ಮನದ ಸುಂಟರಗಾಳಿ ಮೇಲೆದ್ದು
ಕಣ್ಣ ಹೊಕ್ಕ ಕಸವ ಕಳೆಯುವಲ್ಲಿ
ನನ್ನ ತಿತ್ತಿ ದಣಿಯಿತು
ಊದಲು ಉಸಿರು ತುಂಬಿ
ತುಂಬಿ ಓಹ್ ಏದುಸಿರು
ಕಸರು ಉಳಿದ ಕಣ್ಣುಗಳಿಗೆ
ಪಾರದರ್ಶಕ ಮನದಲೂ ಹುನ್ನಾರ!
ಬಿಂಬಗಳು ಒಂದಕ್ಕೆರಡಾಗಿ
ಎರಡು ಒಂದಾಗಿ...
ಕಾಯುತ್ತಾ ಕುಳಿತಿದ್ದೇನೆ ಸುಮ್ಮನೆ,
ಹುನ್ನಾರ ತುಂಬಿದ ಕಣ್ಣುಗಳಲಿ
ಪ್ರತಿಫಲಿಸಬೇಕಾದ ನಿಚ್ಚಳತೆಗಾಗಿ
- ಜಯಲಕ್ಷ್ಮೀ ಪಾಟೀಲ್
1 comment:
"ಹುನ್ನಾರ ತುಂಬಿದ ಕಣ್ಣುಗಳಲಿ
ಪ್ರತಿಫಲಿಸಬೇಕಾದ ನಿಚ್ಚಳತೆಗಾಗಿ" Nice lines
Post a Comment