ಕನಸ ಕೊಲ್ಲುವುದ
ಹೇಳಿಕೊಡು ಗೆಳೆಯ
ಕಡಿದಷ್ಟು ಕೊನರುತಿದೆ
ತಬ್ಬಿ ಹಬ್ಬುತಿದೆ ಕನಸ ಬಳ್ಳಿ
ಚಿವುಟಿ ಸರಿಸಲೆತ್ನಿಸಿದಷ್ಟು
ಚಿಗುರಿ ನಳನಳಿಸಲೆತ್ನಿಸುತಿದೆ
ಸಂಬಂಧದ ಬೆಸುಗೆ
ತಬ್ಬಿ ಹಬ್ಬಲೆತ್ನಿಸುವ
ನನ್ನ ಈ ಬಯಕೆಯ ಬಳ್ಳಿಗೆ ಬೆಂಕಿಯಿಟ್ಟು
ಯಜ್ಞ ಎಂದುಕೊಳ್ಳುತ್ತಿರುವೆ...
ಹೇಳಿಕೊಡು ಗೆಳೆಯ
ಕಡಿದಷ್ಟು ಕೊನರುತಿದೆ
ತಬ್ಬಿ ಹಬ್ಬುತಿದೆ ಕನಸ ಬಳ್ಳಿ
ಚಿವುಟಿ ಸರಿಸಲೆತ್ನಿಸಿದಷ್ಟು
ಚಿಗುರಿ ನಳನಳಿಸಲೆತ್ನಿಸುತಿದೆ
ಸಂಬಂಧದ ಬೆಸುಗೆ
ತಬ್ಬಿ ಹಬ್ಬಲೆತ್ನಿಸುವ
ನನ್ನ ಈ ಬಯಕೆಯ ಬಳ್ಳಿಗೆ ಬೆಂಕಿಯಿಟ್ಟು
ಯಜ್ಞ ಎಂದುಕೊಳ್ಳುತ್ತಿರುವೆ...
2 comments:
ಕನಸಿಲ್ಲದೆ ಕವನ ಬರೆಯಬಹುದೆ? ಉತ್ತಮ ಕವನಗಳನ್ನು ಬರೆಯಬಲ್ಲವರ ಕನಸುಗಳು ಸಾಯುವದಿಲ್ಲ!
ಮ್... ಹಂಗಂತ ಕನಸು ಬಲವಂತವಾಗಿ ಹುಟ್ಟಿದ್ರ ಬದುಕೂದೂ ಇಲ್ಲ, ಅಲ್ಲೇನ್ರಿ ಕಾಕಾ?
Post a Comment