Tuesday, April 29, 2014

ಹೀಗೊಂದು ಸಾವು

ಅವಳ ಸಾವಾಗಿತ್ತು.
ಅವಳಿಂದ ಉಪಕಾರ, ಉಪಚಾರ ಹೊಂದಿದವರಲ್ಲಿ ಅನೇಕರು
ಸಾವಿನ ಮನೆಯಲ್ಲಿ ನೆರೆದು, ತಾವುಗಳು ಇದಕ್ಕಾಗಿ ಬಿಟ್ಟೆದ್ದು ಬಂದ ಕೆಲಸಗಳ ಕುರಿತ ಮಾತಲ್ಲಿ,
ಕೊನೆಯ ದಿನಗಳಲ್ಲಿ ಅವಳು ಅನುಭವಿಸಿದ ನರಕವನ್ನು ಸಹಿಸಿದ ಅವಳ ಗಂಡನ ಗುಣಗಾನದಲ್ಲಿ ತೊಡಗಿದ್ದರು.
ಮತ್ತೆ ಶವ ಅನಾಥಪ್ರಜ್ಞೆಯಿಂದ ನರಳತೊಡಗಿತು...

- ಜಯಲಕ್ಷ್ಮೀ ಪಾಟೀಲ್.













5 comments:

sunaath said...

ಐದೇ ಸಾಲುಗಳಲ್ಲಿ ಅದ್ಭುತ ಕತೆಯನ್ನು ಹೇಳಿದ್ದೀರಿ.

Badarinath Palavalli said...

ನಿಜವಾಗಲೂ ಹೀಗೇ ನಡೆಯುವುದು.

Jayalaxmi said...

ಧನ್ಯವಾದಗಳು ಸುನಾಥ್ ಕಾಕಾ. :)

Jayalaxmi said...

ಹೌದು ಬದ್ರಿ, ಆದರೆ ಈ ಅನಾಥ ಪ್ರಜ್ಞೆಗೆ ಬದುಕಿದ್ದಾಗಲೇ ಅದೆಷ್ಟೋ ಜನರನ್ನು ಕಾಡುತ್ತದೆ!ನಾವು ಸೂಕ್ಷ್ಮ ಎಂದುಕೊಳ್ಳುತ್ತಲೇ ಎದುರಿನವರ ಸೂಕ್ಷ್ಮತೆಯನ್ನು ಮರೆತು ಬಿಡುವುದು ವಿಪರ್ಯಾಸ ಅಲ್ವಾ?
ಪ್ರತಿಕ್ರಿಯೆಗೆ ಧನ್ಯವಾದಗಳು. :)

A.G.Viji, Bijapura. said...

ಸತ್ತವರ ಸುತ್ತ ನೆರೆದವರ ಮಾತುಗಳನ್ನು ಕೇಳಿದರೆ ನಿಜವಾಗಲು ಸತ್ತವನು ಎದ್ದು ನರಳಬೇಕು ಅನ್ನಿಸುವಂತಿರುತ್ತದೆ.