Wednesday, April 12, 2017

ಉಸ್ಸಂದ್ರೂ ಔಟು ಒಲ್ಲೆ ಅಂದ್ರೂ ಔಟು

ಅಗ್ಗಿ ಹಾಯುತ್ತಲೇ ಇದ್ದೇವೆ
ಅಂದಿನಿಂದ ಇಂದಿನವರೆಗೆ
ನಾಲ್ಕು ಹೆಜ್ಜೆಗೊಂದು ಕೊಂಡ
ಅದರ ತುಂಬಾ ಸಂಶಯದ ಕೆಂಡ
ಅವರೂ ಇವರೂ ಕೊಂಡದ ದೇವರು
ಲಿಂಗಬೇಧವರಿಯದ ಸಮಾನರವರು
ಕೊಂಡ ದಾಟುವಲ್ಲಿ ಕಾಲಿಗಂಟುವ ಬಿಸಿ
ಗೆ ಉಸ್ಸೆನ್ನುವಂಗಿಲ್ಲ ಒಲ್ಲೆಯೆನ್ನುವಂಗಿಲ್ಲ

-ಜಯಲಕ್ಷ್ಮೀ ಪಾಟೀಲ್
16 Feb 2017

2 comments:

sunaath said...

ಹೌದು, ಬದುಕೊಂದು ಅಗ್ನಿಕೊಂಡ ಅಲ್ಲವೆ?!

Jayalaxmi said...

ಖರೆ ಕಾಕಾ...