Tuesday, January 8, 2013

ಜೀವನದಿ...



ಹುಚ್ಚು ನದಿಗಳಿವು
ಓಡಿಯೇ ಓಡುತ್ತವೆ
ಸಾಗರದೆಡೆಗೆ!
ಇಳುಕಲಂತೆ ಓಟವಂತೆ
ಮೋಡಿಯಂತೆ 
ಮಿಲನ ಸಾರ್ಥಕತೆಯಂತೆ!!
ಎಂಥಾ ನಿಯತ್ತಂತೀರಿ
ಇವುಗಳ ಗಮ್ಯ ಕೇವಲ
ಸಾಗರ ಮಾತ್ರ
ಜುಳುಜುಳು ಜುಳುಜುಳು
ಜುಳುಜುಳು... 
ಮಾರ್ಗ ಮಧ್ಯ
ಲಕ್ಷ ಲಕ್ಷ
ಜೀವಗಳಿಗೆ ಒಡಲಾಧಾರ
ಹುಚ್ಚು ನದಿಗಳು!
ಒಂಟಿಯಾಗಿದ್ದಾಗ ಇದ್ದ
ಅಮೃತ ಸ್ವಾದ
ಸಾಗರ ಸೇರಿದೊಡನೆ ನಿಃಸ್ವಾದ
ಸ್ವಂತಿಕೆ ಮತ್ತು ಇರುವಿಕೆ
ಎರಡೂ ಶಿವನ ಪಾದ!

(2008ರ ಕೊನೆಯಲ್ಲಿ ಮುಂಬೈನ ‘ಸೃಜನಾ’ಬಳಗದಿಂದ ಡಾ. ತಾಳ್ತಜ್ಜೆಯವರಿಗೆ ಗೌರವಪೂರ್ವಕ ನುಡಿನಮನ.  ಅದಕ್ಕಾಗಿ ಬರೆದ ಕವನವಿದು.)

6 comments:

sunaath said...

`ಸ್ವಂತಿಕೆ ಮತ್ತು ಇರುವಿಕೆ
ಎರಡೂ ಶಿವನ ಪಾದ!'
ವಾಹ್!

Jayalaxmi said...

...:)

Badarinath Palavalli said...

ನದಿ ಪ್ರತಿಮೆಯನ್ನು ಅತ್ಯುತ್ತಮವಾಗಿ ಬಳಸಿದ್ದೀರ.

ಒಳ್ಳೆಯ ಸಂಗಮ ಕವನ.

Jayalaxmi said...

ನನ್ನಿ ಬದರಿನಾಥ್.

bharathi said...

entha asahaayakathe alvaa ....

Jayalaxmi said...

ಭಾರ್ತಿ: ಮ್...