ಹೀಗೇ ಒಮ್ಮೆ ಅಂದರೆ 25/09/2010 ರ ಮದ್ಯಾಹ್ನದಂದು ಮಾತು ಮಾತಲ್ಲಿ ಅವಿ (ಅವಿನಾಶ್ ಕಾಮತ್) ನನಗೆ,
"ಹಿಂದಿ ಸಿನಿಮಾ ‘ಘರ್” ಚಿತ್ರದ ’ತೆರೆ ಬಿನಾ ಜಿಯ ಜಾಯೆ ನಾ...’ ಹಾಡಿನ ಮೀಟರ‍್ಗೆ(ಧಾಟಿ) ಕನ್ನಡದಲ್ಲಿ ಈಗ್ಲೇ ಬರೆಯಿರಿ ನೋಡೋಣ, ಇದು ನಿಮಗೆ ನನ್ನ ಚಾಲೇಂಜ್" ಅಂದ್ರು.
"ತಕ್ಷಣ ಅಂದ್ರೆ ಆಗೊಲ್ಲ ಒಂದು ಗಂಟೆನಾದ್ರೂ ಟೈಮ್ ಕೊಡಬೇಕಪ್ಪಾ ನೀವು" ಅಂದೆ.
ಸರಿ ಅಂದ್ರು.
ಅವ್ರು ಲೋಕಲ್ ಟ್ರೇನ್‍ನಲ್ಲಿ ಬಾಂದ್ರಾದಿಂದ ವಸಯ್ ತಲುಪುವಷ್ಟರಲ್ಲಿ (ಸುಮಾರು ೫೦ ನಿಮಿಷ) ನಾನು ಹಾಡು ಬರೆದು ಎರಡು ಸಲ ಹೇಳಿಕೊಂಡೂ ಆಗಿತ್ತು.
ಈಗ ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಧೈರ್ಯ ಮಾಡುತ್ತಿದ್ದೇನೆ. ನೀವೂ ಆ ಧಾಟಿಗೆ ನಾ ಬರೆದದ್ದನ್ನು ಹಾಡಿಕೊಂಡು ಹೇಳಿ ನಿಮಗೇನನಿಸ್ತು ಅಂತ. ಕೆಳಗಡೆ ಯು ಟ್ಯೂಬ್‍ಯಿಂದ ಆ ಹಾಡಿನ ವಿಡಿಯೊ ಹಾಕಿರುವೆ ನಿಮ್ಮ ಅನುಕೂಲಕ್ಕೆ. :)
ಮನಸಿನ ನಸುಕಂಪನ
ಅರಳಿದೆ ನನ್ನ ತನುಮನ
ನಿನ್ನಯ ನೆನಪಲಿ ಅನುದಿನ
ಹರುಷದಿ ಘಮಿಸುವೆ ನಾ...
ನಿನ್ನಯ ನೆನಪಿನ ಪರಿಮಳ ಸೂಸಿ
ಸಂಭ್ರಮಿಸುವೆ ಆ ಗಂಧವ ಪೂಸಿ
ಕಾಯುವೆ ನಾನು ನಿನ್ನಾ ದಾರಿಯ
ಕಾಯುವೆ ನಾನು...
(ಪ)
ಆಡದೆ ಉಳಿದ ಮಾತುಗಳೆನಿತೊ
ಕಾಡಿಯು ಬಿಡದ ಭಾವಗಳೆನಿತೊ
ನಿನ್ನ ಸನಿಹಕೆ ಹಪಹಪಿಸುತಲೆ
ಚಾತಕವಾಗುವೆ ನಾ...
(ಪ)