Wednesday, August 20, 2014

ಸ್ಥಿತೆ!

ಬದುಕಬೇಕು ಎಂದುಕೊಂಡರೂ
ಮಿಡಿಯುತ್ತಿಲ್ಲ ಈ ಹೃದಯ
ಸತ್ತಿದ್ದೇನೆ ಬಲ್ಲೆ ನಾ
ಅದಕ್ಕೇ ನೋವು ನಲಿವಿನ
ಜಾಗದಲ್ಲೀಗ ನಿರ್ಲಿಪ್ತತೆ
ಈಗಲೂ
ಸುಮ್ಮ ಸುಮ್ಮನೆ ಅಬ್ಬರಿಸುತ್ತೇನೆ
ತುಟಿಕಚ್ಚಿ ಉಮ್ಮಳಿಸುತ್ತೇನೆ
ಕೇಕೆ ಹಾಕಿ ನಗುತ್ತೇನೆ
ಎಲ್ಲವೂ ಸಮಾಧಿಯ ಮೇಲೆ
ಮೊರೆವ ಗಾಳಿ ಅಷ್ಟೆ
ಒಳಗೆ ಹಿಮ ಮೌನ.

4 comments:

Badarinath Palavalli said...

ಹೊರ ಜಗತ್ತಿಗೆ ನಗುತ್ತಾ ಕಾಣಿಸಿಕೊಂಡರೂ ಸಹ ಆಂತರ್ಯದಿ ನೊಂದವರ ಮೌನ ರೋಧನದ ಸ್ಥಿತಿಯನ್ನು ಮನ ಮಿಡಿಯುವಂತೆ ಕಟ್ಟಿಕೊಟ್ಟ ಪುಟ್ಟ ಕವನ.
Short and powerful.

ಶಿವಪ್ರಕಾಶ್ said...

wonderful...



ಮನಸು said...

ಹಿಮ ಮೌನ...!! ಚೆಂದದ ಕವನ

Jayalaxmi said...

ನನ್ನಿ ಬದ್ರಿ.ಶಿವಪ್ರಕಾಶ್, ಸುಗುಣಾ. _/\_