ಚಿತ್ತ ಹುತ್ತಗಟ್ಟಿ
ಒಳಗಿನ ಭಾವಗಳು ನಲಿದು ನುಲಿದು
ಭುಸುಗುಟ್ಟಿದ ಸದ್ದು
ಕೊಳಲನಾದವಾಗಿ
ಸುದ್ದಿಯಾಯಿತಂದು
ಇಂದು
ಚಿತ್ತಹುತ್ತವ
ಗಾಳಿ ನೇವರಿಸಿದಾಗಲೆಲ್ಲ
ಒಳಗಿನ ನಿರ್ವಾತ ಕಲಕಿ
ಅಪಶೃತಿ
ತುಂತುಂಬಿ ಖಾಲಿಯಾಗುವುದೇ
ಬದುಕಿನ ರೀತಿ!
- 21st Oct 2013
ಒಳಗಿನ ಭಾವಗಳು ನಲಿದು ನುಲಿದು
ಭುಸುಗುಟ್ಟಿದ ಸದ್ದು
ಕೊಳಲನಾದವಾಗಿ
ಸುದ್ದಿಯಾಯಿತಂದು
ಇಂದು
ಚಿತ್ತಹುತ್ತವ
ಗಾಳಿ ನೇವರಿಸಿದಾಗಲೆಲ್ಲ
ಒಳಗಿನ ನಿರ್ವಾತ ಕಲಕಿ
ಅಪಶೃತಿ
ತುಂತುಂಬಿ ಖಾಲಿಯಾಗುವುದೇ
ಬದುಕಿನ ರೀತಿ!
- 21st Oct 2013
1 comment:
ತುಂತುಂಬಿ ಖಾಲಿಯಾಗುವುದೇ ಬದುಕು...ವಾಹ್!!! ಖಾಲಿ ಆಗುತ್ತಲೇ ಹೊಸತು ಬರುತ್ತದೆಯೇನೋ ಅಲ್ಲವೇ
Post a Comment