ಬದುಕಿನ ಬಣ್ಣ ಇದಿಷ್ಟೇಯೇನೋ ಅಣ್ಣಾ?
ಹಸಿರ ಸಮೃದ್ಧಿಗೆ ಹಸನ ಮನಸು
ನಸುಗೆಂಪ ಲಜ್ಜೆಯಲಿ ನೆಲದ ಹಲಗೆಯ ಮೇಲೆ
ಬರೆದ ಅಕಾರವಿಲ್ಲದ ಒಲುಮೆಯ ಚಿತ್ತಾರ
ಬಯಕೆಯ ಚಿತ್ತದ ತುಂಬಾ ಕಾಮನಬಿಲ್ಲು
ಪೂರ್ವಾಗ್ರಹ ಗೊತ್ತಲ್ಲ ಯೆಲ್ಲೋ ಎಲೋ ಡರ್ಟಿ ಫೆಲ್ಲೊ
ಕೂಪ ಮಂಡೂಕದ ಕೋಪಕ್ಕೆ ಕೆಂಪಂತೆ ಕೊಳದ ನೀರು
ನೀಲಿಗಟ್ಟಿದ ದ್ವೇಷದ ಮೂತಿ ಪ್ರೀತಿ ಮರೆತ ಜಾತಿ
ಅವಮಾನ ಕಪ್ಪು ಕಪ್ಪು ಕಪ್ಪು ಧಿಕ್ಕಾರ!
ಪ್ರತಿಭಟನೆ ಪ್ರತಿಕಾರ ರಂಗೇರಿ ಎಲ್ಲೆಲ್ಲೂ ಹಾಹಾಕಾರ್
ತಳಮಳವದು ನೋಡು ನಾನಾ ಆಕಾರ
ಭಯಕೆ ಸಮೃದ್ಧಿ ಬಿಳುಪೇರಿ ಶಾಂತಿ ಸಂಧಾನ...
ಇನ್ನೆಲ್ಲೋ ಮತ್ತೆ ಚಿಗುರೊಡೆವ ಹಸಿರು
-ಜಯಲಕ್ಷ್ಮೀ ಪಾಟೀಲ್
No comments:
Post a Comment