡಬೇಕು
ಜಾರಿಬೀಳದಂತೆ ಜೋಪಾನವಾಗಿರಬೇಕು
ಅಮೂಲ್ಯ ರೇಶಿಮೆ ಹೊದ್ದಿದ್ದೇನೆ
ಸುಕ್ಕಾಗದಂತೆ, ಕೊಳೆಯಾಗದಂತೆ
ನೋಡಿಕೊಳ್ಳುವ ಆತಂಕದೊಡನೆ
ಸಂಭ್ರಮಿಸುತ್ತಿದ್ದೇನೆ
ರೇಶಿಮೆ ತೊಟ್ಟ ಸುಖವನ್ನು,ಇಷ್ಟರಲ್ಲೇ ಕಳಚಿ
ಕಪಾಟಿನಲ್ಲಿ
ಭದ್ರವಾಗಿಡಬೇಕು
ಮುಚ್ಚಿ ಅನ್ನುವ ವಾಸ್ತವಕ್ಕೆ
ಬೆನ್ನು ಹಾಕಿ..