ಅವಳೊಬ್ಬಳಿದ್ದಳು, ತನ್ನವನ ದೃಷ್ಟಿಯನ್ನು ಸಂಧಿಸಲು ಹರ ಸಾಹಸ ಮಾಡಿ ಸೋಲುತ್ತಿದ್ದ ಹುಡುಗಿ. ಅವನಿದಿರು ಅವಳ ರೆಪ್ಪೆಗಳು ಯಾವ ಪರಿಯಾಗಿ ಲಜ್ಜೆಯಿಂದ ಭಾರಗೊಳ್ಳುತಿದ್ದವೆಂದರೆ ಆ ಭಾರಕ್ಕೆ ಅವಳ ಶಿರ ಬಾಗುತ್ತಿತ್ತು !
ಇನ್ನೊಬ್ಬಳು... ತನ್ನವನ ಕಣ್ಣುಗಳಲ್ಲಿ ತಮ್ಮ ಪ್ರೀತಿಯ ಪಳೆಯುಳಿಕೆಗಳನ್ನು ಹುಡುಕಿ ಸೋತಾಕೆಯ ಶಿರ ಬಾಗುವುದು ಬಿಡಿ, ಕಣ್ರೆಪ್ಪೆ ಒಂದಾಗುವುದು ಸಹ ಮರೆತಂತಿದ್ದವು..
ಮೊತ್ತಬ್ಬಳಿದ್ದಳು, ತನ್ನವನು ಮತ್ತೊಬ್ಬನಾಗಿ ಮಾತಾಡುತ್ತಾ ಕುಳಿತ ಸಮಯ ಕಣ್ಣಲ್ಲಿ ನಿರ್ಲಿಪ್ತತೆಯ ನಟಿಸಿ, ಮನದಲ್ಲಿ ರೋಧಿಸುತ್ತ ತುಟಿಯಲ್ಲಿ ನಗುವರಳಿಸಿ ಕುಳಿತಾಕೆ...
57 comments:
ಅದ್ಭುತವಾದ ಸಾಲುಗಳು...
ನಕ್ಕು ತನ್ನ ಪ್ರಿಯಕರನಿಗೆ 'ಸರಿ' ಎಂದೆಳುವ ಪರಿ ಚೆನಾಗಿದೆ... ಮನದ ಬಾಗಿಲು ಮುಚಲು ಕಾರಣ ಆ ನೆನಪುಗಳು ಸದಾ ಅವಳಲ್ಲೇ ಇರಲೆಂದು :)
ತುಂಬಾ ಚೆನ್ನಾಗಿ ಬರೆದಿದ್ದಿರಾ...keep it up :)
Waw! Adbhutha!!
ವಿವಿಧ ವಿಪರ್ಯಾಸ ಮನಗಳಲ್ಲಿನ "ಅವಳ" ಚಿತ್ರಣ ಸೊಗಸಾಗಿದೆ.
ಜಯಲಕ್ಷ್ಮಿ ,ತುಂಬಾ ಸೂಕ್ಷ್ಮವಾದ ,ಹೆಣ್ಣಿನ ಪ್ರೀತಿಯ ಅರಕೆಯ ಬಹುರೂಪಗಳನ್ನು ತೆರೆದಿದ್ದೀರಿ .ಚೆನ್ನಾಗಿದೆ.
‘ಕಣ್ಣಲ್ಲಿ ಪ್ರೀತಿಯ ಶವ’ ಹೆಣ್ಣ ತುಡಿತವನ್ನು ಪದಗಳ ಹನಿಯಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದೀರ.. ತುಂಬಾ ಚೆನ್ನಾಗಿದೆ..
ಹೋಗುತ್ತೇನೆ ಎಂದವನನ್ನು ತಡೆಯದೆ ’ಸರಿ’ ಎಂದು ಮನದ ಕದವಿಕ್ಕಿಕೊಳ್ಳುವ ಪರಿ ನೋವುಂಟು ಮಾಡಿತಾದರೂ... ಅದೇ ಸರಿ ಅನ್ನಿಸ್ತು... ಚೆನ್ನಾಗಿದೆ
ಶ್ಯಾಮಲ
ಓದಿದೆ ಜಯಲಕ್ಷ್ಮಿ ಮೇಡಂ... ಅವರೆಲ್ಲ ಒಬ್ಬರೇ ಆಗಿರೋ ಸಾಧ್ಯತೆಗಳು ಇದೆ ಅನ್ಸತ್ತೆ..
ಇಷ್ಟೊಂದು ಆಳವಾಗಿ ಬರೆಯೋದನ್ನ ನಾವೆಲ್ಲಾ ಯಾವಾಗ ಕಲೀತೀವೋ? ತುಂಬಾ ಚೆನ್ನಾಗಿದೆ...
ಅವನಿದಿರು ಅವಳ ರೆಪ್ಪೆಗಳು ಯಾವ ಪರಿಯಾಗಿ ಲಜ್ಜೆಯಿಂದ ಭಾರಗೊಳ್ಳುತಿದ್ದವೆಂದರೆ ಆ ಭಾರಕ್ಕೆ ಅವಳ ಶಿರ ಬಾಗುತ್ತಿತ್ತು !
.......kenakida aksharagalivu...
thumba chanagide.....
ಅಬ್ಬಾ..! ಅದ್ಭುತವಾಗಿದೆ..
Thumbha Thumba Chennagidhe....
Adhbutha....
ಥ್ಯಾಂಕ್ಸ್ ಮಾನಸ, ನಿಮ್ಮ ಪ್ರೋತ್ಸಾಹಕ್ಕೆ...:-)
ಧನ್ಯವಾದ ಸಂದೀಪ ನಡಹಳ್ಳಿಯವರೆ.:-)
ಸೀತಾರಾಮ್ ಸರ್, ಧಾನ್ಯವಾದಗಳು.:)
ಪಾರ್ವತಿಸಿಂಗಾರಿ ಹೆಸರಿನಿಂದ ಈ ಮುಂಚೆ ಪರಿಚಯವಾದ `Ba ಅವರೆ, ನಿಮ್ಮ ಮೌಲಿಕ ಅಭಿಪ್ರಾಯಗಳಿಗೆ ತುಂಬಾ ಥ್ಯಾಂಕ್ಸ್. :)
ಥ್ಯಾಂಕ್ಸ್ ಜಾಗೃತಿಯವರೆ:)
:)ಥ್ಯಾಂಕ್ಸ್ ಶ್ಯಾಮಲಾ..
:) :) ರಮೇಶ್ ಸರ್ ಏನ್ ಹೀಗ್ ಹೇಳ್ತೀರಿ? ನಿಮ್ಮ ಬರಹಗಳನ್ನು ನಾನು ಓದಿದೀನಿ. ಅವುಗಳ ಮುಂದೆ ಎಳಸು ಇವೆಲ್ಲ... ಮೆಚ್ಚುಗೆಗೆ ಥ್ಯಾಂಕ್ಸ್.:)
ಹೃದಯದ ಮಾತುಗಳನ್ನು ಕೇಳೊ ಶಿವಕವಿಗೆ ಸ್ವಾಗತ.:)ಥ್ಯಾಂಕ್ಸ್.
ಥ್ಯಾಂಕ್ಸ್ ವಿನಾಯಕ್ ಅವರೆ.:)
ದಿಲೀಪ್, ನಿಮ್ಮ ವ್ಯಂಗ್ಯಚಿತ್ರಗಳನ್ನು ನಿಮ್ಮ ಬ್ಲಾಗಿನಲ್ಲಿ ನೋಡಿದೆ. ಚೆನ್ನಾಗಿವೆ.ಇಷ್ಟವಾದವು. ಬರಹವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.
:) :) ನಿಮ್ಮ ಮೆಚ್ಚುಗೆಗೆ ಮತ್ತೊಮ್ಮೆ ಥ್ಯಾಂಕ್ಸ್ ಸೂರ್ಯನಾರಾಯಣ ಅವರೆ.:):)
ಅಂಥಾ ಒಬ್ಬೊಬ್ಬರೂ ಒಂದೊಂದು ಆಯಾಮ ..
ಅವರ ನೋಟವೇ ಕಾವ್ಯ ..
ಬಾಗುವ ಬಳುಕುವ ತೆರೆವ ತೆಳುವ ಮುಚ್ಚುವ
ಕಂಗಳೊಳಗಿನ ಬೆಳಕಿನ ರೂಪಗಳು
ವ್ಹಾ! ಅರುಂಧತಿ,ತುಂಬಾ ಸುಂದರವಾಗಿ ವಿಮರ್ಶಿಸಿದಿರಿ! ಥ್ಯಾಂಕ್ಸ್.
Good one ....very nice
wow.. super statements :)
very nice
ಜಯಲಕ್ಷ್ಮಿ,ಹೆಣ್ಣಿನ ಪ್ರೀತಿಯ ನೋವಿನ ಕಿರುಕಿಂಡಿಯ ಬಾಗಿಲುಗಳನ್ನು ತೆರೆದಿದ್ದೀರಿ.ತುಂಬಾ ಚೂಪಾದ ,ಮೌನ ಮುರಿದ ಹೆಣ್ಣಿನ ಬರಹ.ಇದನ್ನು ಸಾಹಿತ್ಯ ಎನ್ನಬೇಕೆ ,ಬದುಕಿನ ಮುಚ್ಚಿದ ಕೋಣೆ ಎನ್ನಬೇಕೆ -ಇದು ಪ್ರಶ್ನೆಯಲ್ಲ, ಉತ್ತರ.
ನವಿರಾದ ಭಾವನೆಗಳನ್ನು ಸೊಗಸಾಗಿ ಬಿಡಿಸಿಟ್ಟಿದ್ದೀರಿ
ಈಗಿನ ಕಾಲದಲ್ಲಿ ಈ ಮಾತುಗಳು ಎಷ್ಟು ಹೋಲಿಕೆ ಆಗುತ್ತವೆ ಅನ್ನೋದನ್ನ ಒಮ್ಮೆ ಅವಲೋಕಿಸಬೇಕಿದೆ.
ಉತ್ತಮ ಬರಹ ಅಕ್ಕ.
ಈಶ್ವರ್ ಜಕ್ಕಲ್
ಶಿವಪ್ರಕಾಶ್
ನಿಶಾ
ಅಜೀತ್ ಸರ್
ಸಾಗರಿ
ಮೆಚ್ಚಿಕೊಂಡಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು. :) :)
ವಿವೇಕ್ ರೈ ಸರ್, :)ನಿಮ್ಮ ಅಭಿಪ್ರಾಯಗಳಿಗೆ ಅನಂತ ಧನ್ಯವಾದಗಳು.:)
ಆರ್ಯ ಅನ್ನಲಾ? ವಿನಯ್ ಅನ್ನಲಾ? :)ಕಾಲ ಎಷ್ಟೇ ಬದಲಾದರೂ, ಸೌಲಭ್ಯ, ಸವಲತ್ತುಗಳ ಮೂಲಕ ಜೀವನಕ್ರಮ ಬದಲಾಗಬಹುದೇ ಹೊರತು ಮನುಷ್ಯನ ಸ್ವಭಾವ, ಭಾವಲೋಕ ಬದಲಾಗೊಲ್ಲ ಅಂತ ನನ್ನ ಅನಿಸಿಕೆ. ಎಲ್ಲರೂ ಅವರವರ ಕಾಲದಲ್ಲಿ ಆಧುನಿಕ ಯುಗದವರೇ ಅಲ್ಲವೆ? :)
ವಿವಿಧ ಭಾವನೆಗಳ ಮುಖಗಳನ್ನು ಸೊಗಸಾಗಿ ಮೂಡಿಸಿದ್ದೀರಿ.
ಕಾಕಾ, ಖರೇನ ನಾ ನಿಮ್ ಕಮೆಂಟ್ನ ದಾರಿ ಕಾಯ್ದು ಬ್ಲಾಗ್ ನೋಡ್ಲಿಕ್ಕೆ ಟೈಮ್ ಸಿಕ್ಕಿಲ್ಲೇನೊ ಅಂತ ಅನ್ಕೊಂಡು ಸುಮ್ನಾಗಿದ್ದೆ.ಅಂತೂ ಬಂದ್ರ್ಯಲ್ಲ, ಥ್ಯಾಂಕ್ಸ್ ಕಾಕಾ..:)
ಇಲ್ಲೊಬ್ಬರು-ಚೆನ್ನಾಗಿದೆ ಅಂತಾರೆ..
ಸರಿಯಾಗಿ
ಪೋಣಿಸಿ
ಪೋಣಿಸಿ
ಬರ್ದಿದ್ದೀರಿ..
Nice!
-RJ
ಆ ಇನ್ನೊಬ್ಬರಿಗೆ ಮತ್ತು ನಿಮಗೆ ತುಂಬಾ ಥ್ಯಾಂಕ್ಸ್ ಅನಾಮಿಕ(RJ) ಸ್ನೇಹಿತರೆ..:)ನೀವು ಅನಾಮಿಕರಾಗಿದ್ದ ಕಾರಣ ತಿಳಿಯಲಿಲ್ಲ...:)
ಅವಳೊಬ್ಬಳಿದ್ದಳು,ಇನ್ನೊಬ್ಬಳು,ಮತ್ತೊಬ್ಬಳಿದ್ದಳು,ಮಗದೊಬ್ಬಳು..
ಇವರೆಲ್ಲರಿಗೆ supporting prefix ಎಂಬಂತೆ 'ಇಲ್ಲೊಬ್ಬರು' ಎಂದು ಬರೆದೆ.
ಬರೆಯುತ್ತ ಇರಿ.Good going.
:-)
-ರಾಘವೇಂದ್ರ ಜೋಶಿ
ಮೊದಲು ನಾನೂ ನೀವು ಬರೆದಂತೆಯೆ ಅಂದುಕೊಂಡೆ, ನಂತರ ಇರಲಾರದು ಎಂದೆಣಿಸಿ ಹಾಗೆ ಬರೆದೆ.:-) ಥ್ಯಾಂಕ್ಸ್ ರಾಘವೇಂದ್ರ ಸರ್.:)
"ಮನದ ಕದವಿಕ್ಕಿ ಗಾಳಿಯೂ ನುಸುಳದಂತೆ ಬೀಗ ಜಡೆದಳು"
ಹೆಣ್ಣಲ್ಲಿ ಈ ಗಟ್ಟಿತನ ಬೇಕು.
"ಕಣ್ಣಾಲಿಯಲಿ ತೇಲಿಸುತ್ತ ಪ್ರೀತಿಯ ಶವ..."
ಊಂಹೂಂ.. ಈ ಸಾಲುಗಳು ಇಷ್ಟವಾಗಲಿಲ್ಲ. ಅದು ಬಹುಶಃ ಸಂಬಂಧದ ಶವವಾಗಿರಬಹುದೇನೋ! ’ಅವನ’ ಮೇಲೆಯೇ ಅವಳ ವ್ಯಕ್ತಿತ್ವದ ಅಸ್ತಿತ್ವ ನಿಂತಿತ್ತೇ?
ಇನ್ನು ’ಪಳವುಳಿಕೆ’ ಎಂಬುದು ಹೊಸ ಶಬ್ದ ನನಗೆ. ’ಪಳೆಯುಳಿಕೆ’ ಕೇಳಿದ್ದೇನೆ. ’ಪಳವುಳಿಕೆ’ ಎಂಬುದು ಅದರ ಅಪಭ್ರಂಶವೇ?
ಎರಡು ವಿಷಯಕ್ಕೆ ನಿಮಗೆ ನಾನು ಥ್ಯಾಂಕ್ಸ್ ಹೇಳಬೇಕು ಅವಿನಾಶ್,ನೀವು ಅಷ್ಟೊಂದು ಬ್ಯೂಸಿ ಇದ್ದಾಗ್ಯೂ ಸಹ ಬಿಡುವು ಮಾಡಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಮತ್ತು ತಪ್ಪಿದ ನನ್ನ ಕಾಗುಣಿತವನ್ನು ಗುರುತಿಸಿ ತಿದ್ದಿದ್ದಕ್ಕೆ. ಹೌದು ಅದು ‘ಪಳೆಯುಳಿಕೆ’ ಆಗಬೇಕಿತ್ತು :) ಪಳೆಯ(ಹಳೆಯ)+ಉಳಿಕೆ=ಪಳೆಯುಳಿಕೆ.:) :) ತಿದ್ದಿಕೊಳ್ಳುತ್ತೇನೆ.ಥ್ಯಾಂಕ್ಸ್.:)
ಬರೀ ಹೆಣ್ಣಲ್ಲಿ ಮಾತ್ರವಲ್ಲ ಗಂಡಲ್ಲೂ ಆ ಗಟ್ಟಿತನವಿರಬೇಕು. ಪ್ರೀತಿ ಜೀವಂತವಾಗಿರುವವರೆಗೆ ಆ ಗಟ್ಟಿತನ ಸ್ವಲ್ಪ ಕಷ್ಟವೆ...
‘ಯಾವುದೇ’ ಸಂಬಂಧ ಶವವಾಗುವುದು ಆ ಸಂಬಂಧದಲ್ಲಿರುವ ಆತ್ಮೀಯತೆ,ಪ್ರೀತಿ ಸತ್ತಾಗಲೆ ಅಲ್ಲವೆ? ಪ್ರೀತಿ, ಅಕ್ಕರೆ,ಕಾಳಜಿ (ಈ ಮೂರೂ ಒಂದಕ್ಕೊಂದು ಪೂರಕ ಅಥವಾ ಇವು ತ್ರಿವಳಿಗಳು!) ಇಲ್ಲದ ಸಂಬಂಧ ಶವಕ್ಕೆ ಸಮಾನ.ಅಲ್ಲಿಗೆ ಪ್ರೀತಿ ಸತ್ತನಂತರವಷ್ಟೆ ಅದರ ಮೂಲಕ ಸಂಬಂಧವೂ ಸಾಯುವುದು ಅಥವಾ ಶವವಾಗುವುದು.
ಅವಿನಾಶ್ ಅವರೆ, ಬರೆಯುವುದ ಮರೆತೆ..." ’ಅವನ’ ಮೇಲೆಯೇ ಅವಳ ವ್ಯಕ್ತಿತ್ವದ ಅಸ್ತಿತ್ವ ನಿಂತಿತ್ತೇ?" ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುವುದ ಮರೆತೆ. ಪ್ರೀತಿಯೇ ಅವಳ ವ್ಯಕ್ತಿತ್ವ, ಅಸ್ತಿತ್ವ ಅಂತ ನೀವು ಅನ್ನುವಿರಾದರೆ ಹೌದು ಎಂದು ಉತ್ತರಿಸಬೇಕಾದೀತೇನೊ.. ಆದರೆ ಪ್ರೀತಿ ಅನ್ನುವುದು ಪ್ರತಿಯೊಬ್ಬ ಮನುಷ್ಯನ ಬೇಡಿಕೆ. ನಾವು ಯಾರನ್ನೆಲ್ಲ ವಿಲನ್/ವ್ಯಾಂಪ್ ಅಥವಾ ದುಷ್ಟರು ಅಂತ ಕರೀತೀವೋ ಅವರಿಗೂ ಸಹ ಪ್ರೀತಿ ಬೇಕು. ಪ್ರೀತಿ ಜೀವ ಸೆಲೆ. ಇಲ್ಲಿ ವ್ಯಕ್ತಿತ್ವ, ಅಸ್ತಿತ್ವದ ಪ್ರಶ್ನೆಯೇ ಬರುವುದಿಲ್ಲ. ವ್ಯಕ್ತಿತ್ವ ಅಸ್ತಿತ್ವ ರೂಪಗೊಳ್ಳುವುದು ಅಯಾ ವ್ಯಕ್ತಿಯ ‘ವಿಚಾರ-ಆಚಾರ’ಗಳಿಂದ ಅಲ್ಲವೆ?
!!
ಚೆನ್ನಾಗಿದೆ ನಿಮ್ಮ ಕಲ್ಪನೆ.
ನಿಮ್ಮವ,
ರಾಘು.
ತುಂಬಾ ಅರ್ಥ ಗರ್ಭಿತ ಬರಹ
ಧನ್ಯವಾದ ಗುರು ಬಬ್ಬಿಗದ್ದೆಯವರೆ.(ಸಾಗರದಾಚೆಯ ಇಂಚರ)
ವಾವ್ ತುಂಬ ಚೆನ್ನಾಗಿವೆ ಬರಹ
ಕಣ್ಣಾಲಿಯಲಿ ತೇಲಿಸುತ್ತ ಪ್ರೀತಿಯ ಶವ...
ಅದ್ಭುತ ಕಲ್ಪನೆ..ಹೆಣ್ಣು ಅ೦ದರೆ ನವಿರು ಭಾವಗಳನ್ನು ಮಾತ್ರ ಬಿ೦ಬಿಸುವ /ಹೊರಹಾಕುವ ಚಿತ್ರಣಗಳು ಇಲ್ಲಿ ಹೊರತಾಗಿದೆ / ಹರಿತವಾಗಿದೆ.
ಶುಭಾಶಯಗಳು
ಅನ೦ತ್
Kanninalli adestu arthagalanna kalpisiddiira...!!!! tumba chenaagide baraha...!!!
ಥ್ಯಾಂಕ್ಸ್ ರಾಘು. :-)
ಮೆಚ್ಚುಗೆಗೆ ಥ್ಯಾಂಕ್ಸ್ ದೀಪ್ಸ್ಮಿತ ಅವರೆ. :-)
ಧನ್ಯವಾದ ಅನಂತ್ರಾಜ್ ಸರ್. :-)
ಥ್ಯಾಂಕ್ಸ್ ವಿನಯ್ ಹೆಗ್ಡೆ ಅವರೆ.:)
ನಿಮ್ಮ ಕವನಗಳು ಓದಲು ಬಲು ಮುದ್ದಾಗಿವೆ . ಅದರ ಅರ್ಥ , ಅರ್ಥ ಪೂರ್ಣವಾಗಿದೆ . ನಾನು ನಿಮ್ಮ ಬ್ಲಾಗ್ ನ್ನು ಇದು ಮೊದಲಬಾರಿಗೆ ಓದಿದ್ದು . ಕವನಗಳು ಮೊಡಿಬಂದ ರೀತಿ ತುಂಬಾ ಚನ್ನಾಗಿದೆ . ಸಮಯ ಸಿಕ್ಕಾಗ ನನ್ನವಳಲೋಕಕ್ಕೆ ಒಮ್ಮೆ ಬನ್ನಿ (www.nannavalaloka.blogspot.com) ನಿಮ್ಮನ್ನು ಸ್ವಾಗತಿಸುತ್ತೇನೆ
ಸತೀಶ್ ನ ಗೌಡ
www.nannavalaloka.blogspot.com
ಥ್ಯಾಂಕ್ಸ್ ಸಂತೋಷ್ ಅವರೆ. ಖಂಡಿತ ಬಿಡುವಿನಲ್ಲಿ ನಿಮ್ಮ ಬರಹಗಳನ್ನು ಓದುವೆ. :) ಬರೆಯುತ್ತಿರಿ.
ನಿಜ ಹೇಳಬೇಕೆಂದರೆ
ಈಗ,
ನಿಮ್ಮ ಗದ್ಯ ಪದ್ಯಕ್ಕಿಂತ ಚೆನ್ನಾಗಿದೆ.
ನೀವು ಹೆಚ್ಚು ಹೆಚ್ಚು
ಗದ್ಯದಲ್ಲೇ ಬರೆಯಿರಿ.
ಗದ್ಯದ ಮೇಲೆ ನಿಮ್ಮ ಹಿಡಿತ ಚೆನ್ನಾಗಿದೆ.ನವಿರಾದ ಭಾವನೆಗಳನ್ನು ಸುಂದರವಾಗಿ ಹಿಡಿದಿಡುವ ನಿಮ್ಮ ರೀತಿ ಅದ್ಭುತವಾಗಿದೆ.
ಮತ್ತೆ ಗದ್ಯದ ಮೇಲೆ ಹಿಡಿತಸಾಧಿಸುವುದು ತುಂಬಾ ಕಷ್ಟದಕೆಲಸ.ನಿಮಗೆ ಅದು ಅನಾಯಾಸವಾಗಿ ಸಿದ್ದಿಸಿದೆ ಜಯಲಕ್ಶ್ಮಿಯವರೆ.
ನನ್ನ ಅನಿಸಿಕೆಯನ್ನು ಬರೆದೆ ಅಷ್ಟೇ..
ಅನ್ಯಥಾ ಭಾವಿಸದಿರಿ.
ಸೂಪರ್... :-)
ಯಾಕೋ ಗೊತ್ತಿಲ್ಲ...ನಿಮ್ಮ ಈ ಕೆಲ ಸಾಲುಗಳು ತುಂಬಾ ಹತ್ತಿರದವು ಅನಿಸಿಬಿಟ್ಟಿತು! ಅದ್ಬುತವಾಗಿದೆ!
Post a Comment