Sunday, November 16, 2014

ಗುಂಡು ಬೆಂಡು

ತಮ್ಮ ಸಂಬಂಧದ ಕುರಿತು ಅವನು ಸದಾ ಅನೈತಿಕತೆಯ ಎಚ್ಚರದಲ್ಲಿ ತೇಲುತ್ತಿದ್ದ. 
ಅವಳು ಪವಿತ್ರತೆಯ ಧನ್ಯತೆಯಲಿ ಮುಳುಗಿರುತ್ತಿದ್ದಳು. 
ನಿಯಮದಂತೆ ಎಚ್ಚರದಿಂದದ್ದವನು ಎದ್ದು ನಡೆದ. 
ಮುಳುಗಿದವಳು ಒಬ್ಬಂಟಿಯಾಗಿ, ಉಸಿರಿಗಾಗಿ ಪರದಾಡುತ್ತಿದ್ದಳು. 
ತೇಲಲಿ ಅದು ಗುಂಡು, ಮುಳುಗಲಿ ಅದು ಬೆಂಡು... 
- ಜಯಲಕ್ಷ್ಮೀ ಪಾಟೀಲ್


5 comments:

Srikanth Manjunath said...

ಗುಂಡಾಗಲಿ ಬೆಂಡಾಗಲಿ ಮುಳುಗಿದ್ದು ತೇಲಲಿ ತೇಲಿದ್ದು ಮುಳುಗಲಿ

ಎರಡು ಆಯಾಮದ ಚಿಕ್ಕ ಆದರೆ ತುಂಬಾ ತುಂಬಾ ದೊಡ್ಡ ಪ್ರಪಂಚಕ್ಕೆ ತೆರೆದುಕೊಳ್ಳುವ ದೊಡ್ಡ ಕಥೆ

ಸೂಪರ್ ಮೇಡಂ

Jayalaxmi said...

ನನ್ನಿ ಶೀಕಾಂತ್.

Badarinath Palavalli said...

ಹೋಲಿಕೆ ಸರಿಯಾಗೇ ಇದೆ.
ಅಪರೂಪಕ್ಕೆ ಪಾತ್ರ ಅದಲು ಬದಲಾಗುವ ಅಪವಾದಗಳೂ ಇಲ್ಲದಿಲ್ಲ.

Jayalaxmi said...

ಹೌದು ಬದ್ರಿ, ಅಪರೂಪಕ್ಕೆ.

Anonymous said...

Chennagide jaylaxmi avre...nammanta gandasrunna indirect agi kutukiddira....sharath(age 30)....ishtralle maduve agtaidin adre henditna muddagi nodkotini