Wednesday, June 17, 2009

ರೇಶ್ಮೆಯ ನುಣುಪು

ರೇಶ್ಮೆಯ ನುಣುಪು
ಸಂಬಂಧಕ್ಕೆ..
ನಾಜೂಕು ಮಾಡಬೇಕು
ಜಾರಿಬೀಳದಂತೆ ಜೋಪಾನವಾಗಿರಬೇಕು
ಅಮೂಲ್ಯ ರೇಶಿಮೆ ಹೊದ್ದಿದ್ದೇನೆ
ಸುಕ್ಕಾಗದಂತೆ, ಕೊಳೆಯಾಗದಂತೆ
ನೋಡಿಕೊಳ್ಳುವ ಆತಂಕದೊಡನೆ
ಸಂಭ್ರಮಿಸುತ್ತಿದ್ದೇನೆ
ರೇಶಿಮೆ ತೊಟ್ಟ ಸುಖವನ್ನು,ಇಷ್ಟರಲ್ಲೇ ಕಳಚಿ
ಕಪಾಟಿನಲ್ಲಿ
ಭದ್ರವಾಗಿಡಬೇಕು
ಮುಚ್ಚಿ ಅನ್ನುವ ವಾಸ್ತವಕ್ಕೆ
ಬೆನ್ನು ಹಾಕಿ..

7 comments:

shivu.k said...

ರೇಷ್ಮೆಯ ನುಣುಪಿನ ಬಗ್ಗೆ ಸೊಗಸಾದ ಕವನ...

Jayalaxmi said...

ಧನ್ಯವಾದ ಶಿವು ಅವರೆ..

Jayalaxmi said...

ನಿಮ್ಮ ಮೆಚ್ಚುಗೆಗೆ ಧನ್ಯವಾದ ಶಿವಶಂಕರ್.

Ittigecement said...

ಜಯಲಕ್ಷ್ಮೀಯವರೆ.....

"ರೇಶಿಮೆ ತೊಟ್ಟ
ಸುಖವನ್ನು, ಇಷ್ಟರಲ್ಲೇ
ಕಳಚಿ ಕಪಾಟಿನಲ್ಲಿ
ಭದ್ರವಾಗಿಡಬೇಕು ಮುಚ್ಚಿ
ಅನ್ನುವ ವಾಸ್ತವಕ್ಕೆ
ಬೆನ್ನು ಹಾಕಿ.."


ಆಂತರ್ಯದ ಒಳಮಾತು...
ಚೆನ್ನಾಗಿ ವ್ಯಕ್ತವಾಗಿದೆ....

ಬಹಳ ಇಷ್ಟವಾಯಿತು...
ನೀವು ಕವಯಿತ್ರಿ ಅನ್ನುವದು ಗೊತ್ತಿರಲಿಲ್ಲ...

ಚಂದದ ಕವನಕ್ಕೆ ಅಭಿನಂದನೆಗಳು..

Jayalaxmi said...

ಧನ್ಯವಾದ ಪ್ರಕಾಶ್. ’ನೀಲ ಕಡಲ ಬಾನು’ ನನ್ನ ಏಕೈಕ ಕವನ ಸಂಕಲನ. ಹೀಗಾಗಿ ಕವಿಯಿತ್ರಿ ಅನ್ನುವ ಮಾತು ಹೆಚ್ಚಾಯಿತೇನೊ..ಆಗಾಗ ಹಾಗೆ ಸುಮ್ಮನೆ ಬರೀತಿರ್ತೀನಿ.

ಜಲನಯನ said...

ಮಂಗಳತ್ತೆ...!!! ಹಹಹ...ಸಾರಿ...ಜಯಲಕ್ಷ್ಮಿ ಮೇಡಂ....ನಾನು...ಜಲನಯನ....
ನಿಮ್ಮ ಪರಿಚಯವಾದ್ದು ನನಗೆ ಬಹಳ ಸಂತೋಷಕರ ಸಂಗತಿ ಏಕೆಂದರೆ ..ನಾನೂ.. ರಂಗ ಮತ್ತು ನಟನೆಗೆ ಒಂದು ರೀತಿಯಲ್ಲಿ ಮಾರುಹೋದವನು...ಮತ್ತು ...ಒಮ್ಮೆ ನನ್ನ ಬೆಲೆಬಾಳುವ ವಸ್ತುವೊಂದನ್ನು ಮಾರಿ (ನನ್ನ ನೌಕರಿ ಸಿಗುವುದಕ್ಕಿಂತ ಕೊಂಚ ಮೊದಲ ದಿನಗಳಲ್ಲಿ) ನಮ್ಮ ಗೆಳೆಯರ ಬಳಗದ ನಾಟಕದ ಸ್ಟೇಜ್ ಗೆ ಖರ್ಚುಮಾಡಿದ್ದೆ...ಬಣ್ಣ ಹಚ್ಚಿ ರಂಗಕ್ಕಿಳಿದು ಖುಷಿಪಟ್ಟಿದ್ದೆ.
ನಿಮ್ಮ ಮಂಗಳತ್ತೆ...ಪಾತ್ರ..ನನಗೆ ಇಷ್ಟವಾಗದ ಪಾತ್ರ.....ಆದರೆ ಅದಕ್ಕೆ ತುಂಬು ಜೀವ ತುಂಬಿ ನಿಮ್ಮ ಪ್ರತಿಭೆಯನ್ನು ಮೆರೆದಿದ್ದೀರ.....ಪರಾಕ್...ಬಹು ಪರಾಕ್....
ನನ್ನ ನಿಜ ನಾಮಧೇಯ....!!!!???? ....ನನ್ನ ಬ್ಲಾಗ್ ಗೆ ಭೇಟಿ ಕೊಡಿ..ಹಾಗೇ...ಹೇಳಲಾಗದು...ಆಯ್ತಾ...!!!??

ನಿಮ್ಮ ರೇಶಿಮೆ ಕವನ ನಯವಾಗಿ ಮೂಡಿದೆ...ಮಾಸುವುದಿಲ್ಲ ಬಿಡಿ...ಕಾಳಜಿ ಬೇಡ...

Anonymous said...

jayakkaa... thumba bhaava poorna.. odi mugidaaga kannanchu odde...