ದಿನಾಂಕ ೨೩ ಎಪ್ರಿಲ್ ೨೦೧೭ರ ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿಯಲ್ಲಿ ನನ್ನ ಈ ಲೇಖನ. http://www.vijaykarnatakaepaper.com/Details.aspx?id=20825&boxid=135123851
Wednesday, April 26, 2017
Wednesday, April 12, 2017
ಮಳೆ ಮತ್ತು ಮಡ್ಡಿ
ಕಾದ ನೆಲವಿದು ಹಸಿದ ಹೆಬ್ಬುಲಿ
ಬಾಯ್ದೆರದು ನಿಂತಿದೆ ಹಂಗಿನಲಿ
ಖಂಡವಿದೆ ಕೊ ಮಾಂಸವಿದೆ ಕೊ
ಗುಂಡಿಗೆಯ ಬಿಸಿ ರಕ್ತವಿದೆ ಕೊ ಎನುವ
ಕಾಮಧೇನುವ ಗದರಿಸಿ ಸುಮ್ಮನಿರಿಸಿ
ಸುರಿವ ಮುಗಿಲಿಗೆ ಕಾದಿದೆ ಗದ್ದೆ
ಗದ್ದವನೆತ್ತಿ ಹಣೆಗೆ ಕೈಯಿರಿಸಿ ಕಣ್ಣು ಕಿರಿಗೊಳಿಸಿ
ಬಿರುಬಿಸಿಲ ನಾಡಲ್ಲಿ ಹನಿಯೊಡಬೇಕಿದೆ
ಕಣ್ಣಾಲಿಯ ಹನಿ ಕೆನ್ನೆಗಿಳುವ ಮುನ್ನ
ಮೋಡ ಕೊಡವಬೇಕು ಮುತ್ತುಗಳ ಮೈಯದುರಿಸಿ
ನವಿರೇಳಬೇಕು ನವಿಲ ಗರಿ ಗರಿಗರಿಯಾಗಿ
ಹೆಜ್ಜೆಯೂರಿದಲೆಲ್ಲ ಗೆಜ್ಜೆಯಲಂಕಾರದ ಕಂದು ಕನ್ನಡಿ
ಪ್ರತಿಫಲಿಸಿ ಮೋಡ ಹಿಗ್ಗಿ ಮತ್ತೆ ಮೈದುಂಬಬೇಕು
ಮಡ್ಡಿ ಮೆದುವಾಗಿ ಹದವಾಗಿ ಮತ್ತೆ ಹೆಣ್ಣಾಗಬೇಕು
- ಜಯಲಕ್ಷ್ಮೀ ಪಾಟೀಲ್
26 March 2017
ಬಾಯ್ದೆರದು ನಿಂತಿದೆ ಹಂಗಿನಲಿ
ಖಂಡವಿದೆ ಕೊ ಮಾಂಸವಿದೆ ಕೊ
ಗುಂಡಿಗೆಯ ಬಿಸಿ ರಕ್ತವಿದೆ ಕೊ ಎನುವ
ಕಾಮಧೇನುವ ಗದರಿಸಿ ಸುಮ್ಮನಿರಿಸಿ
ಸುರಿವ ಮುಗಿಲಿಗೆ ಕಾದಿದೆ ಗದ್ದೆ
ಗದ್ದವನೆತ್ತಿ ಹಣೆಗೆ ಕೈಯಿರಿಸಿ ಕಣ್ಣು ಕಿರಿಗೊಳಿಸಿ
ಬಿರುಬಿಸಿಲ ನಾಡಲ್ಲಿ ಹನಿಯೊಡಬೇಕಿದೆ
ಕಣ್ಣಾಲಿಯ ಹನಿ ಕೆನ್ನೆಗಿಳುವ ಮುನ್ನ
ಮೋಡ ಕೊಡವಬೇಕು ಮುತ್ತುಗಳ ಮೈಯದುರಿಸಿ
ನವಿರೇಳಬೇಕು ನವಿಲ ಗರಿ ಗರಿಗರಿಯಾಗಿ
ಹೆಜ್ಜೆಯೂರಿದಲೆಲ್ಲ ಗೆಜ್ಜೆಯಲಂಕಾರದ ಕಂದು ಕನ್ನಡಿ
ಪ್ರತಿಫಲಿಸಿ ಮೋಡ ಹಿಗ್ಗಿ ಮತ್ತೆ ಮೈದುಂಬಬೇಕು
ಮಡ್ಡಿ ಮೆದುವಾಗಿ ಹದವಾಗಿ ಮತ್ತೆ ಹೆಣ್ಣಾಗಬೇಕು
- ಜಯಲಕ್ಷ್ಮೀ ಪಾಟೀಲ್
26 March 2017
ಉಸ್ಸಂದ್ರೂ ಔಟು ಒಲ್ಲೆ ಅಂದ್ರೂ ಔಟು
ಅಗ್ಗಿ ಹಾಯುತ್ತಲೇ ಇದ್ದೇವೆ
ಅಂದಿನಿಂದ ಇಂದಿನವರೆಗೆ
ನಾಲ್ಕು ಹೆಜ್ಜೆಗೊಂದು ಕೊಂಡ
ಅದರ ತುಂಬಾ ಸಂಶಯದ ಕೆಂಡ
ಅವರೂ ಇವರೂ ಕೊಂಡದ ದೇವರು
ಲಿಂಗಬೇಧವರಿಯದ ಸಮಾನರವರು
ಕೊಂಡ ದಾಟುವಲ್ಲಿ ಕಾಲಿಗಂಟುವ ಬಿಸಿ
ಗೆ ಉಸ್ಸೆನ್ನುವಂಗಿಲ್ಲ ಒಲ್ಲೆಯೆನ್ನುವಂಗಿಲ್ಲ
-ಜಯಲಕ್ಷ್ಮೀ ಪಾಟೀಲ್
ಅಂದಿನಿಂದ ಇಂದಿನವರೆಗೆ
ನಾಲ್ಕು ಹೆಜ್ಜೆಗೊಂದು ಕೊಂಡ
ಅದರ ತುಂಬಾ ಸಂಶಯದ ಕೆಂಡ
ಅವರೂ ಇವರೂ ಕೊಂಡದ ದೇವರು
ಲಿಂಗಬೇಧವರಿಯದ ಸಮಾನರವರು
ಕೊಂಡ ದಾಟುವಲ್ಲಿ ಕಾಲಿಗಂಟುವ ಬಿಸಿ
ಗೆ ಉಸ್ಸೆನ್ನುವಂಗಿಲ್ಲ ಒಲ್ಲೆಯೆನ್ನುವಂಗಿಲ್ಲ
-ಜಯಲಕ್ಷ್ಮೀ ಪಾಟೀಲ್
16 Feb 2017
Subscribe to:
Posts (Atom)