ಏನಿದು ನೂಕುನುಗ್ಗಲು!
ನಿಧಾನ ನಿಧಾನ ಸಾವಧಾನ
ನನಗೇನಿಲ್ಲ
ಧಾವಂತದಲ್ಲಿ ನಿಮಗೇ ಪೆಟ್ಟಾದೀತು
ಅನ್ನುವ ಅಳುಕು ಮತ್ತೇನಿಲ್ಲ
ನಾನಿಲ್ಲೇ ಇರುತ್ತೇನೆ ಬನ್ನಿ
ನೀನು ನಮ್ಮವಳು ಎನ್ನಿ
ಆಲಂಗಿಸಿ, ಇರಿಯಿರಿ
ಬೆನ್ನಿರಿತಗಳು ಹೊಸತಲ್ಲ
ಅಂತೆಯೇ
ಈಗ ನೋಯುವುದಿಲ್ಲ
ಬನ್ನಿ ನನ್ನವರೇ ಬನ್ನಿ
ನಿಧಾನ ಸಾವಧಾನ
- ೨೮ ಏಪ್ರಿಲ್ ೨೦೧೫
2 comments:
ಈ ಕವನವನ್ನು ಒಂದು ಟೀ ಷರ್ಟ್ ಬೆನ್ನ ಮೇಲೆ ಮುದ್ರಿಸಿಕೊಂಡು ದಿನ ಧರಿಸುವವನಿದ್ದೇನೆ! :-(
ಅರ್ಥಪೂರ್ಣ ಕವನವನ್ನು ಓದಿದ ಖುಶಿ ಸಿಕ್ಕಿತು.
Post a Comment