Monday, March 12, 2012

ತೆರೆ ಬಿನಾ ಜಿಯ ಜಾಯೆನಾ - ಮನಸಿನ ನಸುಕಂಪನ...



ಹೀಗೇ ಒಮ್ಮೆ ಅಂದರೆ 25/09/2010 ರ ಮದ್ಯಾಹ್ನದಂದು ಮಾತು ಮಾತಲ್ಲಿ ಅವಿ (ಅವಿನಾಶ್ ಕಾಮತ್) ನನಗೆ,

"ಹಿಂದಿ ಸಿನಿಮಾ ‘ಘರ್” ಚಿತ್ರದ ’ತೆರೆ ಬಿನಾ ಜಿಯ ಜಾಯೆ ನಾ...’ ಹಾಡಿನ ಮೀಟರ‍್ಗೆ(ಧಾಟಿ) ಕನ್ನಡದಲ್ಲಿ ಈಗ್ಲೇ ಬರೆಯಿರಿ ನೋಡೋಣ, ಇದು ನಿಮಗೆ ನನ್ನ ಚಾಲೇಂಜ್" ಅಂದ್ರು.

"ತಕ್ಷಣ ಅಂದ್ರೆ ಆಗೊಲ್ಲ ಒಂದು ಗಂಟೆನಾದ್ರೂ ಟೈಮ್ ಕೊಡಬೇಕಪ್ಪಾ ನೀವು" ಅಂದೆ.

ಸರಿ ಅಂದ್ರು.

ಅವ್ರು ಲೋಕಲ್ ಟ್ರೇನ್‍ನಲ್ಲಿ ಬಾಂದ್ರಾದಿಂದ ವಸಯ್ ತಲುಪುವಷ್ಟರಲ್ಲಿ (ಸುಮಾರು ೫೦ ನಿಮಿಷ) ನಾನು ಹಾಡು ಬರೆದು ಎರಡು ಸಲ ಹೇಳಿಕೊಂಡೂ ಆಗಿತ್ತು.

ಈಗ ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಧೈರ್ಯ ಮಾಡುತ್ತಿದ್ದೇನೆ. ನೀವೂ ಆ ಧಾಟಿಗೆ ನಾ ಬರೆದದ್ದನ್ನು ಹಾಡಿಕೊಂಡು ಹೇಳಿ ನಿಮಗೇನನಿಸ್ತು ಅಂತ. ಕೆಳಗಡೆ ಯು ಟ್ಯೂಬ್‍ಯಿಂದ ಆ ಹಾಡಿನ ವಿಡಿಯೊ ಹಾಕಿರುವೆ ನಿಮ್ಮ ಅನುಕೂಲಕ್ಕೆ. :)



ಮನಸಿನ ನಸುಕಂಪನ
ಅರಳಿದೆ ನನ್ನ ತನುಮನ
ನಿನ್ನಯ ನೆನಪಲಿ ಅನುದಿನ
ಹರುಷದಿ ಘಮಿಸುವೆ ನಾ...

ನಿನ್ನಯ ನೆನಪಿನ ಪರಿಮಳ ಸೂಸಿ
ಸಂಭ್ರಮಿಸುವೆ ಆ ಗಂಧವ ಪೂಸಿ
ಕಾಯುವೆ ನಾನು ನಿನ್ನಾ ದಾರಿಯ 

ಕಾಯುವೆ ನಾನು...
(ಪ)

ಆಡದೆ ಉಳಿದ ಮಾತುಗಳೆನಿತೊ
ಕಾಡಿಯು ಬಿಡದ ಭಾವಗಳೆನಿತೊ
ನಿನ್ನ ಸನಿಹಕೆ ಹಪಹಪಿಸುತಲೆ
ಚಾತಕವಾಗುವೆ ನಾ...
(ಪ)



12 comments:

ಮನಸು said...

chennagide...

Swarna said...

Sweet. One of the finest female solos :)

ತೇಜಸ್ವಿನಿ ಹೆಗಡೆ said...

Good attempt madam :)

Badarinath Palavalli said...

ಈ ಹಾಡು ನಿಮ್ಮ ಕಲೆವಂತಿಕೆಯಿಂದ ಚೆನ್ನಾಗಿ ಮೂಡಿ ಬಂದಿದೆ. ನಾನು ಹಾಡಲು ಪ್ರಯತ್ನಿಸುತ್ತೇನೆ.

sunaath said...

ಮೇಡಮ್,
ನಿಮ್ಮ ಕವನಕ್ಕೆ ಮಾರುಹೋದೆ ನಾ. ಮೂಲಕವನದಲ್ಲಿ ಕಾಣದ ಭಾವನೆಯ ಸೊಬಗು ನಿಮ್ಮ ಕವನದಲ್ಲಿದೆ. ಹಾಡಿಕೊಳ್ಳಲೂ ಸಹ ಚೆನ್ನಾಗಿದೆ. ಚಲನಚಿತ್ರಕ್ಕೂ ಸಹ ಹೊಂದಿಕೊಳ್ಳುವಂತಿದೆ. ಮೂಲಕವನದ ಧಾಟಿಗೆ ಸರಿಯಾಗಿದೆ. ಅವಿನಾಶ ಕಾಮತರು ಪಂದ್ಯದಲ್ಲಿ ಸೋತಿದ್ದಾರೆ ಎಂದು ದಯವಿಟ್ಟು ತಿಳಿಸಿ.

Jayalaxmi said...

ಮನಸು ಅವರೇ, ಥ್ಯಾಂಕ್ಸು. :)

Jayalaxmi said...

ಸ್ವರ್ಣ, ನಿಜ. :)

Jayalaxmi said...

ಥ್ಯಾಂಕ್ಸ್ ತೇಜು. :)

Jayalaxmi said...

ಬದರಿನಾಥ್ ಸರ್, ಹಾಡಿಕೊಂಡಿರಾ? ಹೇಗನಿಸ್ತು? :)

Jayalaxmi said...

ಸುನಾಥ್ ಕಾಕಾ, ಅನಂತ ಧನ್ಯವಾದಗಳು. :) ನಿಮ್ಮ ಮಾತುಗಳನ್ನು ಅವಿನಾಶ್ ಅವರಿಗೆ ತಲುಪಿಸಿದೆ. ಅವರು "ಬಹಳ ಖುಷಿಯಿಂದ ಸೋತಿದ್ದೇನೆ ಎಂದು ನೀವು ಸುನಾಥ್ ಅವರಿಗೆ ತಿಳಿಸಿ :)" ಎಂದಿದ್ದಾರೆ. ರಾಯಭಾರಿ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿರುವೆ. ನನಗೆ ಮತ್ತೊಮ್ಮೆ ಶಬ್ಬಾಸ್ ಹೇಳಿ ಕಾಕಾ. :):)

sunaath said...

ಮೇಡಮ್,
ಶಹಭಾಶ್! ಶಹಭಾಶ್!!
ನಿಮ್ಮ ಕವನಪ್ರತಿಭೆ ಹಾಗು ಕಲಾಪ್ರತಿಭೆ ಅರಳುತ್ತ ಹೋಗಲಿ ಎಂದು ಹಾರೈಸುತ್ತೇನೆ.

ಈಶ್ವರ said...

ಆಹಾ, ಒಳ್ಳೆ ಹಾಡು :) ಒಳ್ಳೆ ಕವನ ಮೇಡಂ :))