ಕ್ಷಿತಿಜಕ್ಕಂಟಿದ
ನೆಂಟನೇ
ಜೊತೆ ಸಾಗುವ ತುಸು
ದೂರ
ವಿಶ್ರಮಿಸಿಕೊ ನೀನೂ
ಅರೆಘಳಿಗೆ
ಒಂಟೊಂಟಿಯಾಗೇ ಜೊತೆಗಿರುವೆವು
ಏರಿಳಿತ ಎಲ್ಲಿಲ್ಲ
ಹೇಳು
ಬದುಕಿದು ಮರಳುಗಾಡೆಂದಾದರೆ
ಬರಡೆಂದರ್ಥವಲ್ಲವೇ
ಅಲ್ಲ
ಅಗೋ ಅಲ್ಲಿ ಜೀವ
ಸೆಲೆ!
ಹತ್ತಿರದಲ್ಲೇ ಬದುಕ
ಉಸಿರಾದ
ಪೊದೆ ಪೊದೆ ಹಸಿರು!
ತುಸು ಹೊತ್ತು ಬಿಸಿಯೇರಿ
ಬುಸುಗುಡುವ ಈ ಉಸುಕು
ನೀನೀರಿಗಿಳಿಯೇ ಝಳ
ಜಾರಿ
ತಂಪಾಗಿ ಸುಖದ ಸುಪ್ಪತ್ತಿಗೆ
ಅರಿವಿರುವ ಜೀವ ಸೂತ್ರ
ಸಡಲಿಸಿದರೂ ದಿಕ್ಕಾಪಾಲಾಗದು
ವಿಶ್ರಮಿಸಿಕೊ ನೀನೂ
ಅರೆಘಳಿಗೆ
ಜೊತೆ ಸಾಗುವ ತುಸು
ದೂರ
ಕ್ಷಿತಿಜಕ್ಕಂಟಿದ
ನೆಂಟನೆ
8 comments:
'ಕ್ಷಿತಿಜಕ್ಕಂಟಿದ ನೆಂಟ' ಅದ್ಭುತವಾದ ಪ್ರಯೋಗ.
ವಿಶ್ರಮಿಸಿಕೊಳ್ಳುವುದು ಅವನಿಗಲ್ಲದ ಕ್ರಮ - ಜೀವಕ್ರಮ!
ಸುಂದರವಾದ ಕವನ,
ಹೇಳಬೇಕೆನಿಸುತ್ತಿದೆ...’ ಬರೆದ ಕವನ ಮನ ಮುಟ್ಟಿದೆ... ಜೊತೆಗಿದ್ದರೂ ಒಬ್ಬಂಟಿಯಾಗಿ ಹೇಳಿದ ಕವನ ಸುಪರ್....
ನನ್ನಿ ಬದ್ರಿ. :)
ಧನ್ಯವಾದಗಳು ಸುನಾಥ್ ಕಾಕಾ. :)
ಹೌದು ದಿನಕರ್ ನಿಜ... ಸ್ನೇಹಿತರೊಬ್ಬರು ಕ್ಲಿಕ್ಕಿಸಿದ ಫೋಟೊ ಒಂದು ಈ ಕವನಕ್ಕೆ ಸ್ಪೂರ್ತಿಯಾದ್ದರಿಂದ ಇದು ಸಾಧ್ಯವಾಗಿದ್ದು. :-) ನನ್ನಿ. :-)
Post a Comment