ಬಗ್ಗಡವನ್ನೆಲ್ಲ ತಳಕೆ ತಳ್ಳಿ ಕಸದಿಂದ ರಸ ಸೋಸಿ
ಅದರಲ್ಲೊಂದಿಷ್ಟು ಹೂಗಳನ್ನರಳಿಸಿಕೊಂಡು
ತನ್ನ ಪಾಡಿಗೆ ತಾನಿತ್ತು ಶಾಂತವಾಗಿ ತಿಳಿ ನೀರ ಸರೋವರ
ತರಲೆ ಸುಬ್ಬನೊಬ್ಬನಿಗೆ ತರಂಗಗಳ ನೋಡುವ ಬಯಕೆ
ದಡದಿ ನಿಂತು ಕಲ್ಲೊಂದ ಬೀಸಿದ ಸೂಂಯ್ಯೆಂದು
ಬುಗುರೆಯ ಚಾಟಿಯ ತೆರೆದಿ ಅಡ್ಡಡ್ಡಲಾಗಿ
ಶಾಂತತೆ ಕಲಕಿ ಕಲ್ಲು ಕೆದಕುತಿರೆ ತಳದ ಕೆಸರ
ಅಲೆಅಲೆಯಾಗಿ ದಡ ತಲುಪಿ ಮರಳುತಿದ್ದವು
ನೋವ ಭಾವಗಳು ಕೊಳದ ಮುಖದಲಿ
ಬೀಸಿದ ಕಲ್ಲು ಎದೆಗೆ ನಾಟಿ ಮುಲುಗತೊಡಗಿತು ಕೊಳ
ಬಯಸಿದ್ದು ನೆರವೇರಿ ಕಲ್ಲೆಸೆದವನ ಮುಖ ಕಮಲದಂತರಳಿತ್ತು
- (ಮಾರ್ಚ್ ೨೦ - ೨೦೧೫)
ಅದರಲ್ಲೊಂದಿಷ್ಟು ಹೂಗಳನ್ನರಳಿಸಿಕೊಂಡು
ತನ್ನ ಪಾಡಿಗೆ ತಾನಿತ್ತು ಶಾಂತವಾಗಿ ತಿಳಿ ನೀರ ಸರೋವರ
ತರಲೆ ಸುಬ್ಬನೊಬ್ಬನಿಗೆ ತರಂಗಗಳ ನೋಡುವ ಬಯಕೆ
ದಡದಿ ನಿಂತು ಕಲ್ಲೊಂದ ಬೀಸಿದ ಸೂಂಯ್ಯೆಂದು
ಬುಗುರೆಯ ಚಾಟಿಯ ತೆರೆದಿ ಅಡ್ಡಡ್ಡಲಾಗಿ
ಶಾಂತತೆ ಕಲಕಿ ಕಲ್ಲು ಕೆದಕುತಿರೆ ತಳದ ಕೆಸರ
ಅಲೆಅಲೆಯಾಗಿ ದಡ ತಲುಪಿ ಮರಳುತಿದ್ದವು
ನೋವ ಭಾವಗಳು ಕೊಳದ ಮುಖದಲಿ
ಬೀಸಿದ ಕಲ್ಲು ಎದೆಗೆ ನಾಟಿ ಮುಲುಗತೊಡಗಿತು ಕೊಳ
ಬಯಸಿದ್ದು ನೆರವೇರಿ ಕಲ್ಲೆಸೆದವನ ಮುಖ ಕಮಲದಂತರಳಿತ್ತು
- (ಮಾರ್ಚ್ ೨೦ - ೨೦೧೫)
2 comments:
ಕಲ್ಲು ಎಸೆದವನಿಗೆಂತ ವಿಕೃತಿ. ತಿಳಿಯಾಗ ಬಿಡನವನು ಬಗ್ಗಡ!
ಶಾಂತತೆಯ ಬಂಧನದಲ್ಲಿದ್ದ ತರಂಗಗಳಿಗೆ ಸದ್ದು ಮಾಡುವ ಮನಸ್ಸಿನಿಂದ ಬಿಡುಗಡೆ ಸಿಕ್ಕಿ ನಲಿವ ರೀತಿಯದು. ಇಲ್ಲ ಅಂತೀರಾ.
Post a Comment