Monday, March 6, 2017

ಹಣತೆ

ಹೊತ್ತೆನವ್ವ ಹಣತೆಯೊಂದ ಕಾರಿರುಳ ಸೆರಗಿನಲಿ
ಬೆಳಕ ಮೀಯಿಸುವೆನೆನುತ ಬಂದ ಸೂರ್ಯ ಮಿಂದು ಹೋದನವ್ವ
ಹಣತೆಯೆಂಬ ಸದರ ಅವಗೆ ತೊರೆದು ಹೋದನವ್ವ ನನ್ನ
ಮಡಿಲು ತುಂಬಿತವ್ವ!


ಚಂದ್ರ ತಾರೆಯರ ನಗರ ತೊರೆದು ಸೂರ್ಯನಗರಿಗೆ ಬಂದು
ಸರ್ವರ ಸಾಕ್ಷಿಯಲಿ ಹಣತೆ ಹೆತ್ತೆನವ್ವ, ಸೂರ್ಯಮರಿಯ ಹೆತ್ತೆನವ್ವ!
ಎಣ್ಣೆಯಿಲ್ಲ ನೀರಿಲ್ಲ ಹಸುಗಂದನ ನೆತ್ತಿಯಲಿ
ಉರಿಸಿ ಉಸಿರ ಮೈ ನೆಣವ ಎಣ್ಣೆಯಾಗಿಸಿದೆನವ್ವ


ಅಟ್ಟಿದನವ್ವ ಸೂರ್ಯ ಬಂದು ಉಟ್ಟ ದಟ್ಟಿಯ ಸೆಳೆದು
ಹೊರಗೆ ಅಟ್ಟಿದರವ್ವ ಜನರು ದೂರವಿಟ್ಟರವ್ವ
ತಮವ ಕಳೆದನೆಂದು ಹೊಗಳಿ ಅಟ್ಟಕ್ಕೇರಿಸಿದರು ರವಿಯ
ಒಡಲ ಕಂದನೊಡನೆ ನಾನು ಮೂಲೆ ಸೇರಿದೆನವ್ವ ಇತ್ತ ಮೂಲೆ ಸೇರಿದೆನವ್ವ!


- ಜಯಲಕ್ಷ್ಮೀ ಪಾಟೀಲ್.

3 comments:

sunaath said...

ವಚನದ ಧಾಟಿಯಲ್ಲಿರುವ ಈ ಕವನಕ್ಕೆ ‘ಕುಂತಿ’ಯರ ಸ್ವಗತವೆನ್ನಬಹುದೆ?

Jayalaxmi said...

ಹೌದ್ರಿ ಕಾಕಾ. ಹಣತೆಗಳ ಚಿತ್ರ ಕೊಟ್ಟು ಕವನ ರಚಿಸಿ ಎಂದ 3K ಬಳಗದ ಗುಂಪಲ್ಲಿ ಬರೆದ ಕವನವಿದು. ಸಿಂಗಲ್ ಮದರ್/ಸಿಂಗಲ್ ಪೇರಂಟ್‍ಹುಡ್ ಫ್ಯಾಶನ್ ಆಗುತ್ತಿರುವ ಈ ಅಪಾಯಕರ ದಿನಗಳಲ್ಲಿ ಕುಂತಿ ನೆನಪಾದಳು ನನಗೆ...

vaduzlabiche said...

Casino & Slot Machines - Mapyro
Casinos Near Casino · MGM National 동해 출장안마 Harbor. 5.7 화성 출장샵 / 5.0. Casino. 나주 출장안마 0.3. Hotel. 포항 출장안마 2.0. Casino. 0.3. Casino. 강원도 출장샵 0.3. Hotel. 2.0. Casino. 0.3. Hotel.