ಅದು ಮುಳುಗಡೆ ಪ್ರದೇಶದಿಂದ ಬಂದ ವಲಸಿಗರಿಗೆಂದೇ ನಿರ್ಮಾಣಗೊಂಡ ಪುಟ್ಟ ಊರು ಕಲಕೇರಿ. ಕರ್ನಾಟಕದ ಧಾರವಾಡಕ್ಕೆ ಹತ್ತಿರ. ಊರಿನ ಪ್ರವೇಶದಲ್ಲೊಂದು ಕೆರೆಯಿದೆ. ಆಹಾ! ಎಂಥಾ ಅದ್ಭುತ ರಮಣೀಯ ತಾಣವೆಂದರೆ ಆ ಕೆರೆ ಇದಿರು ನಿಂತರೆ ಅಲ್ಲಿಂದ ಹೊರಡಲು ಮನಸೇ ಬಾರದು.. ೨೦೦೮ ಡಿಸೆಂಬರ್ನಲ್ಲಿ ಖ್ಯಾತ ನಿರ್ದೇಶಕ ರಾಮಚಂದ್ರ ಪಿ ಎನ್ ಅವರ 'ಪುಟಾಣಿ ಪಾರ್ಟಿ' ಎನ್ನುವ ಹೆಸರಿನ ಮಕ್ಕಳ ಚಿತ್ರದ ಶೂಟಿಂಗ್ಗೆಂದು ೧೫ ದಿನ ಅಲ್ಲಿ ನನ್ನ ಓಡಾಟ. ಪ್ರತಿ ದಿನ ಚೆಲುವಾದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಂಡು ಅನುಭವಿಸುವ ಸೌಭಾಗ್ಯ. ಆ ಕೆರೆ ದಾಟುವಷ್ಟು ಹೊತ್ತು ಸಾದ್ಯವಾದಷ್ಟುಅದನ್ನು ಕಣ್ಣಲ್ಲಿ ತುಂಬಿಕೊಂಡುಬಿಡುವ ಹಸಿದ ಬಡವನ ಆಸೆಬುರುಕುತನ!! :) ಕಣ್ಣಲ್ಲಿ, ಮನಸಲ್ಲಿ ತುಂಬಿಕೊಂಡಿದ್ದು ಸಾಲದು ಎನಿಸಿ ನೀವೆಲ್ಲರೂ ನೆನಪಾಗಿ ನಿಮ್ಮೆಲ್ಲರಿಗೂ ಬೇಕಲ್ಲವಾ ಅಂದುಕೊಂಡು ನನ್ನ ಮೊಬೈಲಿನಲ್ಲಿ ಆ ಕೆರೆಯ ಸೊಬಗನ್ನು ಹೊತ್ತು (ಕದ್ದು!!) ತಂದಿದ್ದೇನೆ. ಜೊತೆಗೆ ಸುಮಧುರ ಹಾಡಿನ ಘಮವನ್ನೂ ಸೇರಿಸಿ ನಿಮ್ಮೆದುರಿಗಿಡುತ್ತಿದ್ದೇನೆ!!
ಹೇಗಿದೆ ತಿಳಿಸಿ.. :)
ಹೇಗಿದೆ ತಿಳಿಸಿ.. :)
16 comments:
ಯೇ, ಭಾಳ ಛಲೋ ಅದ ಬಿಡ್ರೀ.. ನಾ ಹುಟ್ಟಿ ಬೆಳೆದ ನಮ್ಮೂರಿನ ಹತ್ರ ಇಂಥಾ ಒಂದು ಸುಂದರ ಜಾಗಾ ಇದ್ದದ್ದು ನನಗs ಗೊತ್ತಿರಲಿಲ್ಲ. ಅದಕ್ಕ ನಾ ಹೇಳ್ತಿರ್ತೀನಿ ’ಕಾಶ್ಮೀರ ಆಮ್ಯಾಲೆ, ಮೊದ್ಲ ನಮ್ಮ ಧಾರವಾಡ ಅಂತ’
ಥ್ಯಾಂಕ್ಸ್ ರೀ..
edit yel maadidri..? mane PC nalla?
ಹೌದ್ರೀ ಅವಿ ಸಾಹೇಬ್ರ,ಕಾಶ್ಮೀರಾಗ ಚಪ್ಪರಚೆಂಡು(ಸೇಬು)ಬೆಳದ್ರ ನೀವು ಧಾರವಾಡದವ್ರು ಪೇಡೆ ಬೆಳೀತೀರಿ!! ಎರಡೂ ಜಗತ್ಪ್ರಸಿದ್ಧ!:)
ಹೌದು ಸರ್, ಮನೆ ಪಿಸಿಯಿಂದಾನೆ ಎಡಿಟ್ ಮಾಡಿದ್ದು.ಹಾಡಿಗಾಗುವಷ್ಟು ಪೋರ್ಷನ್ ಮಾತ್ರ ಇಟ್ಕೊಂಡು ಉಳಿದಿದ್ದನ್ನ ಕಟ್ ಮಾಡಿದೆ. ಶೂಟ್ ಮಾಡೋವಾಗ ಈ ಹಾಡಿಗೆ ದೃಶ್ಯ ಇಷ್ಟೋಂದು ಮ್ಯಾಚ್ ಆಗುತ್ತೆ ಅನ್ನೊ ಕಲ್ಪನೆ ಸಹ ಇರ್ಲಿಲ್ಲ! ಒರಿಜಿನಲ್ ವ್ಹಾಯ್ಸ್ ಹೇಗೆ ಡಿಲೀಟ್ ಮಾಡೋದು ಅಂತ ಗೊತ್ತಾಗ್ಲಿಲ್ಲ.:(
muttina neerininda mana aardravaitu..
anda hanga , naa rough cut nodide.Chalo bandaiti.
Thanku.. ಖರೇ?! ವ್ಹಾ!ಖುಷಿ ಆತು ನಿಮ್ ಮಾತ್ ಕೇಳಿ. ನಾವೆಂದ್ ನೋಡ್ತೀವೊ... ಇನ್ನೂ ಟಾಕಿ ಪೋರ್ಷನ್ ಬಾಕಿ ಅದ ಅಲ್ಲಾ..ಆಗ ನೋಡಾಕ್ ಸಿಗತೈತಿ ನಮಗೆಲ್ಲಾ.
ಜಯಲಕ್ಷ್ಮಿಯವರೇ,
ನಮಸ್ಕಾರ. ನಿಮ್ಮ ಬ್ಲಾಗನ್ನು ಮಲ್ಲಿಕಾರ್ಜುನರ ಬ್ಲಾಗಿನ ಮೂಲಕ ಸ೦ಪರ್ಕಿಸಿದೆ. ಚೆನ್ನಾಗಿದೆ. ನೀವು ಮುಕ್ತ ಮುಕ್ತ ದ ಮ೦ಗಳತ್ತೆ ಅ೦ತ ತಿಳಿದು ಖುಷಿಯಾಯಿತು. ನಾನು ಧಾರಾವಾಹಿಯ ಖಾಯಮ್ ನೋಡುಗನಾಗಿದ್ದು, ಅದರಲ್ಲಿ ನಿಮ್ಮ ನಗುವಿಲ್ಲದ, ಬಿಗುಮಾನದ ಮುಖಮುದ್ರೆ, ಮಾತಿನ ಗತ್ತು ನನಗಿಷ್ಟ. ನನ್ನದು ಒ೦ದು ಬ್ಲಾಗಿದೆ. ಭೇಟಿ ಕೊಡುತ್ತಿರಿ,
ಜಯಲಕ್ಷ್ಮಿಯವರೆ,
ಮೂಡಲ ಮನೆಯ ಹಾಡಿನ ಜೊತೆ ಅದ್ಭುತ ಕ್ಲಿಪ್ಪಿಂಗ್. ಕೆರೆಯ ದೃಶ್ಯಾವಳಿ ನಯನಮನೋಹರ.ಧನ್ಯವಾದಗಳು.
ಜಯಲಕ್ಷ್ಮಿ,
ಚೆನ್ನಾಗಿ ಇದೆ, ನೈಸ್ ಪ್ಲೇಸ್.... ಹೌದು ಇದನ್ನ ಕದ್ದು ಮುಚ್ಚಿ ತರೋ ಅಗತ್ಯ ಇತ್ತ....? ಚೆನ್ನಾಗಿ ಇರೋದನ್ನ ಸವಿಯಲೆಂದೇ ನಮ್ಮ ಕಣ್ಣು... ಜೊತೆಗೆ.. ಕ್ಯಾಮೆರಾ ಕಣ್ಣು ಇರುವುದು ಅಲ್ವ...
ಇದಕ್ಕೆ ತಕ್ಕದಾದ ಸಾಂಗ್ ಎಡಿಟಿಂಗ್ ಚೆನ್ನಾಗಿದೆ..
ಗುರು
very very beautiful scenery
and quite aptly it is in sync with the song !
ಜಯಲಕ್ಷ್ಮೀಯವರೆ...
ನಿಮ್ಮ ಲೇಖನಗಳು, ಕವನಗಳು..
ಇಷ್ಟವಾದವು...
ಇನ್ನಷ್ಟು ಬರೆಯಿರಿ...
ಪರಾಂಜಪೆಯವರೆ,ಮಲ್ಲಿಕಾರ್ಜುನವರೆ, ಗುರು ಮತ್ತು ಪ್ರಕಾಶ್ ಹೆಗಡೆಯವರೆ ನಿಮ್ಮೆಲ್ಲರ ಮೆಚ್ಚುಗೆಗೆಶಿರ ಬಾಗುವೆ ನಾನು.
ಹೇಮಶ್ರೀ ಮೆಚ್ಚುಗೆಗೆ ಥ್ಯಾಂಕ್ಸ್.
ಜಯಲಕ್ಷ್ಮಿ ಮೇಡಮ್,
ವಾಹ್! ಎಂಥ ಸೊಬಗಿನ ಸಿರಿ...ಪ್ರಕೃತಿಯ ಸೊಬಗನ್ನು ಚೆನ್ನಾಗಿ ಸೆರೆಯಿಡಿದಿದ್ದೀರಿ...ಜೊತೆ ಅದಕ್ಕೆ ಸೊಗಸಾದ ಗೀತೆ...ಅದು ನನ್ನ ಮೆಚ್ಚಿನ ಗೀತೆಯೂ ಕೂಡ..ನೋಡಿ ಮನಸ್ಸಿಗೆ ಆಹ್ಲಾದತೆಯುಂಟಾಯಿತು..
ಧನ್ಯವಾದಗಳು.
ಧನ್ಯವಾದ ಶಿವು ಸರ್, ನಿಮ್ಮಗಳ ಹಾಗೆ ನನಗೆ ಚಂದವಾಗಿ ಫೋಟೊ ಯಾ ವಿಡಿಯೊ ತೆಗೆಯಲು ಬರದು. ಆದ್ರೂ ಆಸೆ... ನಿಮ್ಮಂಥವರೆಲ್ಲ ಮೆಚ್ಚುಗೆ ವ್ಯಕ್ತ ಪಡಿಸಿದಾಗ ಖುಷಿಯಾಗುತ್ತೆ, ಮೇಷ್ಟ್ರು ನೋಟ್ ಬುಕ್ ಹಾಳೇಲಿ ಗುಡ್, ವೆರಿ ಗುಡ್ ಅಂತೆಲ್ಲ ಬರೆದಾಗ ಆಗೋವಂಥ ಖುಷಿ. ಧನ್ಯವಾದಗಳು.
ತುಂಬಾ ಚೆನ್ನಾಗಿದೆ.ತುಂಬಾ ಮೆಚ್ಚುಗೆಯಾಯಿತು ಮೇಡಂ...ಅಭಿನಂದನೆಗಳು.
Post a Comment