ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈ ಹಿಂದೆ ನಾನು ರಾಮಚಂದ್ರ ಪಿ ಎನ್ ಅವರ ನಿರ್ದೇಶನದ, ನಾನು ಅಭಿನಯಿಸಿದ ಮಕ್ಕಳ ಚಿತ್ರ 'ಪುಟಾಣಿ ಪಾರ್ಟಿ' ಯ ಬಗ್ಗೆ ಲೇಖನವೊಂದನ್ನು ಬರೆದಿದ್ದೆ. ಈಗ ಅದರ ಟ್ರೇಲರ್ ನಿಮಗೆಲ್ಲ ನೋಡಿಸುವ ಆಸೆ ನನಗೆ.
http://www.youtube.com/watch?v=_bqhIeWo988
ಬಹುಶಃ ಬಿಡುಗಡೆಗೆ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೇನೋ.. ನಿಮ್ಮಂತೆ ನಾನೂ ಕಾತರಳಾಗಿದೀನಿ ಈ ಚಿತ್ರವನ್ನು ಥೇಟರ್^ನಲ್ಲಿ ನೋಡೋಕೆ. ಸಧ್ಯಕ್ಕೆ ಇಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳೋಣ.
http://www.youtube.com/watch?v=_bqhIeWo988
ಬಹುಶಃ ಬಿಡುಗಡೆಗೆ ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೇನೋ.. ನಿಮ್ಮಂತೆ ನಾನೂ ಕಾತರಳಾಗಿದೀನಿ ಈ ಚಿತ್ರವನ್ನು ಥೇಟರ್^ನಲ್ಲಿ ನೋಡೋಕೆ. ಸಧ್ಯಕ್ಕೆ ಇಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳೋಣ.
8 comments:
ಪುಟಾಣಿ ಪಾರ್ಟಿಯ ಟೀಸರ್ ನೋಡಿದೆ.. ತುಂಬ ಕುತೂಹಲ ಮೂಡಿದೆ. ಒಂದು ಕ್ಷಣ ಕಂಡು ಮಾಯವಾಗುವ ನೀವು, ಅದರಲ್ಲೂ ತುಂಬ ಸುಂದರವಾಗಿ ಕಾಣುತ್ತಿದ್ದೀರಿ.. :-)
ಸರಕಾರ ನಿರ್ಮಿಸಿದ ಫಿಲ್ಮ್ ಅಲ್ವೇ?? ಬಿಡುಗಡೆಗೆ ಮುಂಚೆ ಸಾಕಷ್ಟು ಸರ್ಕಸ್ ಇರುತ್ತೆ ಬಿಡಿ.. ಆದರೂ ಬಹುಬೇಗ ಬಿಡುಗಡೆ ಆಗಿ ’ಸುದ್ಧ’ ದಂತೆ ಪ್ರೇಕ್ಷಕರ ಮನಸೂರೆಗೊಳ್ಳಲಿ ನಿಮ್ಮ ’ಪುಟಾಣಿ ಪಾರ್ಟಿ’
ಅಂದ ಹಾಗೆ ಕೊನೆಯ ಶಾಟ್ ನಲ್ಲಿ ripple ನ್ನು ನೋಡುತ್ತಿರುವ ಹುಡುಗನ ದೃಷ್ಯ ತುಂಬ ಹಿಡಿಸಿತು.. :) All the best
ಜಯಲಕ್ಷ್ಮೀಯವರೆ....
ತುಂಬಾ ಕುತೂಹಲ...
ಹೇಗಿರ ಬಹುದು ಈ ಸಿನೇಮಾ...?
ನಿರ್ದೇಶಕರ ಪ್ರತಿಭೆಗೆ ಎರಡು ಮಾತಿಲ್ಲ...
ಸಿನೇಮಾ ಜೊತೆ, ನಿಮ್ಮ ಅಭಿನಯವನ್ನೂ ನೋಡುವಾಸೆ
ನಮ್ಮೆಲ್ಲರದು...
ವಿವರಗಳನ್ನು ಸಧ್ಯದಲ್ಲಿಯೇ ನೋಡುವಂತಾಗಲಿ...
ನಿಮಗೂ, ಚಿತ್ರ ತಂಡಕ್ಕೂ ಶುಭ ಹಾರೈಕೆಗಳು...
ಜಯಕ್ಕ, ಇದು ಡಾಕ್ಯುಮೆಂಟರೀನಾ..? ಚನ್ನಾಗಿದೆ..ಟ್ರೇಲರ್....ಬಹುಶಃ ನಮಗೆ ಚಿತ್ರ್ ಥಿಯೇಟರಲ್ಲಿ ನೊಡುವ ಯೋಗ ಇದೆಯೋ ಇಲ್ಲವೋ ತಿಳಿಯದು, ಸಿಡಿ ಏನಾದರೂ ಬಿಡುಗಡೆಯಾದರೆ ತಿಳಿಸಿ...ನಮ್ಮ ಕುವೈತ್ ಕನ್ನಡ ಕೂಟದ ಯಾವುದಾದರೂ ಒಂದು ಸಭೆಯ ಸಮಯದಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡ್ಕೋತೇವೆ... ಅಂದ ಹಾಗೆ,,,ನೀವು ಶಾಂಭವಿ ಮದುವೆಗೆ ಸಂತಸ ವ್ಯಕ್ತಪಡಿಸಿದ್ದು..ಆ ಎಪಿಸೋಡ್ ನನಗೆ ನಿಮ್ಮ ಪಾತ್ರ ಹಿಡಿಸ್ತು...!! ಹಹಹ....
ಥ್ಯಾಂಕ್ಸ್ ಅವಿನಾಶ್.:-)
ಥ್ಯಾಂಕ್ಸ್ ಪ್ರಕಾಶ್. ಮಕ್ಕಳ ಸಿನಿಮಾ, ಚೆನ್ನಾಗಿದೆ. ರಿಲೀಸ್ ಆದ ತಕ್ಷಣ ತಿಳಸ್ತೀನಿ.
ಡಾಕ್ಯೂಮೆಂಟರಿ ಅಲ್ಲ ಮಕ್ಕಳ ಚಿತ್ರ. ಕಲಾತ್ಮಕ ಖಂಡಿತ ಚಿತ್ರವಾದರೂ ಬೋರ್ ಹೊಡಿಸೊಲ್ಲ. :-) ಸರಿ ಬಿಡುಗಡೆಯಾದ ತಕ್ಷಣ ನಿಮಗೆ ಕಳಿಸ್ತೀನಿ. ನನ್ನನ್ನ ಅಕ್ಕಾ ಅಂತೀರಿ ಆದ್ರೆ ನಿಮ್ಮ ಹೆಸರಿಂದ ಕರೆಯೋಣವೆಂದರೆ ನಿಮ್ಮ ಹೆಸರೇ ಗೊತ್ತಿಲ್ಲವಲ್ಲ...
ನೋಡಿದ್ರಾ ಮಂಗಳತ್ತೆ ಎಷ್ಟು ಒಳ್ಳೆಯವಳು ಅಂತ.ಆಕೆಯನ್ನ ಎಲ್ರೂ ಸುಮ್ ಸುಮ್ನೆ ಬೈತಾರಪ್ಪ.. :-) ಥ್ಯಾಂಕ್ಸ್ ಜಲನಯನ.
ಇತ್ತೀಚೆಗೆ ಮಕ್ಕಳ ಚಿತ್ರಗಳು ಯಾವುದೂ ಬಂದಿಲ್ಲ. ನಿಮ್ಮ ಚಿತ್ರಕ್ಕೆ ಕುತೂಹಲದಿಂದ ಕಾಯುತ್ತಿದ್ದೇನೆ. ಖಂಡಿತ ನೋಡುವೆ. ನಿಮಗೆ ಒಳ್ಳೆಯ ಹೆಸರು ತರಲಿ.
ಥ್ಯಾಂಕ್ಸ್ ಮಲ್ಲಿಕಾರ್ಜುನ್. ಬಿಡುಗಡೆ ಆದ ತಕ್ಷಣ ನಿಮಗೆಲ್ಲ ಖಂಡಿತ ತಿಳಿಸ್ತೀನಿ.
Post a Comment