Monday, January 7, 2013

ಈ ತಿಳಿಗೊಳ ಕಲಕಿ ತಳ ಅಸ್ಪಷ್ಟವಾದಾಗಲೆಲ್ಲ, ಕೊಳದ ಅಲೆ ಅಲೆಯಲ್ಲೂ ನೂರೆಂಟು ಪ್ರಶ್ನೆಗಳ ಹೊಯ್ದಾಟ. ಈ ಹೊಯ್ದಾಟಕ್ಕೆ ಸಮಾಧಾನದ ಬಿಸುಪು ದೊರೆತಲ್ಲಿ, ಕೊಳದ ತಳದಲ್ಲಿ ನನ್ನನ್ನು ಅಥವಾ ನಮ್ಮನ್ನು ಹುಡುಕಿಕೊಳ್ಳಬಹುದೇನೊ...
ಕನಸ ಕೊಲ್ಲುವುದ
ಹೇಳಿಕೊಡು ಗೆಳೆಯ
ಕಡಿದಷ್ಟು ಕೊನರುತಿದೆ
ತಬ್ಬಿ ಹಬ್ಬುತಿದೆ ಕನಸ ಬಳ್ಳಿ
ಚಿವುಟಿ ಸರಿಸಲೆತ್ನಿಸಿದಷ್ಟು
ಚಿಗುರಿ ನಳನಳಿಸಲೆತ್ನಿಸುತಿದೆ
ಸಂಬಂಧದ ಬೆಸುಗೆ
ತಬ್ಬಿ ಹಬ್ಬಲೆತ್ನಿಸುವ
ನನ್ನ ಈ ಬಯಕೆಯ ಬಳ್ಳಿಗೆ ಬೆಂಕಿಯಿಟ್ಟು
ಯಜ್ಞ ಎಂದುಕೊಳ್ಳುತ್ತಿರುವೆ...