Wednesday, August 19, 2015

ನೋ ಸ್ಮೋಕಿಂಗ್



- ಗುಲ್ಜಾರ್.



ಸೇದಿ ಬಿಡು...
ಹೊಂಬಣ್ಣದ ಕಾಡಿನಿಂದ ಹೊಮ್ಮುತಿದೆ ಧೂಪ ಪರಿಪರಿ
ಕಣಕಣವವನೂ ಹೀರುತ್ತಿರುವೆ ಎಲೆ ಎಲೆಯನೂ ಸವರಿ
ಬೆಳಕಿಲ್ಲದ ಕಣ್ಣಲಿದೋ ಹೊಗೆಯಾಡುತ್ತಿದೆ ಮಂದ ಅಲೆ
ಜೊತೆಗೇನಿಲ್ಲದಿದ್ದರೂ ವ್ಯಾಕುಲ ಮನಸಿಗೆ ಗಾಯವಿದು ಆಪ್ತಸೆಲೆ
ಸೇದಿ ಬಿಡು ಒಮ್ಮೆ...


ಜೀವವನ್ನೊಮ್ಮೆ ಸೇದಿ ಬಿಡು, ಜೀವಸೆಲೆಯನ್ನೊಮ್ಮೆ ಸೇದಿ ಊದಿ ಬಿಡು
ಸೇದಿಬಿಡು ಸೇದಿಬಿಡು ಜೀವಸೆಲೆಯಾಗಿರುವ ಅಕ್ಷರಗಳನ್ನೆಲ್ಲ ಒಮ್ಮೆ ಸೇದಿ ಊದಿ ಬಿಡು


ಮಣಭಾರದ ತಲೆ ಭುಜದ ಮೇಲೆ, ಮಣಿಮಣಿಯುವ ಹೆಜ್ಜೆ ನೆಲದ ಮೇಲೆ
ಮಾತುಬಾರದ ಭಾವಗಳದೋ ರಾತ್ರಿಯಿಡೀ ಗಲಾಟೆ ಮೇಲೆ ಮೇಲೆ
ಬಿಗಿದ ತುಟಿಯ ಹಿಂದೆ ಕುದಿಯುತ್ತಿರುವ ಮಾತುಗಳ ಸೇದಿ ಬಿಡು
ತುಟಿಗಂಟಿದ ಈ ರಾತ್ರಿಯ ಊದಿ ಬಿಡು
ಉರಿದ ರಾತ್ರಿಬೂದಿಯ ಈ ತುಟಿಗಳಿಂದಲೇ ಊದಿ ಬಿಡು...


ಅಮಲು ಅದರಿ ಉದರಿ ನೆಲದ ತುಂಬಾ ತುಂಡುಗಳು
ಕುಳಿತು ಆಯುತ್ತಿದ್ದೇವೆ ಕೆಲಸವಿಲ್ಲದ ಬಡಗಿಗಳು
ತುಟಿಯ ಮೇಲೆ ಕುದಿಯುತಿರುವ ಮಾತನ್ನೊಮ್ಮೆ ಸೇದಿ ಊದಿ ಬಿಡು...









- ಜಯಲಕ್ಷ್ಮೀ ಪಾಟೀಲ್ (ಅನುವಾದ)

(ಗುಲ್ಜಾರರ ಅಕ್ಷರಗಳ ಮೇಲಿನ ನನ್ನ ಪ್ರೀತಿಗೆ ಅವರ ಹುಟ್ಟಿದಹಬ್ಬದಂದು)
19-08-2015

2 comments:

sunaath said...

ಗುಲಜಾರರ ಸುಂದರ ಕವನವನ್ನು ಸುಂದರವಾಗಿ ಅನುವಾದಿಸಿದ ನಿಮಗೆ ಅಭಿನಂದನೆಗಳು ಹಾಗು ಧನ್ಯವಾದಗಳು.

Jayalaxmi said...

Thanks Sunath kaka. :) ನೀವು ಮೆಚ್ಚಿಕೊಂಡಾಗಲೆಲ್ಲ, ‘ಹಾಂ, ಅಡ್ಡಿಯಿಲ್ಲಪಾ ನಾನು ಕೆಟ್ಟದಾಗಿ ಬರೀಲಿಲ್ಲ’ಅನ್ನುವ ಸಮಾಧಾನ ನನಗೆ. :)