ಅವರಿಬ್ಬರ ನಡುವಿನ ಜಗಳ ಹೆಚ್ಚಾಗತೊಡಗಿದ್ದವು.
ಅವ ಆಕೆಯನ್ನು ಒಳ ಕೋಣೆಯಲ್ಲಿ ಕೂಡಿಹಾಕಿ ಹೊರಗಿನಿಂದ ಚಿಲಕ ಹಾಕಿಕೊಂಡು ನಡುಮನೆಯ ಬಾಗಿಲನ್ನೂ ಮುಂದೆ ಮಾಡಿಬಿಟ್ಟ.
ಒಳಕೋಣೆಯಿಂದ ಕೇಳಿಬರುತಿದ್ದ ಕೋರಿಕೆ, ಚೀರಾಟ, ಅಳು ಕ್ಷೀಣಿಸುತ್ತಾ, ನಿಧಾನವಾಗಿ ಒಳದನಿ ಮೌನವಾಯಿತು.
ವರುಷಗಳುರಳಿದವು...
ಒಂದು ದಿನ ನಡುಮನೆಯ ಬಾಗಿಲು ದೂಡಿ ಬಂದು ನಿಂತು, ಒಳಕೋಣೆಯತ್ತ ನೋಡುತ್ತಾ ಅವ ಹೇಳಿದ. "ಹೊರಗೆ ಬಾ ಸಾಕು."
ಹೊರಗಡೆಯಿಂದ ಚಿಲಕ ಹಾಕಿದ, ಒಳಬದಿಯಿಂದ ಅಗುಳಿಯೇ ಹಾಕಿರದ, ಬಾಗಿಲನ್ನು ನೋಡುತ್ತಾ ಆಕೆ ಅಂದಳು, "ಹೇಗೆ ಬರಲಿ?"
ಕ್ಷಣ ಮೌನ.
ಮತ್ತೆ ನಡುಮನೆಯ ಬಾಗಿಲು ಮುಂದೆ ಮಾಡಿದ ಸದ್ದು...
10 comments:
ಮಾನವ ಸಂಬಂಧಗಳ ವಿಶ್ಲೇಷಣೆ ಪ್ರತಿಮೆಗಳ ಮೂಲಕ.
ಆಕೆಯ ಮತ್ತು ಆತನ ನಡುವಿನ ಆ ಚಿಲಕವಾಗದ ಬಾಗಿಲು. ತೆರೆಯ ಬೇಕೆಂದರೂ ಕಾಲಾನಂತರ ತೆರೆಯಲಾರವು!
ಅಕ್ಕ, ಆಗುಳಿ ಹಾಕಿಕೊಂಡಿದ್ದು ಆತನ ಮನಸ್ಸಿಗಲ್ವಾ...ಬಲು ಸೂಕ್ಷ್ಮಾರ್ಥವಿದೆ...
Short but explosive story!
ಮನದ ಅಗುಳಿ ಒಂದು ಬಾರಿ ಮುಚ್ಚಿದರೆ ಮತ್ತೆ ಅದು ತೆರೆದರೂ ಮೊದಲಿದ್ದ ಭಾವನೆ ಇರುವುದಿಲ್ಲ... ಚೆನ್ನಾಗಿದೆ ಚೊಕ್ಕದಾದ ಕಥೆ ದೊಡ್ಡ ಅರ್ಥದೊಂದಿಗೆ ಕೂಡಿದೆ
ಚನ್ನಾಗಿದೆ ಜಯಕ್ಕ...ಸರಳ-ಆಳ...
ಜಗಳವಾಡಿ ಒಳಕ್ಕೆ ಬರಬೇಡ ಎಂದವನು ಚಿಲಕ ಹಾಕಿಕೊಳ್ಳದೇ ಮಲಗಹೋದಾಗಲೇ ಜಗಳಕ್ಕೆ ಮಂಗಳ ಹಾಡಿದ್ದ...
ಹೀಗೊಂದು ನಾನೂ ಕೇಳಿದ್ದೆ ಅತಿ ಪುಟ್ಟ ಮತ್ತು ಬಹು ಅರ್ಥ ಕೊಡುವ ಕಥೆ.
Badarinath Palavalli : ...... :) ಪ್ರತಿಕ್ರಿಯಿಸಿದ್ದಕ್ಕೆ ನನ್ನಿ ಬದ್ರಿ.
Shivu K : ಹೌದು ಶಿವು... ಪ್ರತಿಕ್ರಿಯಿಸಿದ್ದಕ್ಕೆ ನನ್ನಿ.
Sunaath kaaka : :) ಪ್ರತಿಕ್ರಿಯಿಸಿದ್ದಕ್ಕೆ ನನ್ನಿ.
Manasu: ಸುಗುಣ,...:) ಪ್ರತಿಕ್ರಿಯಿಸಿದ್ದಕ್ಕೆ ನನ್ನಿ.
ಜಲನಯನ: ಮ್ ಆಜಾದ್ ಭಾಯ್... ಪ್ರತಿಕ್ರಿಯಿಸಿದ್ದಕ್ಕೆ ನನ್ನಿ.
Post a Comment