Monday, July 26, 2010

ಅಪ್ಪನ ಕವಿತೆ.. ಬಾಳ ಸಂಜೆ


ಒಂದು ಹೆಜ್ಜೆ ನೀ ಇಡು
 

ಒಂದು ಹೆಜ್ಜೆ ನಾ ಇಡುವೆ 

ಹೆಜ್ಜೆಯಲಿ ಹೆಜ್ಜೆಯನಿಡುತ

ದಡವ ಸೇರುವಾ


ಕನಸ ಕಾಣುತ


ಮನಸ ಗಟ್ಟಿ ಮಾಡುತ


ಸಾಗುವಾ ಸಾಗುವಾ


ಗುರಿ ಸೇರುವಾ

 

ಇರಲಿ ಸಂಸಾರದಲಿ ಸಮನ್ವಯ

ಅಳಿಯಲಿ ಮನದಲುಳಿದ ಕಹಿಸಮಯ


ಕವಿಯದಿರಲಿ ಮೋಡ ಮತ್ತೆಂದೂ


ಹನಿಯೊಡೆಯದಿರಲಿ ನಿನ್ನ ಕಣ್ಣು ಇನ್ನೆಂದೂ..

  (ಇದು ನಾನು ಬರೆದ ಕವನವಲ್ಲ. ನನ್ನ ತಂದೆ [ಡಾ. ರಾಜಶೇಖರ್ ಅವರಾದಿ] ಯವರು ಬರೆದ ಕವನ. ಅಪ್ಪ ನನ್ನ ಮುಂದೆ ಒಂದು ಸಂಕೋಚದಿಂದಲೇ ತಾವು ಬರೆದ ಈ ಕವನವನ್ನು ಓದಿ ಹೇಳಿದ್ದು, ಬರೆದಿಟ್ಟುಕೊಂಡಿದ್ದೆ. ಈಗ ನಿಮ್ಮೆದುರು ಇಟ್ಟಿದ್ದೇನೆ.)

27 comments:

ವಸಂತ ಕುಮಾರ್ ಆರ್, ಕೋಡಿಹಳ್ಳಿ said...

ಮದುರ ಬಾವನೆಯ ಕವನ ತುಂಬಾ ಚೆನ್ನಾಗಿದೆ.

ಸಂದೀಪ್ ಕಾಮತ್ said...

ಗ್ರೀನ್ background ಸರಿ ಹೊಂದಲ್ಲ.

Vinay Hegde said...

nimma kannu odde aagadirali..... Chenaagide kavana..!!!

Ittigecement said...

ನಮಸ್ತೆ...

ಕವನ..
ಕವನದ ಭಾವಾರ್ಥ ಬಹಳ ಇಷ್ಟವಾಯಿತು...

ಸರಳ ಶಬ್ಧಗಳಲ್ಲಿ ಬಹಳ ಚೆನ್ನಾಗಿ ಭಾವಗಳನ್ನು ಬಿಡಿಸಿಟ್ಟಿದ್ದೀರಿ..

ಅಭಿನಂದನೆಗಳು..

V.R.BHAT said...

ಈ ಸಾಲುಗಳನ್ನು ಎಲ್ಲಾ ದಂಪತಿಗಳು ಅನುಸರಿಸಿದ್ದರೆ ಇವತ್ತಿಗೆ ಯಾವುದೇ ವಿಚ್ಛೇದನ ಕಟ್ಲೆ ಇರುತ್ತಿರಲಿಲ್ಲ, ಅಲ್ಲಲ್ಲಿ ಆಗಾಗ ನಾವು ಹೇಳುವುದೆಲ್ಲಾ ಇದನ್ನೇ, ಆದರೆ ಅದು ಎಲ್ಲರಲ್ಲೂ ಅನುರಳಿಸೀತೇ ?

Guruprasad . Sringeri said...

ತುಂಬಾ ಚೆನ್ನಾಗಿದೆ., ಕೊನೇ ಸಾಲು ತುಂಬಾ ಇಷ್ಟವಾಯಿತು...

PARAANJAPE K.N. said...

ಚೆನ್ನಾಗಿದೆ

ಮನಸು said...

nice one

ಸಾಗರದಾಚೆಯ ಇಂಚರ said...

ತುಂಬಾ ಚೆಂದದ ಕವನ

ದಿನಕರ ಮೊಗೇರ said...

ಇರಲಿ ಸಂಸಾರದಲಿ ಸಮನ್ವಯ

ಅಳಿಯಲಿ ಮನದಲುಳಿದ ಕಹಿಸಮಯ

ಕವಿಯದಿರಲಿ ಮೋಡ ಮತ್ತೆಂದೂ

ಹನಿಯೊಡೆಯದಿರಲಿ ನಿನ್ನ ಕಣ್ಣು ಇನ್ನೆಂದೂ..

ತುಂಬಾ ಸುಂದರ ಅರ್ಥಗರ್ಭಿತ ಸಾಲುಗಳು ಮೇಡಂ, ಧನ್ಯವಾದ.....

ಜಲನಯನ said...

ಜಯಕ್ಕ...ಬಜ್ ನಲ್ಲಿ ಹಾಕಿದೆ ನನ್ನ ಅನಿಸಿಕೆ..ನಿಮ್ಮ ಭಾವನೆಗಳ ಸರಾಗ ಸಾಗುವ ಹರಿವು ಪದಗಳಲ್ಲಿ ಪೋಣಿಸಿ ಕವನವಾಗಿಸಿರುವ ಪರಿ ನನಗೆ ಮೆಚ್ಚುಗೆಯಾಯಿತು..ಆದ್ರೆ ನೀವು ಸ್ವಲ್ಪ ಆಗಾಗ್ಗೆ ಬ್ಲಾಗ್ ಹಾಕಿದ್ರೆ...ನಮಗೂ ಏನೂ ಮಿಸ್ ಆಗೊಲ್ಲ ಅಥವಾ ಬಜ್ ನಲ್ಲಿ ಲಿಂಕ್ ಕೊಡಿ ಹೊಸ ಪೋಸ್ಟ್ ಹಾಕಿದಾಗ....

ಸೀತಾರಾಮ. ಕೆ. / SITARAM.K said...

ತಮ್ಮ ತಂದೆಯವರ ಕವನ ತುಂಬಾ ಚೆನ್ನಾಗಿದೆ. ಎಲ್ಲ ದಂಪತಿಗಳು ಅನುಸರಿಸಬೇಕಾದ ಸಮರಸದ ಸೂತ್ರ ಇದು. ಅವರ ಇತರ ಬರಹಗಳನ್ನೂ ನಮಗೆ ಉಣಬಡಿಸಿ. ಜೊತೆಗೆ ತಮ್ಮ ಬರಹಗಳನ್ನೂ!

ಮನಮುಕ್ತಾ said...

sundara kavana..

SATISH N GOWDA said...

nice kavana...........

www.nannavalaloka.blogspot.com

ಅನಂತ್ ರಾಜ್ said...

ಮನ ಮುಟ್ಟುವ ಭಾವ ತು೦ಬಿದ ಪುಟ್ಟ ಪುಟ್ಟ ಸಾಲುಗಳ ಉತ್ತಮ ಕವನ. ಧನ್ಯವಾದಗಳು

ಅನ೦ತ್

AntharangadaMaathugalu said...

ತುಂಬಾ ಚೆನ್ನಾಗಿದೆ ಕವನ. ಹೆಜ್ಜೆಗೆ ಹೆಜ್ಜೆ ಜೋಡಿಸುತ್ತಾ... ಭಾವಪೂರ್ಣವಾಗಿದೆ. ಕೊನೆಯ ಸಾಲುಗಳೂ ಅಷ್ಟೆ... ತುಂಬಾ ಇಷ್ಟವಾಯಿತು.....

ಶ್ಯಾಮಲ

Jayalaxmi said...

ನನ್ನ ತಂದೆಯವರ ಪರವಾಗಿ ಮೆಚ್ಚುಗೆ ವ್ಯಕ್ತಪಡಿಸಿದ ನಿಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು. :-)

ದಿನಕರ ಮೊಗೇರ said...

tumbaa chennaagide madam... anubhavada maatugala mahaapurave ide ee kavitayalli....

dhanyavaada heLi avarige....

Manasa said...

ಮೇಡಂ, ತುಂಬಾನೇ ಅರ್ಥಪೂರ್ಣ ಸಾಲುಗಳು...
ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೋದರೆ ಜೀವನ ಸಂಜೀವಿನಿ :)

umesh desai said...

ನಿಮ್ಮ ತಂದೆಯವರೂ ಕವೀನೇ ಹಂಗಾದ್ರ ಬೇಷಾತು ಬಿಡ್ರಿ..
ಒಳ್ಳೆ ಕವಿತಾ ಅದ ಟೈಮ್ ಇದ್ದಾಗ ನನ್ನ ಬ್ಲಾಗಗೂ ಬರ್ರಿ.....

Badarinath Palavalli said...

ಕವನದ ಆಶಯವೇ ಮನಮುಟ್ಟುವಂತಿದೆ. ಸೂಪರ್ಬ್

ಅಪ್ಪ ಕವನ ಬರೆಯೋದು ಅದನ್ನು ಮಗಳ ಮುಂದೆ ಓದಿ ಹೇಳೋದೂ, ಅಪ್ಪ ಮಗಳಿಬ್ಬರೂ ಕವಿಗಳಾಗಿರೋದೂ ನನಗೆ ಸೋಜಿಗವೇ. ನನಗೆ ನೆನಪೇ ಇರದ ವಯಸ್ಸಿನಲ್ಲಿ ಮಡಿದ ನನ್ನ ಅಪ್ಪನನ್ನು ಈಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

ನನ್ನ ಬ್ಲಾಗಿಗೂ ಬನ್ನಿ ಮೇಡಂ.

www.badari-poems.blogspot.com

kavinagaraj said...

ಸುಂದರ! ಸುಂದರ!

akshata said...

ಕವಿತೆ ತುಂಬ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಮೂಡಿ ಬಂದಿದೆ, ನಿಮ್ಮ ತಂದೆಯವರಿಗೆ ಧನ್ಯವಾದ ಹೇಳಿ. ಕೊನೆಯ ಸಾಲು ಓದಿ ಪಟ್ಟನೆ ಕಣ್ಣಲ್ಲಿ ನೀರು ಬಂತು, ಎಷ್ಟು ಕಾಳಜಿ ಇದೆ ಆ ಸಾಲಿನಲ್ಲಿ.
ಅಕ್ಷತ.

ಸಾಗರದಾಚೆಯ ಇಂಚರ said...

ಸುಂದರ ಭಾವನೆಯ ಕವನ

shivu.k said...

ಜಯಲಕ್ಷ್ಮಿ ಮೇಡಮ್,

ನಿಮ್ಮನ್ನು ನಮ್ಮ ಕಾರ್ಯಕ್ರಮದಲ್ಲಿ ನೋಡಿ ತುಂಬ ಖುಷಿಯಾಯ್ತು.
ಸರಳವಾಗಿ ಸುಂದರವಾದ ಕವನ ಭಾವಾರ್ಥ ಇಷ್ಟವಾಗುತ್ತದೆ.
ನಿಮ್ಮ ಬ್ಲಾಗನ್ನು ಲಿಂಕಿಸಿಕೊಂಡಿದ್ದೇನೆ.

ಜಿ.ಎಸ್.ಬಿ. ಅಗ್ನಿಹೋತ್ರಿ said...

ತುಂಬಾ ಚೆನ್ನಾಗಿದೆ.

Unknown said...

Tunba channagide.
Dayavittu nanna blog nodi nimma anisike tilisi http://rakeshashapur.blogspot.com
dhanyavadagalu