Saturday, June 14, 2008

ರಾಧೆ ಎಲ್ಲಿ ? ತಿಳಿದವರು ಹೇಳುವಿರಾ?...

ರಾಧಾ- ಮಾಧವರ ಪ್ರೀತಿ ಅಮರ, ಮಧುರ . ಯಾರಿಗೆ ಗೊತ್ತಿಲ್ಲ ಹೇಳಿ? ನನ್ನನ್ನು ಕಾಡುವ ಪ್ರಶ್ನೆ ಅಂದರೆ ಕೃಷ್ಣನ ಹೆಸರಿನೊಂದಿಗೆ ಅಂಟಿಕೊಂಡ ರಾಧೆ, ಕೃಷ್ಣ ಅವಳನ್ನು ತೊರೆದು ಹೋದ ನಂತರ ಏನಾದಳು?.... ಅವನ ನೆನಪಲ್ಲೇ ಕೊರಗುತ್ತಾ ಒಂಟಿಯಾಗಿದ್ದಾಳೆ?... ಅವಳೂ ಊರು ತೊರೆದಳೆ?... ಮರಳಿ ತನ್ನ ಗಂಡನೊಂದಿಗೆ ಸಂಸಾರ ನಡೆಸಿದಳೆ?....ಅಥವಾ ......... ಇಲ್ಲವಾದಳೆ?!
ಏನಾದಳು ರಾಧೆ ? ಅಷ್ಟೆಲ್ಲ ರಾಧಾ - ಮಾಧವರ ಪವಿತ್ರ ಅಮರ ಪ್ರೀತಿಯನ್ನು ವರ್ಣಿಸಿ ಬರೆದ ಕವಿ ನಂತರ ಯಾಕೆ ಮೌನವಾದ ರಾಧೆಯ ವಿಷಯದಲ್ಲಿ? ಏನಾದಳು ರಾಧೆ? ದಯವಿಟ್ಟು ಅವಳ ಕುರಿತು ಹೆಚ್ಚಿಗೆ ತಿಳಿದಿದ್ದರೆ ನನಗೆ ತಿಳಿಸುವಿರಾ?
ಸಾಕೆ ರಾಧೆಗೆ ಕೃಷ್ಣನ ಹೆಸರಿನೊಟ್ಟಿಗೆ ಅವಳ ಹೆಸರು ಸೇರಿಸಿ ಕರೆದರೆ? ಬೇಡವೆ ಅವನ ಪ್ರೀತಿ ಬದುಕಿಡೀ? ಸಹಿಸುವಳೆ ರಾಧೆ ತನ್ನ ಹೊರತು ಬೇರೆಯವರನ್ನು ಕೃಷ್ಣ ಪ್ರೀತಿಸುವುದನ್ನು ? ಏನಾದಳು ರಾಧೆ? ...
ಶತಶತಮಾನದಿಂದ ಪರ ಪುರುಷ,ಪರ ಸ್ತ್ರೀ ಯನ್ನು ಪ್ರೀತಿಸುವುದು ಅಥವಾ ಮೊಹಿಸುವುದು ಭಾರತೀಯ ಸಂಪ್ರದಾಯದಲ್ಲಿ ನಿಷಿದ್ಧ ಎನ್ನುವಂತೆ ಬಿಂಬಿಸಿಕೊಂಡು ಬರಲಾಗಿದೆಯಲ್ಲವೇ? ಹಾಗಿದ್ದ ಮೇಲೆ ರಾಧಾ ಮಾಧವರ ಪ್ರೀತಿಯನ್ನು ನಮ್ಮ ಭಾರತಿಯ ಸಂಪ್ರದಾಯ ಇಷ್ಟು ಸುಲಭವಾಗಿ ಸ್ವೀಕರಿಸಿದ್ದು ಹೇಗೆ? ಯಾಕಾಗಿ?... ದಯವಿಟ್ಟು....
ಮತ್ತೊಮ್ಮೆ ಕೇಳುವೆ ರಾಧೆ ಎಲ್ಲಿ? ...

12 comments:

Ahalya said...

nanage tilidashtu...1.nrityada theory prakaara, Radha(or gopike)mattu Krishnara naduvina sambandhavannu jeevaatma-paramaatmana sambandhakke roopaka anta tagollodu.
2.Ondu cheluvaada kalpane:(K.M.Munshi : 'Krishnavatara'dalli Krishna heltaane..Naanu Vrindavanadalle endigoo gopaalakanagiye iruttene emba khatri nanagittu..adakke Radheyannu pritiside.Aadare Mathureyinda nanage kare bandaaga,avalannoo allige taruvudu kroora aagiruttittu."She was born to be an exquisite flower in the spring and would never have survived the hot winds of the life I was called upon to face.
I, with my mission to fulfil, could not have played the gay cowherd,who was the very breath of her life.So I parted from her."
3. Nanna vayyaktika abhipraaya: illi keliro ondondu prashnegoo ondondu saadhyate itkondu kavana/kathe/sambhaashane(Bhaageeratiyavara Shakuntala taraha)baredare hege?
-Ahalya

Jayalaxmi said...

naaTya prakaaradalliya radha-krishnara sambandhada bagge tiLisiddakke thnks.gottiralilla. krishna gOkuladinda horaDuvaaga maraLi baruttEne endEnaadaru raadhege hELiddane? adara kuritu naaTya shaastradalli vivaraNe ideye? naanilli BHAASHE , PRAMAANA anno shabdhagaLannu muddaam upayOgisuttilla.
neevu koTTa idea chennaagide.
prayatnisONave?

Avinashkamath said...

Ibbaroo sEri prayatnisi... RadhegEnaayto? Krishna EnaadnO gottilla... Aadre ondu oLLeya naaTaka horabarabahudemba aase maatra huTTide.

Anonymous said...

ರಾಧೆಯ ಕೂದು, ಕೊರಗು, ಶತಮಾನಗಳಿಂದ ಅನನ್ಯವಾಗಿದೆ, ಅದೇ ಅವಳ ತಾಳ್ಮೆ, ಪ್ರೀತಿಗೆ ಸಂಕೇತ. ಆದರಿಂದಳೆ ಅವಳಷ್ಟು ಅಮರ.

ಚೆನ್ನಾಗಿದೆ! ಮುಂದುವರೆಸಿ. :)

Anonymous said...

ರಾಧೆಯಿಲ್ಲದ ಕೃಷ್ಣನೇನಾದ ಎಂದು ಹೇಳುವ ಕವನ ಇಲ್ಲಿದೆ... http://shree-lazyguy.blogspot.com/2008/07/blog-post_27.html

Veena Shivanna said...

ech.es venkatesh murthy bardiro, raadhe kooda lokada kannige ondu heNNU anno kavana nenpaytu.

neev heLiro tara, radha krishnara premadalliro paavithreyethe ella barahagaLallu bimbithavaagide haagu aakeya tyaagada sanketa kooda(andre premisada aake krishananne maduve aagbeku anno hambala athva krishna nangoblige sigbeku anno swaartha avaligirlilla antha ello odida nenpu). nange sariyagi gottilla. but amele radhe ellige hodlu antha ellu sariyaagi chitrita vaagilla(nange gottiro mattige) bahushaha, avaravara bhaavakke hege bekO haage anusarisbahudu.

ahalya needida base tumba chennaagide. infact namma shaastriya nrithya/sangeethadalli inthaha estondu sanniveshagaLu tumba chennagi chitrita gondide.

Jayalaxmi said...

ನಿಮ್ಮಿಂದಲೂ ಅದೇ ಉತ್ತರ ವೀಣಾ..:-( ಕೃಷ್ಣ ಗೋಕುಲ ತೊರೆದು ಹೋದ ನಂತರ ರಾಧೆಯ ಕಥೆ ಏನಾಯ್ತು ಅನ್ನೋದು ಮಹಾಭಾರತದಲ್ಲೂ ಇಲ್ಲವಂತೆ,ತುಂಬಾ ಜನರನ್ನ ಕೇಳಿದೀನಿ. ಅಹಲ್ಯ ಅಕ್ಕನ ಪರಿಚಯ ನಿಮಗೆ ತುಂಬಾ ಶಾರ್ಟ್ ಆಗಿ ಹೇಳಬೇಕೆಂದರೆ ಆಕೆ ಒಬ್ಬ ಅದ್ಭುತ ನಟಿ ಮತ್ತು ಭರತನಾಟ್ಯ ಪ್ರವೀಣೆ. ಮುಂಬೈನಲ್ಲಿರ್ತಾರೆ. ತುಂಬಾ ಸೂಕ್ಷ್ಮ ಮನಸಿನಾಕೆ.

RK said...

Radhe indigu Vrundavandali muraliya gaanada lahariyali,
krshnana sanihadali,
muraliganada nadadali,

ellara manasina nishkalmasha preetiyali

Radhe indigu iruvalanthe,

nijave

Jayalaxmi said...

ನಿಜವಿರಬಹುದು ವಿನಯ್. ವೃಂದಾವನದಲ್ಲಿ ಅಲ್ಲದಿದ್ದರೂ ಎಷ್ಟೋ ಹೆಣ್ಣು ಹೃದಯಗಳಲ್ಲಿ ರಾಧೆ ಪ್ರೀತಿಯ ಧಾರೆಯಾಗಿ ನೆಲೆಸಿದ್ದಾಳೆ.

Unknown said...

Like many of us here - I just like to share few of my thoughts..

I many times wondered about the married life of Radha. If her husband was ever approval of her love on Krishna or not.
Vidya Vachaspati Bannaje Govindacharya said over a Bhagavatha pravachan - Krishna was hardly 8-10 year old kid when in Vridavan - and any husband wouldn't mind his wife spending time (day/night) with a Kid who's so cute and charming! I personally don't know if Krishna - Radha had physical relationship. Looking at the widespread acceptance of Radha - Krishna love probably I've to accept Krishna as a kid over here..

There is also a version of ISKAN (which I think I remember)- Radha was not elder to Krishna. She was not married and She was of the same age as Krishna. And they shared everything in that love.. Probably this is also more acceptable.

Bannaje continues over a pravachan - In Vrindavan, on some occassion few ladies offered food to Krishna n his troop before even the food was offered to God. Few ladies litterally thought Krishna was God. Because of this some ladies got praise from their husbands and some scoldings. And one lady even committed suicide after taking scolding from her husband..So all such incidents did happen then also!

Why I bought the discussion of their relationship here is - if Radha had her husband who thinks Krishna was a kid - Radha wouldn't have had any complications in her life later. Nowhere mentioned she did committ suicide. I hope she is strong enough. Much has been told about her patience, love.. So she must have lived very happily - in the memory of Krishna. For the one who has that deep love (without any selfishness/ attachment to wed him) - spending life with the memory of that devine love once shared is not difficult.. Actually we can imagine that.... only love without selfishness/attachment can give us that happiness!

We do have many Radha / Krishna amidst us.
I wonder why we label them different?

Sorry if I've sounded offensive anywhere!
Enadru tappidre dayavittu Kshamisi!

ಗಿರೀಶ ರಾಜನಾಳ said...

ಇದನ್ನ ತಿಳ್ಕೊಬೇಕಾದ್ರೆ ಮತ್ತೆ ವ್ದಾಪರಯುಗಕ್ಕೇ ಹೋಗಬೇಕಾದೀತೇನೋ...

Swarna said...

ಇವತ್ತು ನಿಮ್ಮ ಪೋಸ್ಟ್ ನೋಡಿದೆ ಈ ತರಹದ ಪ್ರಶ್ನೆಗಳು ಪುರಾಣದ ಹಲವಾರು ಪಾತ್ರಗಳ ಬಗ್ಗೆ ನಂಗೂ ಇದೆ
ರಾಧೆಯ ಬಗ್ಗೆ ಹೆಚ್ಚು ತಿಳಿದಿಲ್ಲ ಆದ್ರೂ ತಿಳಿದದ್ದನ್ನ ಹೇಳೋಕೆ ಪ್ರಯತ್ನ ಪಡ್ತೀನಿ, ನಿಮಗೆ ಈ ವಿಷಯಗಳು ಈಗಾಗಲೇ ಗೊತ್ತಿರಲಿಕ್ಕೂ ಸಾಕು
೧. ಅಷ್ಟಾದಶ ಪುರಾಣಗಳಲ್ಲಿ ಕೆಲವು (ಬಹುಶಃ ವಿಷ್ಣು ಪುರಾಣ ಮತ್ತು ಪದ್ಮ ಪುರಾಣ ) ಮಾತ್ರ ರಾಧೆಯ ಅಸ್ಥಿತ್ವವನ್ನು ಹೇಳುತ್ತವೆ. ಮಹಾಭಾರತದಲ್ಲಿ ಬರುವ ಭಾಗವತದಲ್ಲಿ ಅವಳ ಉಲ್ಲೇಖವಿಲ್ಲ.
೨. ಎಲ್ಲೋ ಕೇಳಿದ ಒಂದು ಕಥೆ :
ಒಂದೊಮ್ಮೆ, ಕೃಷ್ಣನಿಗೆ ರಾಧೆಯಲ್ಲಿದ್ದ ಒಲವನ್ನು ಕಂಡು ರುಕ್ಮಿಣಿ,ಭಾಮೆಯರು ಮುನಿಸಿಕೊಳ್ಳುತ್ತಾರೆ.ಕೃಷ್ಣ ತುಂಬಾ ಹೊಟ್ಟೆ ನೋವೆಂದು ನಟಿಸುತ್ತಾನೆ,ತನ್ನನ್ನು ನಿಜವಾಗಿಯೂ ಪ್ರೇಮಿಸುವವರ ಪಾದ ತೀರ್ಥದಿಂದ ಇದು ಶಮನವಾಗತ್ತೆ, ಅಂತ ತಾನೇ ಮದ್ದನ್ನೂ ಹೇಳುತ್ತಾನೆ. ಮಥುರೆಯಲ್ಲಿ ತೀರ್ಥ ಸಿಗದಾದಾಗ ಸೇವಕರನ್ನು ಗೋಕುಲಕ್ಕೆ ಕಳಿಸುತ್ತಾನೆ.ಸೇವಕರು ಅಲ್ಲಿ ವಿಷಯವನ್ನು ತಿಳಿಸಿದ ಒಡನೆಯೇ ಹೆಣ್ಣೊಬ್ಬಳು ತೀರ್ಥ ತಂದು ಕೊಡುತ್ತಾಳೆ. ಆ ತೀರ್ಥ ಕುಡಿದ ಮಾಧವನ ನೋವೆಲ್ಲಾ ಮಾಯವಾಯ್ತೆಂದು ಬೇರೆ ಹೇಳಬೇಕಿಲ್ಲ, ಕೃಷ್ಣ ಹೇಳುತ್ತಾನೆ ಒಂದೆ ಮನದಿ ತೀರ್ಥ ಕೊಟ್ಟ ಹೆಣ್ಣು ರಾಧೆ!
ಇದು ಜನಪದ ಕಥೆಯೋ , ಪುರಾಣಗಳಲ್ಲಿ ಉಲ್ಲೇಖವಾಗಿದೆಯೋ ಗೊತ್ತಿಲ್ಲ. ಇದು ಪುರಾಣದಿಂದ ಆಯ್ದು ಕೊಂಡದ್ದಾದರೆ ಕೃಷ್ಣ ತೊರೆದ ಮೇಲೂ ರಾಧೆ ಗೊಕುದಲ್ಲಿದ್ದಳು ಅಂತ ಅನ್ಕೋಬಹುದು, ಆದರೆ ಅವಳ ಅಂತ್ಯದ ಬಗ್ಗೆ,ಅವತಾರಿಯ ಜೊತೆಗಿನ ಅವಳೂ ಅವತಾರಿಯೇ ಎಂಬ ಪೌರಾಣಿಕ ಹಿನ್ನೆಲೆಯ ಬಗ್ಗೆ ನಾನೂ ಹುಡುಕುತ್ತಿದ್ದೇನೆ.
೩. ಮೊನ್ನೆ ಒಂದು ಹಿಂದಿ ಭಾಗವತ ಸಪ್ತಾಹದಲ್ಲಿ ಬಾರಿ ಬಾರಿ "ಬೋಲೋ ರಾಧೆ ರಾಧೇ " ಅಂತ ಹೇಳೋದು ಕೇಳೋಕೆ ಚೆನ್ನಾಗಿತ್ತು .