Friday, January 4, 2013

’ಹಾಲೂ, ಕುದಿಯೂ ಎರಡೂ ನೆಲಕ್ಕೆ ಚೆಲ್ಲಿ ವ್ಯರ್ಥ…..’ – ಜಯಲಕ್ಷ್ಮಿ « ಅವಧಿ / avadhi

’ಹಾಲೂ, ಕುದಿಯೂ ಎರಡೂ ನೆಲಕ್ಕೆ ಚೆಲ್ಲಿ ವ್ಯರ್ಥ…..’ – ಜಯಲಕ್ಷ್ಮಿ « ಅವಧಿ / avadhi



ಮತ್ತೆ ಮಳೆ ಹೊಯ್ಯುತಿದೆ…

ಜಯಲಕ್ಷ್ಮಿ ಪಾಟೀಲ್

ಮೂಕವಾಗ ಬಯಸಿದಾಗಲೆಲ್ಲ
ಗುದ್ದಿಕೊಂಡು ಬರುವ ಮಾತುಗಳು
ಥೇಟ್ ಮುಚ್ಚಳ ಬಿಗಿದ ಪಾತ್ರೆ
ಯಲ್ಲಿನ ಹಾಲು
ಬುಸ ಬುಸ ಉಕ್ಕಿದಂತೆ….
ಹಾಲೂ, ಕುದಿಯೂ ಎರಡೂ
ನೆಲಕ್ಕೆ ಚೆಲ್ಲಿ ವ್ಯರ್ಥ…..
*
ನನ್ನ ಶವವನ್ನು
ಹೊತ್ತು ಸಾಗುತ್ತಿದ್ದೇನೆ
ಸವಿಸಬೇಕಾದ ಹಾದಿ
ಅದೆಷ್ಟು ದೂರವೋ
ಶವದ ವಾಸನೆಗೆ ಈಗ
ಹತ್ತಿರದವರೆಲ್ಲ ನಡೆವ
ದಾರಿಗಿಂತ ದೂರ
ಸೋತ ಹೆಗಲು ಉಸುಗುಡುತ್ತಿದೆ
ಈ ಹೆಣ ಬಲು ಭಾರ…
*
ನಿಂತು ನೋಡುತ್ತಿರುವೆ
ನನ್ನ ಶವಯಾತ್ರೆಯನ್ನು
ಮೌನ ಧರಿಸಿ
ಮೆರವಣಿಗೆಯಲ್ಲಿ ಸಾಗುತ್ತಿರುವ
ಅವರ ಮನದಲ್ಲಿ
ಮಂಗಳವಾದ್ಯಗಳು !!

6 comments:

Badarinath Palavalli said...

ಅತ್ಯುತ್ತಮ ಭಾಷಾ ಬಳಕೆಯ ಉದಾಹರಣೆ ಇಲ್ಲಿನ ಸಾಲುಗಳು.

ಮೌನರಾಗ said...

ಅರ್ಥಪೂರ್ಣ ಗಂಭೀರ ಸಾಲುಗಳು...
ಚೆನ್ನಾಗಿದೆ ಮೇಡಂ..

Jayalaxmi said...

ಬದರಿನಾಥ್, ನನ್ನಿ.

Jayalaxmi said...

ನನ್ನಿ ಸುಷ್ಮಾ.

sunaath said...

ಪ್ರತೀಕಗಳನ್ನು ತುಂಬ ಸಮರ್ಥವಾಗಿ ಬಳಸಿಕೊಂಡಿದ್ದೀರಿ, ಮೇಡಮ್. ಕೊನೆಯಲ್ಲಿ ಬರುವ ವ್ಯಂಗ್ಯ ಅದ್ಭುತವಾಗಿದೆ. ಉಕ್ಕುವ ಕುದಿಯನ್ನು ಚಿಕ್ಕ ಸಾಲುಗಳಲ್ಲಿ ಹಿಡಿದಿಟ್ಟಿದ್ದೀರಿ!

Jayalaxmi said...

ನನ್ನಿ ಸುನಾಥ್ ಕಾಕಾ.