Wednesday, May 13, 2015

ಬದುಕ ಬಯಕೆ

ಮುಳ್ಳಾವುಗೆ ಮೇಲಿನ ಕಸರತ್ತು
ನಾಗನರ್ತನ ಧೀಂ ತನನ
ಬದುಕಿದು ನಾಗಬನ
ನುಲಿಯುತ್ತದೆ ನಲಿಯುತ್ತದೆ 
ನಿಲ್ಲಲು ತವಕಿಸಿ ನೋಯುತ್ತದೆ
ಬುಸುಗುಟ್ಟುವ ಬಿಸಿಲು ಬಯಕೆ 
ಸುಡುತ್ತದೆ ತನುವನ್ನ 
ಮನವದೊ ತಣ್ಣಗೆ ಹಿಮ ಕೊರಡು
ಮೈ ಹಿಮವಾದರೆ ಅಗ್ನಿಸ್ಪರ್ಶ
ಮನಸಿಗಾವ ಸಂಸ್ಕಾರ?

                                    - ೦೬ ಮೇ ೨೦೧೫

1 comment:

Badarinath Palavalli said...

ಇಡೀ ಬದುಕಿನ ಕ್ರೂರ ಮುಖವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೀರ.
ಭಾಷೆಯ ಸುಲಲಿತ ಬಳಕೆಗೆ ನಮ್ಮ ನಮನ.