Sunday, July 19, 2009

ನಿರಾಕರಿಸದಿರಿ ದೊರೆ

ಕೇಳಿದೆ ನೇಕಾರನಿಗೆ ಬೇಕಿದೆ
ಅಪರೂಪದ ಸೀರೆಯೊಂದು
ತಯಾರಿಸಿಕೊಡು ನನಗೆಂದು
ಕೇಳಿದ ನೇಕಾರಣ್ಣ
ಯಾವ ಬಣ್ಣ
ಹೆಣ್ಣೇ ಯಾವ ನೂಲು
ಎಂಥಾ ಸೆರಗು
ಹೇಗಿರಬೇಕು ಒಡಲು
ಮೊದಲು ಭಾಷೆ ಕೊಡು
ಹೇಳುವೆ ಸೀರೆಯ ಸೆರಗು ಬೆಡಗು
ದಿಟ್ಟಿಸಿದ ನೇಕಾರಣ್ಣ
ಮನ ಬಗೆಯುವಂತೆ
ಒಪ್ಪಿ ಭಾಷೆಯಿತ್ತ
ಎಲ್ಲ ಬಲ್ಲೆನೆಂಬಂತೆ
ನೂಲು ಹತ್ತಿಯದಿರಲಿ
ಪ್ರೀತಿಯ ತೆರದಿ ಮೃದು
ಎಲ್ಲಾ ಕಾಲಕ್ಕೂ ಸಲ್ಲುವುದು
ಬಣ್ಣವಿರಲಿ ಪಂಚರಂಗಿ
ಜ್ಞಾನ, ಶ್ರಮ, ಸಾಧನೆ,
ಯಶಸ್ಸು, ಸಮ್ಮಾನ
ಸಮವಾಗಿ ಮೇಳೈಸಿರಲಿ
ನೇಯಬೇಕು ನೋಡು
ಸೆರಗ ತುಂಬಾ
ಮಲ್ಲಿಗೆಯ ಪರಿಮಳದ ನಗುವ
ಅಂಚೂ ಅಷ್ಟೆ ಹಬ್ಬಬೇಕದು
ನೆಮ್ಮದಿಯ ಬಳ್ಳಿಯಾಗಿ
ಜನ ಬೆರಗುಗೊಳ್ಳಬೇಕು
ಇನ್ನು ಒಡಲು ಮಾರಾಯಾ
ಔದಾರ್ಯ, ಮಮತೆ,
ಸ್ನೇಹವೆಂಬ ಮುತ್ತು
ರತ್ನ, ಹವಳಗಳ ಕುಸೂರಿಯಾಗಬೇಕು
ನೋಡಿದವರು ರೆಪ್ಪೆ ಮೀಟುಕಿಸುವುದು
ಮರೆಯುವ ಹಾಗಿರಬೇಕು...
ವಿವರ ಆಲಿಸಿದ ನೇಕಾರ
ಕೇಳಿದ ಒಂದು ಪ್ರಶ್ನೆ
ಹೆಣ್ಣೇ ನಿನಗಾಗಿ ಸೀರೆ
ನೇಯುವಿನೇನೋ ಸರಿ
ಆದರೆ...
ಪ್ರೀತಿ, ನಗು, ಔದಾರ್ಯ
ಇತ್ಯಾದಿಗಳನ್ನೆಲ್ಲ ಎಲ್ಲಿಂದ ಹುಡುಕಿ ತರಲೆ?
ಅದು ಅಂಥ ಕಷ್ಟವಲ್ಲ ನೇಕಾರಣ್ಣ
ಹೋಗು ನನ್ನವರ ಹತ್ತಿರ
ಅವರು ಇವೆಲ್ಲದರ ಆಗರ
ಕೇಳಿದರೆ ಕೊಡದಿರಲಾರರು
ಉಪಚರಿಸದೆ ನಿನ್ನ ಕಳಿಸಲಾರರು
ಮೆರೆಯಬೇಕಿದೆ ಅಪರೂಪದ ಸೀರೆಯುಟ್ಟು
ಜಗದೇಕ ಸುಂದರಿ ಎಂದು ಜಂಭ ಪಟ್ಟು
ಇಷ್ಟರಲ್ಲೆ ಬರಬಹುದು ನೇಕಾರ
ಮನೆಯ ಬಾಗಿಲಿಗೆ
ಕೊಡಲಾರೆನೆಂದು ನಿರಾಕರಿಸದಿರಿ ದೊರೆ
ಬೇಡಿ ಬಂದವರಿಗೆ...

30 comments:

ಜಲನಯನ said...

ಜಯಕ್ಕ...!!! ಮತ್ತೆ..ನನಗೆ ಕೋಪ ಬರುತ್ತಪ್ಪ...ಹೀಗೆ ಮಾಡಿದ್ರೆ...ಅಲ್ಲ..ಹೇಳಿದ್ನಲ್ಲಾ..ನನ್ನ ಬ್ಲಾಗ್ ಗೆ ಹೋಗಿ ಪ್ರೊಫೈಲ್ ನೋಡಿ ಅಂತ..??!! ..ಓಕೆ..ಓಕೆ..ಕೆಲಸದ ಒತ್ತಡದಲ್ಲಿ ಅಷ್ಟು ಸಮಯ ಸಿಗಲಿಕ್ಕಿಲ್ಲ.... ಅಲ್ವಾ..??
ಇನ್ನು ನಿಮ್ಮ ಇಂದಿನ ಪೋಸ್ಟ್....
ಎಂಥ ಚಂದದ ಕವನ, ಕವನ ಎನ್ನಲೇ..ಅಥವಾ ಭಾವ-ಸ್ಪಂದನ ಎನ್ನಲೇ?? ಇಲ್ಲ ಹೆಣ್ಣ-ಭೂಷಣದ ಬಣ್ಣನೆ ಎನ್ನಲೆ? ಪದಗಳನ್ನು ತೂಗಿ-ತೂಕಮಾಡಿ ಪ್ರಯೋಗಿಸಿದ್ದೀರಿ...ಸೀರೆ ಹೇಗಿರಬೇಕೆಂಬುದರ ಕಲ್ಪನೆಯ ಹೊಸ ಆಯಾಮವನ್ನು ನೀರೆಯರಿಗೆ ಪರಿಚಯಿಸಿದ್ದೀರಿ. ಬಹಳ ಇಷ್ಟವಾದ ಸಾಲುಗಳು......
ಇನ್ನು ಒಡಲು ಮಾರಾಯಾ
ಔದಾರ್ಯ, ಮಮತೆ,
ಸ್ನೇಹವೆಂಬ ಮುತ್ತು
ರತ್ನ, ಹವಳಗಳ ಕುಸೂರಿಯಾಗಬೇಕು
ನೋಡಿದವರು ರೆಪ್ಪೆ ಮೀಟುಕಿಸುವುದು
ಮರೆಯುವ ಹಾಗಿರಬೇಕು...

ನನ್ನ ಬಗ್ಗೆ ಕೇಳಿದ್ರಲ್ಲಾ.....ಹೇಳೇ ಬಿಡ್ತೀನಿ...ನಾನು ಆಜಾದ್...(ಸ್ವತಂತ್ರ)...Aquatci Science (Aqautic animal Health) ನಲ್ಲಿ ಪಿ.ಎಚ್.ಡಿ. ಮಾಡಿ (ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ, ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಡಿ, ನಮ್ಮ ಓದಿನ ಸಮಯ, ಈಗ ಅದು ಬಿಜಾಪುರದ ವೆಟರಿನರಿ ಮತ್ತು ಫಿಷರೀಸ್ ವಿಶ್ವವಿದ್ಯಾಲಯದಡಿ), ಬಬೃವಾಹನನ ನಾಡಿನಲ್ಲಿ ಎಂಟು ವರ್ಷ Scientist ಆಗಿ ನಂತರ ಮದ್ರಾಸ್ ಗೆ ವರ್ಗ, ೨೦೦೪ರಿಂದ ಕುವೈತಿನ Kuwait Institute for Sceintific Research ನಲ್ಲಿ Scientist (Fish health) ನಲ್ಲಿ ಈಗ ಕಾರ್ಯನಿರತ. ನಮ್ಮ ಕುವೈತ್ ಕನ್ನಡ ಕೂಟ ರಜತ ಮಹೋತ್ಸವವನ್ನು ಆಚರಿಸುತ್ತಿದೆ..ನಿಮಗೆ ಆಮಂತ್ರಣ ಈ ವರ್ಷದ ನವಂಬರ್ ನ ವಿಶೇಷ ರಾಜ್ಯೋತ್ಸವ-ರಜತೋತ್ಸವಕ್ಕೆ.

Jayalaxmi said...

ಧನ್ಯವಾದ ಆಜಾದ್! :-) ನಾನು ನಿಮ್ಮ ಪ್ರೊಫೈಲಿಗೆ ಹೋಗಿದ್ನಪ್ಪ, ಆದ್ರೆ ಅಲ್ಲೆಲ್ಲು ನಿಮ್ಮ ಹೆಸರು ಕಾಣಿಸಿರ್ಲಿಲ್ಲ, ಈಗ ನೀವು ಹೇಳಿದಾಗ (ಬೈದಾಗ?!!) ಮತ್ತೆ ಹೋಗಿ ನೋಡಿದೆ. ಅಲ್ಲಿ ’ಆಜಾದಿ’ ಅನ್ನೊ ಲಿಂಕೇನೊ ಇದೆ, ಆದ್ರೆ ಅದೇ ನಿಮ್ಮ ಹೆಸರು ಅನ್ನೋದು ಈ ದಡ್ಡಿಗೆ ಗೊತ್ತಾಗ್ಲಿಲ್ಲ. ಈಗ ಅದನ್ನ ಕ್ಲಿಕ್ ಮಾಡಿದರೆ ಹೀಗೆ ನೋಟಿಫಿಕಶನ್ ಬರ್ತಿದೆ!.. Firefox doesn't know how to open this address, because the protocol (ymsgr) isn't associated with any program.
ರಾಜ್ಯೋತ್ಸವದ ನಿಮ್ಮ ಆಮಂತ್ರಣವನ್ನು ಶಿರ ಮಣಿಸಿ ಮನ ಸ್ವೀಕರಿಸಿತು. ನಿಮ್ಮ ಅಕ್ಕರೆ ಸದಾ ಹೀಗೆಯೆ ಇರಲಿ.

ಜಲನಯನ said...

ಸಾರಿ...ಜಯಕ್ಕ...ನನ್ನ ಮಾತು ಬೈಯ್ಯೋ....!! ಛೇ..ಛೆ...ನನ್ನ ಯೋಗ್ಯತೆಯೇ..? ಅಥವಾ ಅಯೋಗ್ಯತೆಯಿಂದ ಬರೆದೆನೇ..??? ಅಕ್ಕ ..ಕ್ಷಮಿಸಬಹುದಲ್ಲ...?? ನನಗೆ ಭರವಸೆಯಿದೆ.
ನನ್ನ ಮೈಲ್ azadis@hotmail.com. ಮಗಳು (ಸುರೈಯ್ಯ) ಮತ್ತು ಶ್ರೀಮತಿ ಬೆಂಗಳೂರಲ್ಲಿ... ಮಗಳ ರಜಗಳ ಮಜಾ ತಾಯಿಗೂ..!! ಆಗಸ್ಟ್ ನಲ್ಲಿ ಬಂದು ಅವರನ್ನು ಕರೆದುಕೊಂಡು ಬರಬೇಕು. ನಿಮ್ಮ ಕವನ ತುಂಬಾನೇ ಚನ್ನಾಗಿ ಮೂಡಿದೆ..ಒಳ್ಳೇ ಮೂಡಿತ್ತು ಅಂತ ಕಾಣುತ್ತೆ...ಬರೀತಿರಿ..ನಾವೂ ಬರ್ತಾ ಇರ್ತೀವಿ..ಕವನ, ಲೇಖನಗಳ ಆಸ್ವಾದನೆಗೆ.
ಮತ್ತೆ ...ಮಂಗಳತ್ತೆ..ಜೊತೆ..ಇನ್ನೂ ಪಾತ್ರಗಳು ಬರ್ತಾ ಇವೆ...ಮ.ಮೂ.ಬಾ, ನಿಮ್ಮ ಪಾತ್ರ ಸ್ವಲ್ಪ subdued...!! ಇದಕ್ಕಿಂತಾ ಮಂಗಳತ್ತೆಯೇ ಬೆಟರ್....ಹ್ಹಹಹ....

ಮಲ್ಲಿಕಾರ್ಜುನ.ಡಿ.ಜಿ. said...

ಕವನ ಅರ್ಥಪೂರ್ಣವಾಗಿದೆ. ಬಾಹ್ಯಸೌಂಧರ್ಯ ವೃದ್ಧಿಗೆ ಅಂತರಂಗದ ಸೌಂಧರ್ಯದ ಕಾಣಿಕೆ ಮುಖ್ಯ. ಯುಂಬಾ ಚೆನ್ನಾಗಿದೆ.

Jayalaxmi said...

ನಿಜ ಮಲ್ಲಿಕಾರ್ಜುನ.ನಿಮ್ಮ ಮೆಚ್ಚುಗೆಗೆ ಧನ್ಯವಾದ.

Roopa said...

ನಿಮ್ಮ ಕವನ ತುಂಬಾನೇ ಚನ್ನಾಗಿ ಮೂಡಿದೆ!! ಎಲ್ಲರಿಗೂ ಬೇಕಿಂತ ಒಂದು ಸೀರೆ:)

Jayalaxmi said...

ಅಲ್ಲವಾ? :-) ಥ್ಯಾಂಕ್ಸ್ ರೂಪಶ್ರೀ.

Ittigecement said...

ಜಯಲಕ್ಷ್ಮೀಯವರೆ...

ಅಂತರಂಗದ ಸೌಂದರ್ಯದ ಸೀರೆ..
ಉಟ್ಟು ಮೆರೆದಾಡ ಬೇಕೆಂಬ ನೀರೆ..
ಗೆ....

ಚಂದದ ಕವನ..
ಅಂದವಾಗಿ..
ನೆಯ್ದು ಕೊಟ್ಟಿದ್ದಕ್ಕೆ..
ಧನ್ಯವಾದಗಳು...

Ahalya said...

ವೋ ವೋ .. ನಿನ್ ಮುಂಜಾನಿಕ ಯಾರೋ ಒಬ್ಬ ಬಾಗ್ಲಾಗ್ ನಿಂತ್ ಕರೆಯಾಕ್ ಹತ್ತಿದ್ದ ! ನೀ ಕಳ್ಸಿದ ನೇಕಾರ ನ ಇದ್ದಿರ್ಬೇಕ್ ನೋಡ್ .. ಅವ್ನ ಕೈಯಾಗ್ ನಿಂಗ್ ಬೇಕಾದ್ದೆಲ್ಲ ಕೊಟ್ಟಿನ್ ತಗೋ .

Jayalaxmi said...

ಧನ್ಯವಾದ ಪ್ರಕಾಶ ಅವರೆ.

Jayalaxmi said...

ಆಂಹಾಂ! ಈಗ ಮತ್ತ ನನಗ ಹುರುಪು ಬಂತ್ ನೋಡೆಕ್ಕಾ! ನೀ ಇಲ್ಲದನ ಸುಂದ್ ಹೊಡದವರಂಗ್ ಆಗಿದ್ದೆ ನಾ. ಇವತ್ತ ನಾಳೆ ಆ ನೇಕಾರ ನಮ್ಮನಿಗಿ ಮರಳಿ ಬರ್ತಾನ ಹಂಗಿದ್ರ! ನಾ ಎವಿ ಬಡೀದ ಬಾಗಲಾಗ ಕಾಯ್ಕೊಂಡು ಕುಂದ್ರತೇನಿ ನಮ್ಮವ್ವ! ಈ ಸಲದ ಹಬ್ಬ ಜೋರಾತು ನನ್ ಪಾಲಿಗೆ :-)

Anonymous said...

ಜಯಕ್ಕಾ.. ನಿರಾಕರಿಸದಿರಿ ದೊರೆ.. ಓದಿದ ನಂತರ ಯಾಕೋ ಶಬ್ದಗಳು ಹುಟ್ಟದಾಗಿದೆ... ಮೂಕವಿಸ್ಮಿತೆ ನಾನು.. ಅದೆಷ್ಟು ಚೆಂದಗೆ ಬರೆಯುತ್ತೀರಿ... ಹೊಟ್ಟೆಕಿಚ್ಚು ನನಗೆ.. ಪದೇ ಪದೇ ಓದದೆ ಇರಲಾಗದು ... ನಿಮ್ಮ ಅನುಮತಿಯಿಲ್ಲದೆ ಕಾಪಿ ಮಾಡಿ ಇಟ್ಟುಕೊಂಡಿದ್ದೇನೆ.. ಇಂಥದ್ದನ್ನು ಬರೆಯಬಲ್ಲ ನಿಮ್ಮ ಕೈಗೆ ಭಾವ ಕೋಶಕ್ಕೆ ನೂರಾರು ಮುತ್ತು...

umesh desai said...

ಏನ್ರೀ ಮೇಡಮ್ ಎಂಥಾ ಛಂದ ಕವಿತಾ ಖುಷಿ ಆತು ಎಲ್ಲಾ ಹೆಂಗಸರಿಗೂ ಸೀರಿ ಮ್ಯಾಲ ಮೊಹ ಇರ್ತದ ಖರೆ ಆದ್ರ ನೀವು
ಕೇಳಿದ ಸೀರಿ ಅಪರೂಪದ್ದದ ಅಂದಹಂಗ ಪಂಚಮಿಹಬ್ಬ ಬ್ಯಾರೆ ಇಂಥಾ ಸೀರಿ ಉಟಗೊಂಡ್ರ ಹಬ್ಬಕ್ಕ ಇನ್ನೂ ಮಜಾ ಬರ್ತದ...

ಸವಿಗನಸು said...

ನೀರೆಗೆ ಸೀರೆ ಚೆನ್ನಾಗಿ ನೆಯ್ದಿದ್ದೀರ....ಇನ್ನು ಬಣ್ಣ ಬಣ್ಣದ ಸೀರೆಗಳು ಬರಲಿ ಎಂದು ಶುಭಹಾರೈಕೆಗಳು

Jayalaxmi said...

ನಿಮ್ಮ ಈ ಪ್ರೀತಿಗೆ ಮೂಕವಿಸ್ಮಿತೆ ನಾನು ಶಮಾ. ದೃಷ್ಟಿ ತಾಗದಿರಲಿ, ಇಂಥ ನೂರಾರು ನಿರ್ಮಲ ಪ್ರೀತಿಗೆ.

Jayalaxmi said...

ಎಲ್ಲಾ ಹೆಣ್ಮಕ್ಕಳಿಗೂ ಇಂಥಾ ಸೀರೀದ ಆಶಾ ಇರ್ತದ್ರಿ ಉಮೇಶ ಸರ್, ಎಲ್ಲಾರ ದನಿಯಾಗಿ ನಾ ಹೇಳೇನಿ ಅಷ್ಟ.ನೋಡ್ರೆಲ್ಲ, ನಾ ಕೇಳೂ ಪುರುಸೊತ್ತಿಲ್ಲದ ಅಹಲ್ಯಕ್ಕ ಬಾಗೀನ ಕಳಿಸ್ಯಾತು. :)

Jayalaxmi said...

ಧನ್ಯವಾದ ಪ್ರಕಾಶ್ ಅವರೆ.ಪ್ರಯತ್ನಿಸುವೆ.

ಕನಸು said...

ಹಾಯ್ ರಿ
ನಿಮ್ಮ ಬ್ಲ್ಯಾಗು ತುಂಭಾ ಚೆನ್ನಾಗಿದೆ ರೀ
ಬಿಡುವಿದ್ದಾಗ ಎಲ್ಲಾ ಓದತ್ತಿನಿ
ಆಯ್ತಾ..??

ರಜನಿ. ಎಂ.ಜಿ said...

ಕಥೆ ಹೇಳುವ ರೀತಿಯಲ್ಲಿ ಆತ್ಮೀಯವಾಗಿ ಓದಿಸಿಕೊಂಡು ಹೋಗುತ್ತಿದೆ ಕವನ.

Jayalaxmi said...

ಥ್ಯಾಂಕ್ಸ್ ರಿ ಕನಸು ಅವರೆ. ಸ್ವಾಗತ ರಿ.

Jayalaxmi said...

ಧನ್ಯವಾದ ರಜನಿ.

ರಾಹುದೆಸೆ !! said...

ನಮಸ್ತೆ ಕಣ್ರೀ...
ನಾನು ಬ್ಲಾಗ್ ಗೆ ಹೊಸಬ..
ನಿಮ್ಮ ಬ್ಲಾಗ್ ಓದಿದೆ.. ತುಂಬಾ ಚೆನ್ನಾಗಿ ಬರೀತೀರ ಕಣ್ರೀ ..
ರೀ. ನನ್ನ ಬ್ಲಾಗ್ ಒಮ್ಮೆ ನೋಡ್ತೀರಾ?
balipashu.blogspot.com

ಏಕಾಂತ said...

ನಮಸ್ತೆ...
ನವಿರಾಗಿದೆ ಕವನ. ಶೈಲಿಯೂ ಕೂಡಾ. ಪದಗಳಿಂದ ಮತ್ತಷ್ಟು ಬಣ್ಣ ತುಂಬಿ.
ಮತ್ತೆ ಬರೆಯಿರಿ...

Jayalaxmi said...

ಥ್ಯಾಂಕ್ಸ್ ಗುರುಪ್ರಸಾದ್( ನೇರ-ನುಡಿಯವನು) ಅವರೆ. ನಿಮ್ಮ ಕೆಲವುಕವಿತೆ ಮತ್ತು ೧ ಲೇಖನ ಓದಿದೆ. ಸ್ವಲ್ಪ ಬಿಡುವಾಗುತ್ತಲೇ ಮತ್ತೆ ನಿಮ್ಮ ಬ್ಲಾಗಿಗೆ ಭೇಟಿ ಕೊಡುವೆ.

Jayalaxmi said...

ಧನ್ಯವಾದ ಲಕ್ಷ್ಮಿಕಾಂತ ಅವರೆ. ಖಂಡಿತ ಬರೆಯುವೆ.

ತೇಜಸ್ವಿನಿ ಹೆಗಡೆ said...

ನಿಮ್ಮ ಬ್ಲಾಗ್‌ಗೆ ನನ್ನ ಮೊದಲ ಭೇಟಿ. ತುಂಬಾ ಭಾವಪೂರ್ಣವಾಗಿದೆ ನಿಮ್ಮ ಬರಹ. ಕವನದ ಭಾವಾರ್ಥ ಹಾಗೂ ಆಶಯ ಎರಡೂ ತುಂಬಾ ಸುಂದರವಾಗಿವೆ. ಇಂತಹ ಸೀರೆ ನಿಮಗೇನಾದರೂ ನೇಕಾರ ನೇಯ್ದು ಕೊಟ್ಟರೆ ದಯವಿಟ್ಟು ನನಗೂ ಅವನ ವಿಳಾಸ ಕೊಡಿ...:)

Jayalaxmi said...

ಆತ್ಮೀಯ ಸ್ವಾಗತ ತೇಜಸ್ವಿನಿ. ನನ್ನಿ. ಆ ನೇಕಾರನ ವಿಳಾಸ ಗೊತ್ತಿಲ್ಲದ ಜನರುಂಟೆ ಲೋಕದಲ್ಲಿ...? :)

ಸೀತಾರಾಮ. ಕೆ. / SITARAM.K said...

ಹೆಣ್ಣಿನ "ಬೇಕು"ಗಳನ್ನು, ಸೀರೆಯ ವಿವಿಧ ಭಾಗಗಳ ವಿನ್ಯಾಸಕ್ಕೆ ನವಿರಾಗಿ ಹೊ೦ದಿಸಿದ್ದಿರಾ.
ಚೆನ್ನಗಿದೆ ತಮ್ಮ ಕಲ್ಪನೆ.

Anitha Naresh Manchi said...

ನೇಕಾರನಿಗಾಗಿ ಕಾಯುತ್ತಿದ್ದೇನೆ :) ಬಂದಾನೋ ಬಾರನೋ .. ??

nenapina sanchy inda said...

ahaa esTondu muddaagi naviraagi neydideeri chandada kaamanabillina baNNada seere!! gr8 liked it :-)