Wednesday, February 27, 2013

ಕವನಗಳನ್ನು ಒಂದೊಂದೇ ಒಂದೊಂದೇ ಓದಿಕೊಂಡು ಬರುತ್ತಿದ್ದಂತೆ ಏನೋ ಪುಳಕ - ಸುಗುಣ ಮಹೇಶ್


ಕುವೈತಿನಲ್ಲಿರುವ ತಂಗಿಯಂತಹ ಗೆಳತಿ, ಸುಗುಣ ಮಹೇಶ್ ನನ್ನ ಕವನ ಸಂಕಲನಕ್ಕೆ ಪ್ರತಿಕ್ತಿಯಿಸಿದ್ದು ಹೀಗೆ.

ಅಕ್ಕ, 
ನಿಮ್ಮ ಕವನಗಳನ್ನು ಒಂದೊಂದೇ ಒಂದೊಂದೇ ಓದಿಕೊಂಡು ಬರುತ್ತಿದ್ದಂತೆ ಏನೋ ಪುಳಕ ಈ ಸಾಲುಗಳು ನನಗೇ ಏಕೆ ಹತ್ತಿರ ಎಂದೆನಿಸುವಷ್ಟು ಆಪ್ತವಾದವು.

ಬತ್ತಲಾಗುವುದೆಂದರೆ... ಪ್ರೀತಿಯನ್ನು ಬತ್ತಿ ಹೋಗಿಸುವ ಪರಿ ವಾಹ್.. ಬತ್ತಿದ ಒರತೆಯ ಒಡಲೀಗ ನಿಮ್ಮ ಶವ ಹೂಳುವ ಜಾಗ.. ಅಬ್ಬಾ ಎಂಥಾ ಕಲ್ಪನೆ...

ರೂಪಕ... ಇಲ್ಲಿನ ಎರಡನೇ ರೂಪಕ ಮಲ್ಲಿಗೆಯ ಬಗ್ಗೆ ... ದಿನ ಖರ್ಚಾಗುವುದೆಂದು ಪ್ಯಾಸ್ಟಿಕ್ ಮಲ್ಲಿಗೆ ಕೊಂಡವಳಿಗೆಲ್ಲಿ ತಿಳಿಯುತ್ತೆ ಘಮಿಸುವ ಮಲ್ಲಿಗೆಯ ಪರಿಮಳ ಅಲ್ಲವೇ..? ತುಂಬಾ ಇಷ್ಟವಾಯಿತು..
 
ಹಕ್ಕಿಯ... ಬಗೆಗಿನ ಆಲೋಚನೆ, ಅಲ್ಲಿ ಇಲ್ಲಿ ಕುಳಿತು ದಿನಕಳೆವ ಹಕ್ಕಿಗಳಿಗೆ ಆಕಾಶದತ್ತಲೇ ಚಲನೆ ಭೂಮಿಯತ್ತಲೇ ಗಮನ ಹೊಟ್ಟೆ ತುಂಬಿಸುಕೊಳ್ಳುವುದಕ್ಕೆ. ನಿಜ ಎಷ್ಟು ಸೂಕ್ಷ್ಮವಿರಬೇಕು ಅವುಗಳ ಕಣ್ಣು ಬಾನೆತ್ತರಲ್ಲಿ ಹಾರಾಡಿ ಭೂಮಿಯತ್ತ ಗಮನ ಹರಿಸುವುದು ಅಷ್ಟು ಸಲೀಸೇ... ಸಕ್ಕತ್ ಇಷ್ಟ ಆಯ್ತು ಇಲ್ಲಿ ಮೂಕಪಕ್ಷಿಯ ಜಾಣ್ಮೆ ಚುರುಕುತನ ಹೊಗಳಿದ್ದೀರಿ ಜೊತೆಗೆ ಅವುಗಳಿಗೆ ಸ್ವತಂತ್ರವಾಗಿ ಕೂರಲು ಬಿಡದ ಜನರ ಗಮನ ಸೆಳೆದಿದ್ದೀರಿ.

ಆಸೆಗಳು... ಬೇರುಗಳಾದರೆ ಆಸೆಗಳಿಗೂ ಸುಭದ್ರತೆ ಇರುತ್ತದೆಯಲ್ಲವೇ.. ಇನ್ನೊದೆಡೆ ಎಲೆಗಳಿಗೆ ಬೇರಿನಿಂದಲೇ ಆಹಾರ ಅದರಿಂದಲೇ ಹಸಿರಾಗಿರಲು ಸಾಧ್ಯ ಬೇರು ಬಿಟ್ಟು ನೆಡೆದರೆ ನೀವು ಹೇಳಿದಂತೆ ತಿಪ್ಪಿಗುಂಡೇ ಆಧಾರ... ವಿಭಿನ್ನ ಶೈಲಿಯ ಹೋಲಿಕೆ.. ಕವನಕ್ಕೆ ತಕ್ಕಂಟೆ ಚಿತ್ರ ಸೂಪರ್

ತಾಯಿ ಮತ್ತು ಮಗಳು... ಅಬ್ಬಾ ಎಂಥಾ ಪ್ರಶ್ನೆ .. ಭೂಮಿ ತಾಯಿ ನಮ್ಮೆಲ್ಲಾ ತಪ್ಪುಗಳನ್ನು ಎಷ್ಟು ದಿನ ಸಹಿಸಾಳು ಸಹಿಸಿ ಸಹಿಸಿ ಕೊನೆಗೊಂದು ದಿನ ಭೂಕಂಪವೋ ಯಾವುದೋ ಕೋಪಕ್ಕೆ ಸಿಲುಕುವೆವು.. ಅವಳಲ್ಲಿದ್ದ ಗುಣ ಮಗಳಾದ ಸೀತೆಗೆ ಏಕೆ ಬರಲಿಲ್ಲ.. ಅದೇ ಅರ್ಥವಾಗದ್ದು.. ಜನ ಸೀತೆಯಂತಿರಬೇಕು ಹೆಣ್ಣು, ಎಂದು ಹೋಲಿಸಿದರೆ ಸಿಟ್ಟು ಬರುತ್ತೆ... ಮಾಡಿದ್ದನ್ನೆಲ್ಲ ಒಪ್ಪಿಕೊಂಡು ಕೂರಲಾಗುತ್ತದೆಯೇ.. ಅಮೋಘ ಪ್ರಶ್ನೆ ಅಕ್ಕಾ... ನಮ್ಮ ಮನಸಲ್ಲೂ ಇಂತಹ ಪ್ರಶ್ನೇ ಹುಟ್ಟಿಸುವಂತಹಾ ಕವನ.

ಅರಿಕೆ... ಮುಖವಾಡಗಳಿಗೆ ಹೆಸರು ಕೊಟ್ಟರೂ ನಿಲ್ಲುತ್ತದೆ ಎಂಬ ಖಾತ್ರಿ ಇಲ್ಲ... ಹೆಸರಿಲ್ಲದೆಯೇ ಸಂಬಂಧಗಳು ಭದ್ರವಾಗಿದರೆ ಅವು ಚಿರಕಾಲ ಉಳಿಯುತ್ತವೆ.. ಪುಟ್ಟ ಸಾಲು ಒಳ್ಳೆಯ ಅರ್ಥವನ್ನು ನೀಡುತ್ತದೆ.

 ಕಳಕೊಂಡವಳು - ಯಾರು ಯಾರೋ ಏನೇನೋ ಅನ್ನುತ್ತಾರಂತ ನಮ್ಮ ಆಸೆಗಳನ್ನ ಏಷ್ಟೋ ಕಳೆದುಕೊಂಡಿದ್ದೀವಿ ಅರಿವಾಗುವಷ್ಟರಲ್ಲಿ ಇರುಳುಗಣ್ಣೇ ಸತ್ಯ... ಎಂತಾ ಮಾತು ಅಕ್ಕಾ ಹ್ಯಾಟ್ಸ್ ಆಫ್ ಟು ಯು.. 
 ವಾಸ್ತವದೆಡೆಗೆ-ಸಾಗಲೇ ಬೇಕು ಆದರೆ ವಾಸ್ತವವನ್ನು ಅರಿಯುವುದೇ ಕಷ್ಟ ಈಗಿನ ಕಾಲದಲ್ಲಿ.. ಪುಟಕಿಟ್ಟ ಚಿನ್ನವಾಗುವುದು ಹೇಗೆ ... ಹೆಣ್ಣು ಮತ್ತೊಂದು ಮನೆ ಹೊಕ್ಕರೆ ಅಲ್ಲಿನ ಕಟ್ಟುಪಾಡುಗಳಿಗೆ ಹೊಂದಿಕೊಳ್ಳುವುದಕ್ಕೆ ಸಮಯ ಬೇಕು ಇನ್ನು ಸೋಗಿನ ಬದುಕು ಎಷ್ಟೋ ಜನರಲ್ಲಿ ರೂಢಿಸಿಕೊಂಡು ಬಂದುಬಿಟ್ಟಿದೆ.
ಮಾತು-ಮೌನ ಇದನ್ನ ಹಿಡಿದೇ ನಾನು ಎಷ್ಟೋ ಆವಿಶ್ಕಾರ ಮಾಡೋಕ್ಕೆ ಹೊರಟಿದ್ದೆ... ಮಾತು ಇಲ್ಲದೇ ಮೌನವಾಗಿ ಜೀವಿಸಲು ಸಾಧ್ಯನಾ ಅಂತಾ... ನಿಮ್ಮ ಮಾತು-ಮೌನ ಕವನ ಓದಿದ ಮೇಲೆ ಮಾತು-ಮೌನ ಎರಡು ಇರಬೇಕು ಕವಿಯಾಗಿ ಮಾತು ಮೈಪುಳಕವಾಗಿ ಮೌನವಿರಬೇಕು ಎಂದೆನಿಸುತ್ತೆ.

ಆದದ್ದೆಲ್ಲಾ - ತದ್ಭವ-ತತ್ಸಮಗಳು ಬೆಚ್ಚಗಿನ ಗೂಡಾಗಿ ಕನಸುಗಳನ್ನೇಕೆ ಗರ್ಭಪಾತ ಮಾಡಿಸುವುದು ಸಲೀಸಾಗಿ ಪ್ರಸವ ಮಾಡಿಸಬಹುದಲ್ಲಾ..:) ಖಂಡಿತಾ ಗರ್ಭಪಾತವಾದಾಗ ಪಿಂಡಗಳನ್ನು ನೋಡಿ ನಿಟ್ಟುಸಿರೊಂದೇ ಸಮಾಧಾನ...

ನನ್ನೊಳು ನೀ- ಅಕ್ಕ ಮಹಾದೇವಿ ಪ್ರೇಮಿಸುವ ಪರಿ ನಮ್ಮಲ್ಲಿ ಹೇಗೆ ಹುಟ್ಟಲು ಸಾಧ್ಯ ಅವಳೊಬ್ಬಳು ಪ್ರೇಮ ತಪಸ್ವಿ... ಆಹಾ..!! ನಿಮ್ಮನ್ನು ನೀವು ಅವಳೊಂದಿಗಿನ ಪ್ರೇಮಕ್ಕೂ ನಿಮ್ಮ ಪ್ರೇಮಕ್ಕೂ ತಾಳೆ ಚೆನ್ನಾಗಿದೆ... ಪ್ರೀತಿ ದೊರಕಿದ ಪರಿ ಚೆಂದ..

ಅವ್ರು ಬಿಟ್ ಇವ್ಯ್ರಾರು- ಎಲ್ಲ ಬಿಟ್ಟವರು ಊರಿಗೆ ದೊಡ್ಡವರು ಎಂಬ ಗಾದೆ ನೆನಪಾಯಿತು ಈ ಕವಿತೆ ಓದಿ. ನಾವುಗಳು ಲೌಕಿಕ ಬದುಕಿನಲ್ಲಿ ಆಸೆ-ಆಮಿಷಗಳಲ್ಲಿ ಬದುಕುತ್ತಿದ್ದೇವೆ ಇನ್ನೆಲ್ಲಿ ಆಗುವೆವು ಬುದ್ಧ ಬಸವರಂತೆ.. ತುಂಬ ಚೆನ್ನಾಗಿದೆ ನಿಮ್ಮ ಆಲೋಚನೆ.

ಕಡಲು - ಆಹ್..!! ಸಕ್ಕತ್ ಸಮಜಾಯಿಸಿನೇ ಕೊಟ್ಟೀರಿ ಸಮುದ್ರ ಹೆಣ್ಣುಗಳ ಸಮಾವೇಶವೇ ಸರಿ..!!

ಅನುಭವ್ಸು- ಊರಲ್ಲಿ ಹೋಗೋ ಮಾರಿನ ಮನೆಗೆ ತಂದ್ರಂತೆ ಹಹ ಈ ಗಾದೆ ನೆನಪಾಯಿತು ಈ ಸಾಲುಗಳನ್ನ ಓದಿದ ಮೇಲೆ.

ತಾವು- ಅಬ್ಬಾ.. ಎಷ್ಟು ಜನ ಯಾವ ಯಾವ ರೀತಿ ಯಾರನ್ನು ತಿನ್ನುತ್ತಾರೆ ನೋಡಿ... ಸಿಗರೇಟು, ಹೆಂಡ, ರಾಜ್ಕಾರಣಿ ಎಲ್ಲರೂ ಒಂದಲ್ಲ ಒಂದು ರೀತಿ ಕಬಳಿಸುವವರೇ... 

ಎಲ್ಲವೂ ವಿಭಿನ್ನತೆಯನ್ನು ಮೆರೆದಿದೆ ಅಕ್ಕಾ... ನನಗೆ ತುಂಬಾ ತುಂಬಾ ಇಷ್ಟವಾದ ಕವನಗಳ ಬಗ್ಗೆ ನನಗೆ ಅನ್ನಿಸಿದ್ದನ್ನು ಬರೆದೆ. ನೀವು ಕಳುಹಿಸಿದಾಗಿಂದ ಸುಮಾರು ೩,೪ ಬಾರಿ ಓದಿದ್ದೇನೆ ಎಲ್ಲಾ ಕವನಗಳು ನನಗೆ ಇಷ್ಟವಾದವು.. ಆದರೆ ಒಂದು ಕೋರಿಕೆ ದಯವಿಟ್ಟು ಮರು ಮುದ್ರಣ ಮಾಡಿಸಿ ಹಾಗೆ ಮತ್ತಷ್ಟು  ಕವನಗಳಿಗೆ ಹೊಸ ಪುಸ್ತಕವನ್ನು ಹೊರತನ್ನಿ... 

ನನಗಂತು ಕವನಗಳನ್ನು ಓದಿ ಬಹಳಷ್ಟು ಖುಷಿಯಾಗಿದೆ... ಎಷ್ಟು ಫ್ರೌಢತೆ ಇದೆ ಸಾಲುಗಳಲ್ಲಿ ಅರ್ಥಗರ್ಭಿತವಾಗಿವೆ.ಶುಭವಾಗಲಿ.....
                                                                         - ಪ್ರೀತಿಯಿಂದ,
                                                                               ಸುಗುಣ (22nd nov 2012)

8 comments:

Badarinath Palavalli said...

ಸುಗುಣ ಅವರು ಪ್ರತಿಕ್ರಿಯಿಸಿರುವ ಯಾವ ಸಾಲಿನಲ್ಲೂ ಸುಳ್ಳಿಲ್ಲ. ನಿಮ್ಮ ಕಾವ್ಯದ ಹೊಳಹೂ ಮತ್ತು ಅದು ಹಚ್ಚುವ ಕಿಂಟನೆಯೂ ನನಗೆ ಮೊದಳಿಂದಲೂ ಅಚ್ಚರಿಯ ಮೂಡಿಸಿದೆ. ಸುಗುಣ ಅವರ ಐ ಪ್ರತಿಕ್ರಿಯೆಯೂ ನಿಮ್ಮ ಕವನ ಸಂಕಲನದ ಓದಿಗೆ ಪ್ರೇರಕದಂತೆಯೂ ಕೆಲಸಮಾಡುತ್ತದೆ.

Jayalaxmi said...

Thanks Badri.

ಮನಸು said...

ಜಯಾ ಅಕ್ಕಾ,
ಧನ್ಯವಾದಗಳು ಬೆಳ್ಳಂಬೆಳ್ಳಗ್ಗೆ ನಿಮ್ಮ ಬ್ಲಾಗ್ ಓದಿ ಖುಷಿ ಆಯ್ತು. ನೆನ್ನೆ ಕೂಡ ನಿಮ್ಮ "ನನ್ನೊಳು ನೀ" ಈ ಕವನವನ್ನು ಓದುತ್ತಿದ್ದೆ ಅಕ್ಕಮಹಾದೇವಿಯ ಪ್ರೇಮಿಸುವ ಪರಿ ನೀವು ರಚಿಸಿದ ಕವನ ಮನಸ್ಸೊಳಗೆ ಆಗಾಗ ಬರುತ್ತಿತ್ತು. ನೀವು ಖಂಡಿತಾ ಕವನ ಸಂಕಲನ ಮರುಮುದ್ರಣದ ಜೊತೆಗೆ ಮತ್ತೊಂದು ಕವನ ಸಂಕಲನ ಬಿಡುಗಡೆ ಮಾಡಲೇ ಬೇಕು..:)

sunaath said...

ನಿಮ್ಮ ಕವನಗಳು ಹಾಗು ಸುಗುಣಾ ಅವರ ರಸಗ್ರಹಣ ಭಾವ ಎರಡೂ ಇಷ್ಟವಾಗುತ್ತವೆ.

Jayalaxmi said...

ನಿಮ್ಮ ಪ್ರೀತಿಗೆ ಮಣಿದು ಪ್ರಯತ್ನಿಸುವೆ ಸುಗುಣ. :) ನನ್ನಿ.

Jayalaxmi said...

ನಿಮ್ಮ ಪ್ರೋತ್ಸಾಹದ ಆಶೀರ್ವಾದ ಸದಾ ಹಿಂಗ ನನ್ನ ಜೊತಿ ಇರ್ಲಿ ಕಾಕಾ. ನನ್ನಿ. :)

ಜಲನಯನ said...

ಓಹೋ...ಸುಗುಣವಿಮರ್ಶೆ..!! ಜಯಕ್ಕ ಬ್ಲಾಗಿಗೆ ನಾವಂತೂ ಕಡಿಮೆ ಆಗಿಬಿಟ್ಟಿದೆ...ನೀವಾದರೂ ಆಗಾಗ್ಗೆ ಬರೀತೀರಲ್ಲಾ ಅದೇ ಸಂತೋಷ..

Jayalaxmi said...

ನೀವೂ ಮತ್ತೆ ಬರೆಯಲು ಶುರು ಮಾಡಿ ಭಾಯ್. :)